

IND vs PAK: ಪ್ರಸ್ತುತ ದುಬೈನಲ್ಲಿ ನಡೆಯುತ್ತಿರುವ ಭಾರತ ಮತ್ತು ಪಾಕಿಸ್ತಾನ ನಡುವಿನ ಹೈವೋಲ್ಟೇಜ್ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿರುವ ಪಾಕಿಸ್ತಾನ, ಭಾರತಕ್ಕೆ ಬೌಲಿಂಗ್ ಮಾಡುವಂತೆ ಆಹ್ವಾನಿಸಿದೆ. ಅಂತೆಯೇ ಬ್ಯಾಟಿಂಗ್ ಮಾಡುತ್ತಿರುವ ಪಾಕ್ ಎರಡು ವಿಕೆಟ್ ನಷ್ಟಕ್ಕೆ 100 ರನ್ ಗಡಿದಾಟಿದ್ದು, ಅತ್ಯಧಿಕ ರನ್ ಕಲೆಹಾಕುವತ್ತ ಶ್ರಮಿಸುತ್ತಿದೆ. ಇನ್ನೂ ಆರಂಭಿಕ ಹಂತದಲ್ಲೇ ಸ್ಟಾರ್ ಬ್ಯಾಟರ್ಗಳಿಬ್ಬರು ವಿಕೆಟ್ ಪತನಗೊಂಡಿದ್ದು, ಭಾರತೀಯ ಅಭಿಮಾನಿಗಳಲ್ಲಿ ಭಾರೀ ಖುಷಿ ತಂದಿದೆ.
ಪಾಕಿಸ್ತಾನ ಪರ ಓಪನಿಂಗ್ ಆಡುತ್ತಿದ್ದ ಬಾಬರ್ ಆಜಮ್ರ ವಿಕೆಟ್ ಕಬಳಿಸುವ ಮೂಲಕ ತಂಡಕ್ಕೆ ಮೊದಲ ವಿಕೆಟ್ ತಂದುಕೊಟ್ಟ ಹಾರ್ದಿಕ್ ಪಾಂಡ್ಯ, ಬಾಬರ್ಗೆ ಬಾಯ್..ಬಾಯ್ ಎಂದು ಕೈಸನ್ನೆ ಮಾಡಿದ ದೃಶ್ಯಗಳು ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡಿದೆ. ಮೊದಲ ಹತ್ತು ಓವರ್ಗೂ ಮುನ್ನವೇ ವಿಕೆಟ್ ಕಬಳಿಸಿದ ಹಾರ್ದಿಕ್ಗೆ ಕ್ರೀಡಾಂಗಣದಲ್ಲಿ ಸೇರಿರುವ ಅಭಿಮಾನಿಗಳು ಮತ್ತಷ್ಟು ಹುರಿದುಂಬಿಸಿದರೆ, ಅವರೆಲ್ಲರನ್ನೂ ಮೀರಿಸುವ ವಿಶೇಷ ಅಭಿಮಾನಿಯೊಬ್ಬರು ಇದೀಗ ಕ್ಯಾಮರಾ ಕಣ್ಣಿನಲ್ಲಿ ಸಿಕ್ಕಿಬಿದ್ದಿದ್ದಾರೆ.
ಕಳೆದ ಕೆಲವು ದಿನಗಳಿಂದ ಹಾರ್ದಿಕ್ ಅವರ ಪ್ರೇಯಸಿ ಈಕೆ ಎಂಬ ವದಂತಿಗಳು ಜಾಲತಾಣಗಳಲ್ಲಿ ಭಾರೀ ಸದ್ದು ಮಾಡುತ್ತಿವೆ. ಬ್ರಿಟಿಷ್ ಸುಂದರಿ ಜಾಸ್ಮಿನ್ ವಾಲಿಯಾರನ್ನು ಪಾಂಡ್ಯ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ಹಲವಾರು ಸುದ್ದಿಗಳು ಸೋಷಿಯಲ್ ಮೀಡಿಯಾವನ್ನು ಸುತ್ತುವರೆದಿವೆ. ಇದೆಲ್ಲದಕ್ಕೂ ಪುಷ್ಠಿ ನೀಡುವಂತೆ ಇಂದು ದುಬೈ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಪಾಕ್-ಭಾರತ ಪಂದ್ಯಕ್ಕೆ ಆಗಮಿಸಿರುವ ಜಾಸ್ಮಿನ್, ಬಿಳಿ ಬಣ್ಣದ ಉಡುಗೆಯಲ್ಲಿ ಮಿಂಚಿದ್ದಾರೆ. ಹಾರ್ದಿಕ್ರನ್ನು ನೋಡುತ್ತ ಚಪ್ಪಾಳೆ ತಟ್ಟುತ್ತಿರುವುದು ದೃಶ್ಯಗಳಲ್ಲಿ ಸೆರೆಯಾಗಿದೆ. ಇದು ಪಾಂಡ್ಯ ಅಭಿಮಾನಿಗಳ ಹುಬ್ಬೇರಿಸಿದೆ.
ಭಾರತೀಯ ಮೂಲದ ಬ್ರಿಟಿಷ್ ಗಾಯಕಿ ಮತ್ತು ಟೆಲಿವಿಷನ್ ಇಂಡಸ್ಟ್ರಿಗೆ ಸೇರಿರುವ ಜಾಸ್ಮಿನ್ ವಾಲಿಯಾ, ತಮ್ಮ ಹಾಡುಗಳಿಂದಲೇ ಜನಪ್ರಿಯತೆ ಗಳಿಸಿದ್ದಾರೆ. ಅವರ 'ಬಾಮ್ ಡಿಗ್ಗಿ' ಎಂಬ ಹಾಡು ಭಾರತದಲ್ಲಿಯೂ ಸಾಕಷ್ಟು ಜನಪ್ರಿಯತೆಯನ್ನು ಗಳಿಸಿದೆ. ಇದರೊಟ್ಟಿಗೆ ನಟ ಕಾರ್ತಿಕ್ ಆರ್ಯನ್ ಅಭಿನಯದ ಬಾಲಿವುಡ್ ಸಿನಿಮಾ 'ಸೋನು ಕೆ ಟಿಟು ಕಿ ಸ್ವೀಟಿ' ನಲ್ಲಿಯೂ ಈಕೆ ಕಾಣಿಸಿಕೊಂಡಿದ್ದಾರೆ. ಸದ್ಯ ಹಾರ್ದಿಕ್ ಪಾಂಡ್ಯ ಜತೆಗೆ ಪ್ರೀತಿಯ ಸಂಬಂಧದಲ್ಲಿ ಬಿದ್ದಿರುವ ಜಾಸ್ಮಿನ್, ತಮ್ಮ ಪ್ರೀತಿಯ ಬಗ್ಗೆ ಇನ್ನೂ ಏಕೆ ಮೌನ ಮುರಿದಿಲ್ಲ ಎಂಬ ಪ್ರಶ್ನೆಗಳು ಸದ್ಯ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ,(ಏಜೆನ್ಸೀಸ್).