More

    ಇವತ್ತಿನ ಕ್ರಿಕೆಟ್ ಯುಗದಲ್ಲಿ ನಾನು ಉಳಿಯುತ್ತಿರಲಿಲ್ಲ ಎಂದು ದ್ರಾವಿಡ್ ಹೇಳಿದ್ದು ಯಾಕೆ…!

    ನವದೆಹಲಿ: ಯುವ ಕ್ರಿಕೆಟಿಗರಿಗೆ ಇವರೇ ಆದರ್ಶ, ಸ್ಫೂರ್ತಿಯ ಚಿಲುಮೆ ಕೂಡ. ಎದುರಾಳಿ ತಂಡದ ಆಟಗಾರರು ಕೂಡ ಇವರ ಬದ್ಧತೆ, ಶಿಸ್ತನ್ನು ಹಿಂಬಾಲಿಸುತ್ತಾರೆ. ಬ್ಯಾಟಿಂಗ್ ವಿಷಯದಲ್ಲಿ ತಾಂತ್ರಿಕವಾಗಿ ಸಾಕಷ್ಟು ನೈಪುಣ್ಯತೆ ಹೊಂದಿದ್ದ ಇವರು ಟೀಂ ಇಂಡಿಯಾ ಪಾಲಿಗೆ ಅದೆಷ್ಟೋ ಪಂದ್ಯಗಳಲ್ಲಿ ಆಪತ್ಬಾಂಧವರಾಗಿದ್ದರು. ಅವರು ಬೇರೆಯಾರು ಅಲ್ಲ ‘ದಿ ವಾಲ್’ ಖ್ಯಾತಿಯ ರಾಹುಲ್ ದ್ರಾವಿಡ್. ಆದರೆ, ವಿಶ್ವ ಕ್ರಿಕೆಟ್‌ನಲ್ಲಿ ಇಂದಿನ ಸ್ಟ್ರೈಕ್‌ರೇಟ್ ವೇಗದಲ್ಲಿ ನಾನಿದ್ದರೆ ಖಂಡಿತವಾಗಿಯೂ ಹೆಚ್ಚು ದಿನಗಳ ಕಾಲ ಆಡುತ್ತಿರಲಿಲ್ಲ ಎಂದು ರಾಹುಲ್ ಹೇಳಿಕೊಂಡಿದ್ದಾರೆ.

    ಇದನ್ನೂ ಓದಿ: ಲಿಯಾಂಡರ್ ಪೇಸ್ 2024ರವರೆಗೆ ಕಾಯಲ್ವಂತೆ!

    ಕ್ರಿಕೆಟ್ ವೆಬ್‌ಸೈಟ್‌ವೊಂದರಲ್ಲಿ ಮಾಜಿ ಕ್ರಿಕೆಟಿಗ ಸಂಜಯ್ ಮಂಜ್ರೇಕರ್ ಜತೆ ನಡೆಸಿದ ಸಂವಾದಲ್ಲಿ ಮಾತನಾಡಿದ ಎನ್‌ಸಿಎ ಮುಖ್ಯಸ್ಥ ರಾಹುಲ್ ದ್ರಾವಿಡ್, ಇಂದಿನ ಕ್ರಿಕೆಟ್‌ನಲ್ಲಿ ಸ್ಟ್ರೈಕ್‌ರೇಟ್ ಬಗ್ಗೆ ಹೆಚ್ಚು ಒತ್ತು ನೀಡಲಾಗುತ್ತಿದೆ. ಆದರೆ, ಈಗಿನ ಕ್ರಿಕೆಟ್‌ನಲ್ಲಿ ನಾನಿದ್ದರೆ ಹೆಚ್ಚು ದಿನ ಉಳಿಯುತ್ತಿರಲಿಲ್ಲ ಎಂದು ಟೆಸ್ಟ್ ತಜ್ಞ ದ್ರಾವಿಡ್ ಹೇಳಿಕೊಂಡಿದ್ದಾರೆ. ಯಾವಾಗಲೂ ಟೆಸ್ಟ್ ಆಟಗಾರನಾಗಿರಲು ಬಯಸುತ್ತಿದ್ದೆ, ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ನಿಲ್ಲಲು ಬಯಸಿದ್ದೆ, ಎಂಥ ಪರಿಸ್ಥಿತಿಯಲೂ ಏಕಾಗ್ರತೆಯಿಂದ ಕ್ರೀಸ್‌ನಲ್ಲಿ ನಿಲ್ಲುವುದೇ ನನ್ನ ಕೆಲಸವಾಗಿತ್ತು ಎಂದಿದ್ದಾರೆ. ವೀರೇಂದ್ರ ಸೆಹ್ವಾಗ್ ರೀತಿ ಬ್ಯಾಟಿಂಗ್ ಮಾಡಬೇಕು ಎಂದು ಅನಿಸಲೇ ಇಲ್ಲ. ನನ್ನ ಬ್ಯಾಟಿಂಗ್ ಮಾದರಿಯೇ ವಿಭಿನ್ನವಾಗಿತ್ತು ಎಂದರು. ವಿರಾಟ್ ಕೊಹ್ಲಿ, ರೋಹಿತ್ ಶರ್ಮ ಜತೆಗೆ ನನ್ನನ್ನು ಹೋಲಿಕೆ ಮಾಡಿಕೊಳ್ಳುವುದಿಲ್ಲ. ನಾನು ಸ್ಟ್ರೈಕ್‌ರೇಟ್ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳುತ್ತಿರಲಿಲ್ಲ ಎಂದು 2007ರ ಏಕದಿನ ವಿಶ್ವಕಪ್‌ನಲ್ಲಿ ಭಾರತ ತಂಡ ಮುನ್ನಡೆಸಿದ್ದ ದ್ರಾವಿಡ್ ಹೇಳಿದ್ದಾರೆ.ಇವತ್ತಿನ ಕ್ರಿಕೆಟ್ ಯುಗದಲ್ಲಿ ನಾನು ಉಳಿಯುತ್ತಿರಲಿಲ್ಲ ಎಂದು ದ್ರಾವಿಡ್ ಹೇಳಿದ್ದು ಯಾಕೆ...!

    ಯುವ ಕ್ರಿಕೆಟಿಗರಿಗೆ ಉತ್ತೇಜನ ನೀಡುವ ಸಲುವಾಗಿ ದ್ರಾವಿಡ್ ಅವರನ್ನು 19 ವಯೋಮಿತಿ ಹಾಗೂ ಭಾರತ ಎ ತಂಡದ ಕೋಚ್ ಆಗಿ ನೇಮಿಸಲಾಗಿತ್ತು. ಸದ್ಯ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ (ಎನ್‌ಸಿಎ) ಮುಖ್ಯಸ್ಥರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

    ಧೋನಿ ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾಗಲು ಈ ಕನ್ನಡಿಗ ಕಾರಣ..!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts