ಆ ತಪ್ಪಿಗೆ ಶ್ರೇಯಸ್​ ನನ್ನ ಕಪಾಳಕ್ಕೆ ಹೊಡೆಯಬೇಕಿತ್ತು! ಶಾಕಿಂಗ್ ಹೇಳಿಕೆ ನೀಡಿದ ಶಶಾಂಕ್ ಸಿಂಗ್​ | Shashank Singh

ವಿಜಯವಾಣಿ (51)
Published on

Shashank Singh: ಐಪಿಎಲ್​ ಫೈನಲ್​ನಲ್ಲಿ ಆರ್​ಸಿಬಿ ವಿರುದ್ಧ 6 ರನ್​ಗಳಿಂದ ಚೊಚ್ಚಲ ಟ್ರೋಫಿ ಕಳೆದುಕೊಂಡ ಪಂಜಾಬ್ ಕಿಂಗ್ಸ್ ಪರ ಏಕಾಂಗಿ ಹೋರಾಟ ನಡೆಸಿದ್ದ ಸ್ಟಾರ್ ಬ್ಯಾಟರ್ ಶಶಾಂಕ್ ಸಿಂಗ್ ಇದೀಗ ಮೌನ ಮುರಿದಿದ್ದಾರೆ.

ಕ್ವಾಲಿಫೈಯರ್-2 ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಎದುರು ಬ್ಯಾಟ್​ ಮಾಡುವಾಗ ಶಶಾಂಕ್ ಮಾಡಿದ ಎಡವಟ್ಟಿನ ಕುರಿತು ಕೇಳಿದ ಪ್ರಶ್ನೆಗೆ ಕಡೆಗೂ ಪಂಜಾಬ್ ಬ್ಯಾಟರ್​ ಉತ್ತರಿಸಿದ್ದಾರೆ. ನಿರ್ಣಾಯಕ ಪಂದ್ಯದಲ್ಲಿ ತಮ್ಮನ್ನು ರನ್​ಔಟ್​ ಮಾಡಿದ ಕಾರಣಕ್ಕೆ ಕ್ಯಾಪ್ಟನ್​ ಶ್ರೇಯಸ್ ಅಯ್ಯರ್ ಮೈದಾನದಲ್ಲೇ ಶಶಾಂಕ್ ಸಿಂಗ್ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು. ನಿರ್ಣಾಯಕ ಪಂದ್ಯದಲ್ಲೇ ಹೀಗೆ ಮಾಡಿದ್ದು ಶ್ರೇಯಸ್​ಗೆ ಕಿಂಚಿತ್ತು ಹಿಡಿಸಲಿಲ್ಲ. ಇದಕ್ಕೆ ಸಂಬಂಧಿಸಿದ ದೃಶ್ಯಗಳು ಜಾಲತಾಣಗಳಲ್ಲಿ ವೈರಲ್ ಆಗಿದೆ.

"ಕ್ವಾಲಿಫೈಯರ್​-2 ಪಂದ್ಯದಲ್ಲಿ ನಾನು ದೊಡ್ಡ ತಪ್ಪು ಮಾಡಿದೆ ನಿಜ. ಆ ಸಮಯದಲ್ಲಿ ಕ್ಯಾಪ್ಟನ್​ ಅಯ್ಯರ್ ನನಗೆ ಕಪಾಳಮೋಕ್ಷ ಮಾಡಬೇಕಿತ್ತು. ನಾನು ಅಜಾಗರೂಕತೆಯಿಂದ ಓಡುವ ಮೂಲಕ ದೊಡ್ಡ ಎಡವಟ್ಟು ಮಾಡಿದೆ. ಅಂದು ನನ್ನ ತಂದೆ ಕೂಡ ನನ್ನ ಜೊತೆ ಸರಿಯಾಗಿ ಮಾತನಾಡಿರಲಿಲ್ಲ. ಫೈನಲ್ ಪಂದ್ಯದವರೆಗೂ ನನ್ನೊಂದಿಗೆ ಮಾತು ಆಡಲಿಲ್ಲ. ಇದು ಬಹಳ ನಿರ್ಣಾಯಕ ಸಮಯ, ನಿಮ್ಮಿಂದ ಇದನ್ನು ನಿರೀಕ್ಷಿಸಿರಲಿಲ್ಲ" ಎಂದು ಅಯ್ಯರ್ ಹೇಳಿದರು,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net