ವಿಜಯವಾಣಿ ಸುದ್ದಿಜಾಲ ಕೋಲಾರ
ಎನ್.ಮುನಿವೆಂಕಟೇಗೌಡ
ನಗರದ ಪ್ರಥಮ ದರ್ಜೆ ಕಾಲೇಜು ಮುಂಭಾಗ ನಗರಸಭೆಯಿಂದ ನಿರ್ಮಾಣಗೊಂಡಿರುವ ಫುಡ್‌ಕೋರ್ಟ್ ಮಳಿಗೆಗಳು ಸೋಮವಾರ ಫಲಾನುಭವಿಗಳಿಗೆ ಹಂಚಿಕೆ ಮಾಡಲು ನಗರಸಭೆಯಿಂದ ತೀರ್ಮಾನಿಸಿದ್ದು, ೧೦ ಲಕ್ಷ ರೂ.ಗಳ ವೆಚ್ಚದಲ್ಲಿ ವಿನೂತನ ಮಾದರಿಯಾಗಿ ಸೆಲ್ಫ್ಸರ್ವೀಸ್‌ಗೆ ಅನುಕೂಲವಾಗುವ ರೀತಿಯಲ್ಲಿ ಕೌಂಟರ್‌ಗಳನ್ನು ನಿರ್ಮಿಸಲಾಗುತ್ತಿದೆ.
ನಗರಸಭೆಯ ೧೫ನೇ ಹಣಕಾಸು ಮತ್ತು ನಗರಸಭೆಯ ಅನುದಾನ ಸೇರಿ ೩೫ ಲಕ್ಷ ರೂ.ಗಳ ವೆಚ್ಚದಲ್ಲಿ ೨೭ ಮಳಿಗೆಗಳನ್ನು ನಿರ್ಮಿಸಲಾಗಿದ್ದು, ಕಳೆದ ವಾರ ನಡೆದ ಸಾಮಾನ್ಯ ಸಭೆಯಲ್ಲಿ ಒಂದು ಮಳಿಗೆಗೆ ಒಬ್ಬ ಫಲಾನುಭವಿಯಿಂದ ಪ್ರತಿದಿನ ೨೦೦ ರೂ.ಗಳಂತೆ ಬಾಡಿಗೆ ವಸೂಲಿ ಮಾಡಲು ನಿರ್ಧರಿಸಲಾಗಿದ್ದು, ಹೆಚ್ಚುವರಿಯಾಗಿ ೧೦ ಲಕ್ಷ ರೂ.ಗಳ ಅನುದಾನದಲ್ಲ ಪ್ರತಿ ಮಳಿಗೆಯಲ್ಲಿ ತಯಾರಿಸಿದ ಆಹಾರ ಪದಾರ್ಥಗಳನ್ನು ಗ್ರಾಹಕರಿಗೆ ವಿತರಣೆ ಮಾಡಲು ಕೌಂಟರ್‌ಗಳನ್ನು ನಿರ್ಮಾಣ ಮಾಡಿ ಸೋಮವಾರದ ನಂತರ ಫಲಾನುಭವಿಗಳಿಗೆ ಲಾಟರಿಯ ಮೂಲಕ ವಿತರಣೆ ಮಾಡಲು ತೀರ್ಮಾನಿಸಲಾಗಿದೆ.
ಫುಡ್‌ಕೋರ್ಟ್ ಮಳಿಗೆಗೆಳನ್ನು ಉದ್ಘಾಟನೆ ಮಾಡಿ ಒಂದು ತಿಂಗಳಾದರೂ ಫಲಾನುಭವಿಗಳಿಗೆ ವಿತರಣೆ ಮಾಡದೆ ನಗರಸಭೆಯವರು ಮೀನ ಮೇಷ ಎಣಿಸುತ್ತಿದ್ದರು. ಕಾಲೇಜು ಮುಂಭಾಗ ಬೀದಿ ಬದಿ ವ್ಯಾಪಾರಸ್ಥರು ತಳ್ಳುಗಾಡಿಗಳ ಮೂಲಕ ತಿಂಡಿಗಳನ್ನು ತಯಾರಿಸಿ ಗ್ರಾಹಕರಿಗೆ ನೀಡುತ್ತಿದ್ದರು. ಮಳೆ, ಗಾಳಿ ಮತ್ತು ಬಿಸಿಲಿನಿಂದ ಬೀದಿ ಬದಿ ವ್ಯಾಪಾರಸ್ಥರಿಗೆ ತೊಂದರೆಯಾಗುವುದರ ಜೊತೆಗೆ ತಯಾರಿಸಿದ ಆಹಾರ ಪದಾರ್ಥಗಳಲ್ಲಿ ಧೂಳು ಮಿಶ್ರಣವಾಗುತ್ತಿತ್ತು.
ನಗರಸಭೆಯವರು ಕಾಲೇಜು ಮುಂಭಾಗದ ಪಾರ್ಕಿನ ಒಂದು ಭಾಗದ ಉದ್ದಕ್ಕೂ ಫುಡ್‌ಕೋರ್ಟ್ನ್ನು ನಿರ್ಮಾಣ ಮಾಡಿ ಅದರಲ್ಲಿ ಬೀದಿಬದಿ ವ್ಯಾಪಾರಸ್ಥರು ತಿಂಡಿ ತಿನುಸುಗಳ ಮಾರಾಟವನ್ನು ಮಾಡಿಕೊಳ್ಳಲು ಅವಕಾಶ ಕಲ್ಪಿಸಿಕೊಡಲಾಗಿದೆ. ಕಾಮಗಾರಿ ನಡೆಯುತ್ತಿದ್ದ ಹಿನ್ನಲೆಯಲ್ಲಿ ಇದುವರೆವಿಗೂ ತಳ್ಳುಗಾಡಿಗಳ ಮೂಲಕ ವ್ಯಾಪಾರ ಮಾಡಿಕೊಳ್ಳುತ್ತಿದ್ದ ವ್ಯಾಪಾರಸ್ಥರು ಬೇರೆಕಡೆಗಳಲ್ಲಿ ವ್ಯಾಪಾರ ಮಾಡಿಕೊಳ್ಳುತ್ತಿರುವುದರಿಂದ ಅವರಿಗೆ ಸರಿಯಾದ ವ್ಯಾಪಾರವಾಗದೆ ನಷ್ಟ ಅನುಭವಿಸುತ್ತಿದ್ದು, ಮಾಮೂಲಿ ಜಾಗದಲ್ಲಿ ನಿರ್ಮಾಣವಾಗಿರುವ ಫುಡ್‌ಕೊರ್ಟ್ ಮಳಿಗೆಗಳನ್ನು ಹಸ್ತಾಂತರಿಸಬೇಕೆAದು ಒತ್ತಾಯ ಮಾಡುತ್ತಿದ್ದರು.
ಕೋಲಾರ ನಗರದಲ್ಲಿ ಇದೇ ರೀತಿ ವಿವಿಧ ಭಾಗಗಳಲ್ಲಿ ಸಂಜೆ ಮತ್ತು ಬೆಳ್ಳಗ್ಗಿನ ಜಾವ ತಳ್ಳು ಗಾಡಿಗಳ ಮೂಲಕ ಮಿನಿ ಹೋಟೆಲ್‌ಗಳನ್ನು ನಿರ್ಮಾಣ ಮಾಡಿಕೊಂಡಿದ್ದಾರೆ. ಅಂತಹ ಜಾಗಗಳಲ್ಲಿ ಗುಣಮಟ್ಟದ ಆಹಾರ ಸಿಗುತ್ತಿಲ್ಲ. ತಯಾರಿಸಿದ ತಿಂಡಿ ತಿನುಸುಗಳ ಮೇಲೆ ಧೂಳು ಸೇರುವಂತೆ ಆಗುತ್ತಿದೆ. ಅವಕಾಶ ಇರುವ ಕಡೆ ನಗರಸಭೆಯವರು ಈ ರೀತಿಯ ಪುಢ್‌ಕೋರ್ಟ್ಗಳನ್ನು ನಿರ್ಮಿಸಿ ಬೀದಿ ಬದಿ ವ್ಯಾಪಾರಸ್ಥರಿಗೆ ನೆರಳು ಕಲ್ಪಿಸಿಕೊಡಬೇಕು. ಸುಸಜ್ಜಿತವಲ್ಲದ ಜಾಗಗಳಲ್ಲಿ ತಳ್ಳು ಗಾಡಿಗಳ ಮೂಲಕ ವ್ಯಾಪಾರ ನಡೆಸುತ್ತಿರುವ ವ್ಯಾಪಾರಸ್ಥರನ್ನು ಒಂದು ಕಡೆ ಅವಕಾಶ ಕಲ್ಪಿಸಿಕೊಡಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಕೋಲಾರ ನಗರದಲ್ಲಿ ಅವಕಾಸ ನೋಡಿಕೊಂಡು ಇನ್ನು ಮರ‍್ನಾಲ್ಕು ಜಾಗಗಳಲ್ಲಿ ಈ ರೀತಿಯ ಫುಡ್‌ಕೋರ್ಟ್ಗಳನ್ನು ಪ್ರಾರಂಭಿಸಬೇಕೆAಬ ಚಿಂತೆ ನಗರಸಭೆಯಲ್ಲಿ ಇದೆ. ಕೆ.ಇ.ಬಿ.ಬಳಿ ಮತ್ತು ಇಟಿಸಿಎಂ. ಆಸ್ಪತ್ರೆಯ ಮುಂಭಾಗ ಮುಂತಾದ ಕಡೆಗಳಲ್ಲಿ ಫುಡ್‌ಕೋರ್ಟ್ಗಳನ್ನು ನಿರ್ಮಿಸಲಾಗುವುದು. ಈಗಾಗಲೇ ನಿರ್ಮಿಸಿರುವ ಫುಡ್‌ಕೋರ್ಟ್ ಮಳಿಗೆಗೆ ಯಾರೂ ಗೋಡೆಗಳನ್ನು ಹಾಕಿ ಶೆಟರ್ ಡೋರ್ ಇಡುವಂತಿಲ್ಲ. ಬೆಳ್ಳಿಗ್ಗೆ ಬಂದು ಸಂಜೆ ವ್ಯಾಪಾರ ಮುಸಿಗಿಸಿಕೊಂಡು ಹೋಗಬೇಕು. ಆ ರೀತಿಯಾಗಿ ಅಂಗಡಿಗಳನ್ನು ನಿರ್ಮಿಸಲಾಗಿದೆ. ಮುಂದೆ ನಿರ್ಮಾಣ ಮಾಡುವ ಅಂಗಡಿಗಳು ಇದೇ ರೀತಿ ನಿರ್ಮಿಸಲಾಗುವುದುಎ ಎಂದು ನಗರಸಭೆ ಅಧಿಕಾರಿಗಳು ತಿಳಿಸಿದ್ದಾರೆ.
ಕೋಟ್
ಕಾಲೇಜು ಮುಂಭಾಗ ನಿರ್ಮಾಣ ಮಾಡಿರುವ ಫುಡ್‌ಕೋರ್ಟ್ ಮಳಿಗೆಗಳನ್ನು ಸೋಮವಾರ ಫಲಾನುಭವಿಗಳಿಗೆ ಲಾಟರಿ ಮೂಲಕ ವಿತರಣೆ ಮಾಡಲಾಗುವುದು. ಈಗ ನಿರ್ಮಾಣ ಮಾಡಿರುವ ಮಳಿಗೆಯನ್ನು ಹಾಗಿಯೇ ನೀಡಬಾರದು ಎಂದು ಅದಕ್ಕಾಗಿ ನಗರಸಭೆಯಿಂದ ೧೦ ಲಕ್ಷ ರೂ.ಗಳ ವೆಚ್ಚದಲ್ಲಿ ಮಳಿಗೆಗಳನ್ನು ನವೀಕರಿಸಿ ನೀಡಲಾಗುತ್ತಿದೆ. ಅದಕ್ಕಾಗಿ ತಡವಾಯಿತು.
ನವೀನ್‌ಚಂದ್ರ, ಆಯುಕ್ತರು, ನಗರಸಭೆ, ಕೋಲಾರ.
ಚಿತ್ರ ೦೯ ಕೆ.ಎಲ್.ಆರ್. ೦೧ : ಕಾಲೇಜು ಮುಂಭಾಗ ನಿರ್ಮಾಣಗೊಂಡಿರುವ ಫುಡ್‌ಕೋರ್ಟ್ ಮಳಿಗೆಗೆಳು
ಚಿತ್ರ ೦೯ ಕೆ.ಎಲ್.ಆರ್. ೦೧ಎ : ನವೀನ್‌ಚಂದ್ರ, ಆಯುಕ್ತರು, ನಗರಸಭೆ, ಕೋಲಾರ.