More

  ಇದೇನಾದರೂ ಸಂಭವಿಸಿದರೆ ಖಂಡಿತ ಆರ್​ಸಿಬಿಗೆ ಫ್ಲೇಆಫ್ ಕನಸು ಭಗ್ನ! ಲೀಗ್​ನಿಂದ ನೇರ ಮನೆಗೆ

  ಬೆಂಗಳೂರು: ಪ್ರಸಕ್ತ ಐಪಿಎಲ್ 2024ರ ಟೂರ್ನಿ ಅಂತಿಮ ಘಟಕ್ಕೆ ಬಂದು ನಿಂತಿದ್ದು, ಲೀಗ್ ಅಂತ್ಯಕ್ಕೆ ಇನ್ನೂ ಕೆಲವೇ ದಿನಗಳು ಮಾತ್ರ ಬಾಕಿ ಉಳಿದಿವೆ. ಸದ್ಯ ಕ್ರಿಕೆಟ್ ಅಭಿಮಾನಿಗಳು ಮಾತ್ರವಲ್ಲದೇ ಎಲ್ಲರ ಚಿತ್ತ ಮೂಡಿರುವುದು ಕೇವಲ ಆರ್​ಸಿಬಿ ಮತ್ತು ಚೆನ್ನೈ ಸೂಪರ್ ಕಿಂಗ್ಸ್​ ನಡುವಿನ ಬಿಗ್ ಫೈಟ್​ ಪಂದ್ಯದತ್ತ. ಒಂದೆಡೆ ಈ ಪಂದ್ಯದ ಕುರಿತು ಭಾರೀ ಚರ್ಚೆಗಳು ನಡೆಯುತ್ತಿದ್ದರೇ, ಮತ್ತೊಂದೆಡೆ ಆರ್​ಸಿಬಿ ಪ್ಲೇಆಫ್​ ಕನಸು ಜೀವಂತವಾಗಲು ಕೇವಲ ಆಟಗಾರರ ಉತ್ತಮ ಪ್ರದರ್ಶನ ಸಾಕಾ? ಅಥವಾ ಅದೃಷ್ಟಗಳು ಬೇಕಿದೆಯೇ? ಎಂಬ ಚರ್ಚೆಗಳು ಮಾತ್ರ ಬಲು ಜೋರಾಗಿವೆ.

  ಇದನ್ನೂ ಓದಿ: ಜಿಲ್ಲಾ ಬಿಜೆಪಿ ಕಚೇರಿಗೆ ನೈಋತ್ಯ ಪದವಿಧರರ ಕ್ಷೇತ್ರದ ಅಭ್ಯರ್ಥಿ ಭೇಟಿ

  ಈ ಲೀಗ್​ನಲ್ಲಿ ಸದ್ಯ ರಾಜಸ್ಥಾನ ರಾಯಲ್ಸ್ (ಆರ್​ಆರ್​) ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್​) ಈಗಾಗಲೇ ಪ್ಲೇಆಫ್‌ನಲ್ಲಿ ತಮ್ಮ ಸ್ಥಾನವನ್ನು ಖಚಿತಪಡಿಸಿಕೊಂಡಿವೆ. ಇನ್ನುಳಿದ ಎರಡು ಸ್ಥಾನಕ್ಕೆ ಮಾತ್ರ ಭಾರಿ ಪೈಪೋಟಿ ಭುಗಿಲೆದ್ದಿದೆ. ಈಗಾಗಲೇ ಆರ್​ಸಿಬಿ ಮತ್ತು ಸಿಎಸ್​ಕೆ ಪಂದ್ಯಕ್ಕೆ ಎಲ್ಲರ ಹುಬ್ಬೇರಿದ್ದು, ಏನಾಗಲಿದೆ ಈ ಪಂದ್ಯ? ಗೆಲುವು ಯಾರ ಮುಡಿಗೆ? ಇದಕ್ಕೆ ಎರಡು ತಂಡಗಳ ಶ್ರಮ ಮಾತ್ರ ಲೆಕ್ಕಕ್ಕಿದೆಯೇ ಅಥವಾ ಮಳೆರಾಯನ ಅಡ್ಡಿಯು ಪ್ಲೇಆಫ್​ ಕನಸನ್ನು ಭಗ್ನಗೊಳಿಸುವುದೇ ಎಂಬ ಚಿಂತೆ ಅನೇಕರಲ್ಲಿ ಕಾಡುತ್ತಿದೆ. ಅದಕ್ಕೆ ಪುಷ್ಠಿಯಂತೆ ಇದೀಗ ಹವಾಮಾನ ಇಲಾಖೆ ಬಿಡುಗಡೆಗೊಳಿಸಿರುವ ವರದಿ ಬಹಳ ಶಾಕಿಂಗ್ ಆಗಿದೆ.

  ಮೇ. 18ರಂದು ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವಿನ ಬಹುನಿರೀಕ್ಷಿತ ಹಣಾಹಣಿಯು ಮಳೆಯಿಂದ ಅಂತ್ಯವಾಗುವ ಭೀತಿಯಲ್ಲಿದೆ. ಐಎಂಡಿ ವರದಿಯ ಪ್ರಕಾರ, ಮೇ17ರಿಂದ 21ರವರೆಗೆ ಅಂದರೆ ಮುಂದಿನ ಐದು ದಿನಗಳ ಕಾಲ ಬೆಂಗಳೂರಿನಲ್ಲಿ ಗುಡುಗು, ಮಿಂಚು ಸಹಿತ ಮಳೆಯಾಗುವ ಸಾಧ್ಯತೆಯಿದೆ ಎಂದು ಮುನ್ಸೂಚನೆ ನೀಡಿದೆ.

  ಇದನ್ನೂ ಓದಿ: ಪಠ್ಯಕ್ರಮದಲ್ಲಿ ತುಳು ಪಾಲ್ತಾಡಿಯವರ ಕೊಡುಗೆ ಅನನ್ಯ ಶ್ರದ್ಧಾಂಜಲಿ ಸಭೆಯಲ್ಲಿ ಎ.ಸಿ. ಭಂಡಾರಿ ಸ್ಮರಣೆ

  ಪಂದ್ಯವೇನಾದರೂ ವಾಶ್‌ಔಟ್‌ ಆದರೆ, ಇಂತಹ ಸಂದರ್ಭದಲ್ಲಿ ಎರಡೂ ಬಲಿಷ್ಠ ತಂಡಗಳಿಗೂ ತಲಾ ಒಂದೊಂದು ಅಂಕ ನೀಡಲಾಗುತ್ತದೆ. ಅಕಸ್ಮಾತ್​ ಇದೇನಾದರೂ ಸಂಭವಿಸಿದರೆ ಐಪಿಎಲ್ 17ನೇ ಆವೃತ್ತಿಯಿಂದ ಆರ್​ಸಿಬಿ ಹೊರಗುಳಿಯುತ್ತದೆ ಮತ್ತು ಸಿಎಸ್​ಕೆ ಪ್ಲೇಆಫ್‌ ಪ್ರವೇಶಕ್ಕೆ ಅರ್ಹತೆ ಪಡೆಯುತ್ತದೆ. ಇದು ಯಾವುದೇ ಕಾರಣಕ್ಕೂ ನಡೆಯಬಾರದು ಎಂದು ಆರ್​ಸಿಬಿ ಅಭಿಮಾನಿಗಳು ದೇವರ ಮೊರೆ ಹೋಗಿದ್ದು, ಪ್ಲೇಆಫ್ ಕನಸು ಭಗ್ನಗೊಳ್ಳದಂತೆ ಪ್ರಾರ್ಥಿಸುತ್ತಿದ್ದಾರೆ,(ಏಜೆನ್ಸೀಸ್).

  ಒಮ್ಮೆ ಹೋದ್ರೆ ಮತ್ತೆ ನೀವು ನನ್ನ ನೋಡೋದು ಡೌಟ್​; ನಿವೃತ್ತಿ ಬಗ್ಗೆ ವಿರಾಟ್ ಕೊಹ್ಲಿ ಬಿಚ್ಚುಮಾತು, ಫ್ಯಾನ್ಸ್​ ಶಾಕ್!

  ನನ್ನ ಕ್ಯಾಪ್ಟನ್ಸಿಯಲ್ಲಿ ಈತನ ಪ್ರತಿಭೆ ಅಂದೇ ಗುರುತಿಸಬೇಕಿತ್ತು! ತಪ್ಪು ಮಾಡಿದೆ; ಗೌತಮ್ ಗಂಭೀರ್​ ಪಶ್ಚಾತಾಪ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts