

Shubman Gill WTC: ಇದೇ ಅ.19ರಿಂದ ಆರಂಭಗೊಳ್ಳಲಿರುವ ಆತಿಥೇಯ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಮತ್ತು ಟಿ20 ಸರಣಿಗೆ ಟೀಮ್ ಇಂಡಿಯಾ ಸಜ್ಜಾಗಿದೆ. ಭಾರತೀಯ ಟೆಸ್ಟ್ ನಾಯಕನಾಗಿ ಅಧಿಕಾರ ವಹಿಸಿಕೊಂಡಾಗಿನಿಂದ, ತಂಡದ ಪರ ಅತಿ ಹೆಚ್ಚು ರನ್ ದಾಖಲಿಸಿರುವ ಶುಭಮನ್ ಗಿಲ್, ಇದೀಗ ಏಕದಿನ ತಂಡಕ್ಕೂ ನಾಯಕತ್ವ ವಹಿಸಿರುವುದು ಗಮನಾರ್ಹ. ಇದರ ಬೆನ್ನಲ್ಲೇ, ಅವರು ಅಪರೂಪದ ಸಾಧನೆಗೈದಿದ್ದು, ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ ದ್ವಿತೀಯ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ 35 ರನ್ ಗಳಿಸುವ ಮೂಲಕ ಮತ್ತೊಂದು ದಾಖಲೆಗೆ ತಮ್ಮ ಹೆಸರನ್ನು ಸೇರಿಸಿದ್ದಾರೆ.
ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (WTC) ಇತಿಹಾಸದಲ್ಲಿ ಭಾರತದ ಪರ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಎಂಬ ಹೆಗ್ಗಳಿಕೆಗೆ ಶುಭಮನ್ ಪಾತ್ರರಾಗಿದ್ದಾರೆ. ಈ ಹಿಂದೆ ಭಾರತ ಪರ ವಿಕೆಟ್ ಕೀಪರ್, ಬ್ಯಾಟರ್ ಆದ ರಿಷಭ್ ಪಂತ್ ಮತ್ತು 'ಹಿಟ್ಮ್ಯಾನ್' ರೋಹಿತ್ ಶರ್ಮ ದಾಖಲಿಸಿದ್ದ ರೆಕಾರ್ಡ್ ಅನ್ನು ಬ್ರೇಕ್ ಮಾಡುವ ಮೂಲಕ ಅವರನ್ನು ಹಿಂದಿಕ್ಕಿದ್ದಾರೆ. ಪಂತ್ 67 ಇನ್ನಿಂಗ್ಸ್‌ಗಳಲ್ಲಿ 2731 ರನ್ ಮತ್ತು ರೋಹಿತ್ ಶರ್ಮಾ ಅವರ 2716 ರನ್ಗಳನ್ನು ಮುರಿದಿರುವ ಗಿಲ್, ಆಡಿದ 71 ಇನ್ನಿಂಗ್ಸ್‌ಗಳಲ್ಲಿ 2771 ರನ್ ಬಾರಿಸಿದ್ದಾರೆ. ಈ ಮೂಲಕ ಡಬ್ಲ್ಯೂಟಿಸಿ ಇತಿಹಾದಲ್ಲಿ ಅತಿಹೆಚ್ಚು ರನ್ ದಾಖಲಿಸಿದ ಟೀಮ್ ಇಂಡಿಯಾ ಆಟಗಾರರ ಪೈಕಿ ಗಿಲ್ ಮೊದಲ ಸ್ಥಾನವನ್ನು ಅಲಂಕರಿಸಿದ್ದಾರೆ.
ಟೀಮ್ ಇಂಡಿಯಾದ ಮಾಜಿ ನಾಯಕ ರೋಹಿತ್ ಶರ್ಮಾ ಈ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದರೆ, ನಂತರದಲ್ಲಿ ವಿರಾಟ್ ಕೊಹ್ಲಿ ಮತ್ತು ಜಡೇಜಾ ಕ್ರಮವಾಗಿ ನಾಲ್ಕು ಮತ್ತು ಐದನೇ ಸ್ಥಾನದಲ್ಲಿದ್ದಾರೆ. ಅಸಲಿಗೆ ಅಗ್ರ 5 ಪಟ್ಟಿಯಲ್ಲಿ ಯಾರೆಲ್ಲ ಇದ್ದಾರೆ? ಎಂಬುದರ ಹೀಗಿದೆ ಗಮನಿಸಿ.