ಹಾರ್ದಿಕ್ ಪಾಂಡ್ಯ, ಅರ್ಜುನ್ ತೆಂಡುಲ್ಕರ್ ನೀಡಿದ ಗಿಫ್ಟ್​ ಹರಾಜಿಗಿಟ್ಟ ಶೂಟರ್..!

SHOOTER FOR WEB....
Published on

ನವದೆಹಲಿ: ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಆತ ಉತ್ತಮ ಕ್ರಿಕೆಟ್ ಪಟುವಾಗುತ್ತಿದ್ದ. ಆದರೆ, ವಿಧಿಯಾಟವೇ ಬೇರೆಯಾಗಿತ್ತು. ಎಡಗಾಲು ನೋವಿಂದಾಗಿ ಕ್ರಿಕೆಟ್ ಜರ್ನಿಯೇ ಅಂತ್ಯಗೊಂಡಿತು. ಆದರೆ, ಛಲಬಿಡದ ಈತ ಕ್ರೀಡೆಯಲ್ಲೇ ತೊಡಗಬೇಕೆಂದು ನಿರ್ಧರಿಸಿ ಶಿವಂ ಠಾಕೂರ್ ಶೂಟಿಂಗ್ ಆಯ್ದುಕೊಂಡರು. ಕೌಂಟಿ ಶೂಟಿಂಗ್‌ನಲ್ಲಿ ಹಲವು ಪದಕ ಜಯಿಸಿ ಗಮನಸೆಳೆದಿದ್ದಾರೆ. ಇದೀಗ ಕರೊನಾ ವೈರಸ್ ಭೀತಿಯಿಂದಾಗಿ ಸಂಕಷ್ಟಕ್ಕೆ ಒಳಗಾಗಿರುವ ಕ್ರೀಡಾಪಟುಗಳ ಸಹಾಯಕ್ಕೆ ಮುಂದಾಗಿದ್ದಾರೆ. ಅದಕ್ಕಾಗಿ ಕ್ರಿಕೆಟ್ ಅಭ್ಯಾಸ ಮಾಡುವ ವೇಳೆ ಹಾರ್ದಿಕ್ ಪಾಂಡ್ಯ ಹಾಗೂ ದಿಗ್ಗಜ ಸಚಿನ್ ತೆಂಡುಲ್ಕರ್ ಪುತ್ರ ಅರ್ಜುನ್ ತೆಂಡುಲ್ಕರ್ ನೀಡಿದ್ದ ಕೆಲ ಕ್ರಿಕೆಟ್ ಪರಿಕರಗಳಿನ್ನು ಹರಾಜಿಗಿಡಲು ತೀರ್ಮಾನಿಸಿದ್ದಾರೆ.

ಕರೊನಾ ವೈರಸ್ ಭೀತಿಯಿಂದಾಗಿ ಸಂಕಷ್ಟಕ್ಕೆ ಒಳಗಾಗದ ಜನರಿಲ್ಲ. ಕ್ರೀಡೆಯನ್ನೇ ನಂಬಿಕೊಂಡಿದ್ದ ಕ್ರೀಡಾಪಟುಗಳ ಸಂಕಷ್ಟ ಹೇಳತೀರದು. ಇಂಥವರ ಸಂಕಷ್ಟಕ್ಕೆ ಕೆಲ ಮಂದಿ ಸ್ಪಂದಿಸಿ ಮಾನವೀಯತೆ ಮೆರೆದಿದ್ದರು. ಇದೀಗ ಯುವ ಶೂಟರ್ ಶಿವಂ ಠಾಕೂರ್ ತಮಗೆ ಬಂದಿದ್ದ ಅಮೂಲ್ಯ ಕ್ರಿಕೆಟ್ ಪರಿಕರಗಳನ್ನೇ ಹರಾಜಿಗಿಡಲು ನಿರ್ಧರಿಸಿದ್ದಾರೆ. ಮೂಲತಃ ಗ್ರೇಟರ್ ನೋಯ್ಡದವರಾದ ಶಿವಂ, ಹಾರ್ದಿಕ್ ಪಾಂಡ್ಯ ಇಲ್ಲಿನ ಸ್ಟೇಡಿಯಂನಲ್ಲಿ ಅಭ್ಯಾಸ ಮಾಡುತ್ತಿದ್ದ ವೇಳೆ ಅವರಿಗೆ ಬೌಲಿಂಗ್ ಮಾಡುತ್ತಿದ್ದರಂತೆ. ಈ ವೇಳೆ ಪಾಂಡ್ಯ ಶಿವಂ ಅವರಿಗೆ ಬ್ಯಾಟಿಂಗ್ ಬ್ಯಾಡ್ ನೀಡಿದರಂತೆ, ಕ್ರಿಕೆಟ್ ಆಡುವ ವೇಳೆ ಕೇರಳದಲ್ಲಿ ನಡೆದ ತರಬೇತಿ ಶಿಬಿರವೊಂದರಲ್ಲಿ ಅರ್ಜುನ್ ತೆಂಡುಲ್ಕರ್ ಬ್ಯಾಟ್ ಗ್ರೀಪ್ ನೀಡಿದ್ದರಂತೆ. ಇದೀಗ ಅವುಗಳನ್ನು ಕರೊನಾ ವೈರಸ್‌ನಿಂದ ಸಂಕಷ್ಟಕ್ಕೆ ಒಳಗಾಗಿರುವ ಕೆಲ ಕ್ರೀಡಾಪಟುಗಳ ಸಹಾಯಕ್ಕೆ ನಿಂತಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net