ಸ್ಟಾರ್​ ನಟರನ್ನೇ ಹಿಂದಿಕ್ಕಿದ ನಟಿ ಕಲ್ಯಾಣಿ ಪ್ರಿಯದರ್ಶನ್​! ಮಾಲಿವುಡ್​ನಲ್ಲಿ 'ಲೋಕಃ' ಬ್ಯೂಟಿ ಮುಂಚೂಣಿ | Lokah Chapter 1

ವಿಜಯವಾಣಿ (13)
Published on

Lokah Kalyani: ಬೆಂಗಳೂರಿನ ಸಂಸ್ಕೃತಿ ಮತ್ತು ಇಲ್ಲಿನ ಯುವತಿಯರ ಬಗ್ಗೆ ತುಂಬಾ ಅಶ್ಲೀಲ ಪದ ಬಳಕೆ ಮಾಡುವ ಮೂಲಕ ಮಲಯಾಳಂನ 'ಲೋಕಃ ಚಾಪ್ಟರ್​ 1' ಚಿತ್ರ ಆರಂಭದಲ್ಲೇ ಭಾರೀ ವಿವಾದಕ್ಕೆ ಗುರಿಯಾಗಿತ್ತು. ಬಿಡುಗಡೆಗೊಂಡ ಕೆಲವೇ ದಿನಗಳಲ್ಲಿ ವಿವಾದಿಂದಲೇ ಸದ್ದು ಮಾಡಿದ ಸಿನಿಮಾ, ನಂತರದಲ್ಲಿ ತಪ್ಪು ತಿದ್ದಿಕೊಂಡು ಇದೀಗ ಬ್ಲಾಕ್​ಬಸ್ಟರ್​ ಹಿಟ್​ ಚಿತ್ರವಾಗಿ ಹೊರಹೊಮ್ಮಿದೆ.

ಮುಖ್ಯಭೂಮಿಕೆಯಲ್ಲಿ ಅಭಿನಯಿಸಿರುವ ನಟಿ ಕಲ್ಯಾಣಿ ಪ್ರಿಯದರ್ಶನ್, ಮಲಯಾಳಂ ಸಿನಿಪ್ರಿಯರನ್ನು ಮನರಂಜಿಸುವಲ್ಲಿ ಯಶಸ್ವಿಯಾಗಿದ್ದಾರೆ. ಉತ್ತಮ ವಿಮರ್ಶೆಗಳನ್ನು ಪಡೆದಿರುವ ಈ ಚಿತ್ರವು, ಬಾಕ್ಸ್ ಆಫೀಸ್​ನಲ್ಲಿ ಭರ್ಜರಿ ಗಳಿಕೆ ದಾಖಲಿಸಿದೆ. ಇದು ಚಿತ್ರತಂಡಕ್ಕೆ ಅತೀವ ಸಂತಸ ಮೂಡಿಸಿದ್ದು, ಮಲಯಾಳಂ ಬಾಕ್ಸ್ ಆಫೀಸ್​ನಲ್ಲಿ ಈ ಹಿಂದೆ ಅತಿ ಹೆಚ್ಚು ಗಳಿಕೆ ಕಂಡಿದ್ದ ಮೋಹನ್​ಲಾಲ್​ ಅಭಿನಯದ ಎರಡು ಚಿತ್ರಗಳನ್ನು ಹಿಂದಿಕ್ಕಿದೆ. ಇದು ನಟಿಗೆ ಹೊಸ ಆಯಾಮವನ್ನೇ ತಂದುಕೊಟ್ಟಿದೆ.

ಕೇವಲ 30 ಕೋಟಿ ರೂ. ಬಜೆಟ್‌ನಲ್ಲಿ ಅದ್ಭುತ ದೃಶ್ಯಗಳು ಹಾಗೂ ಉತ್ತಮ ಕಥೆಯೊಂದಿಗೆ ಪ್ರೇಕ್ಷಕರ ಎದುರಿಗೆ ತರಲಾದ 'ಲೋಕಃ ಚಾಪ್ಟರ್ 1' ಚಿತ್ರವು ಮಲಯಾಳಂನಲ್ಲಿ ಮಾತ್ರವಲ್ಲದೆ ತಮಿಳು, ತೆಲುಗು ಮತ್ತು ಹಿಂದಿಯಲ್ಲೂ ನಿರೀಕ್ಷೆಗೂ ಮೀರಿದ ಯಶಸ್ಸನ್ನೇ ಕಂಡಿದೆ. ಆಗಸ್ಟ್ 29ರಂದು ಬಿಡುಗಡೆಗೊಂಡ ಸಿನಿಮಾ, 20 ದಿನಗಳ ಹಿಂದೆ, 275 ಕೋಟಿ ರೂ. ಗಳಿಸಿತು. ಆದರೀಗ, ಅದನ್ನೂ ಮೀರಿಸಿದ್ದು, ಚಿತ್ರವು ಒಟ್ಟು 300 ಕೋಟಿ ರೂ. ಕಲೆಕ್ಷನ್ ಮಾಡಿದೆ.

ಇಲ್ಲಿಯವರೆಗೆ, ಮೋಹನ್ ಲಾಲ್ ಮತ್ತು ಪೃಥ್ವಿರಾಜ್ ಸುಕುಮಾರನ್ ಅಭಿನಯದ 'L2: ಎಂಪುರಾನ್' ಚಿತ್ರವು ಮಲಯಾಳಂ ಬಾಕ್ಸ್ ಆಫೀಸ್‌ನಲ್ಲಿ 265 ಕೋಟಿ ರೂ. ಗಳಿಕೆಯೊಂದಿಗೆ ಅಗ್ರಸ್ಥಾನದಲ್ಲಿತ್ತು. ಅದರ ಬಳಿಕ ಮೋಹನ್ ಲಾಲ್ ಅವರ ಸೂಪರ್​ಹಿಟ್​ 'ತುಡರಮ್' 242 ಕೋಟಿ ರೂ. ಗಳಿಕೆಯೊಂದಿಗೆ ಎರಡನೇ ಸ್ಥಾನದಲ್ಲಿತ್ತು. ಈಗ, ಲೋಕಃ ಆ ದಾಖಲೆಯನ್ನು ಮುರಿದಿದ್ದು, 300 ಕೋಟಿ ರೂ. ಕಲೆಕ್ಷನ್ ಮೂಲಕ ಅಗ್ರಸ್ಥಾನಕ್ಕೇರಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net