

ಕೊಲ್ಕತ್ತಾ: ಮಧ್ಯಮ ಕ್ರಮಾಂಕದ ಬ್ಯಾಟ್ಸ್ಮ್ಯಾನ್ಗಳಾದ ವಿಜಯ್ ಶಂಕರ್ ಹಾಗೂ ಡೇವಿಡ್ ಮಿಲ್ಲರ್ ಸ್ಪೋಟಕ ಆಟದ ಫಲವಾಗಿ ಗುಜರಾತ್ ಟೈಟಾನ್ಸ್ ತಂಡವು ಕೊಲ್ಕತ್ತಾ ನೈಟ್ರೈಡರ್ಸ್ ತಂಡದ ವಿರುದ್ಧ 7 ವಿಕೆಟ್ಗಳ ಜಯ ಸಾಧಿಸಿದೆ.
ಕೊಲ್ಕತ್ತಾದ ಈಡನ್ ಗಾರ್ಡನ್ಸ್ನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಗುಜರಾತ್ ಮೊದಲು ಫೀಲ್ಡಿಂಗ್ ಆಯ್ದುಕೊಂಡಿತ್ತು.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಕೆಕೆಆರ್ ತಂಡಕ್ಕೆ ಆರಂಭಿಕ ರೆಹಮಾನುಲ್ಲಾ ಗುರ್ಬಾಜ್(81 ರನ್, 39 ಎಸೆತ, 5 ಬೌಂಡರಿ, 7 ಸಿಕ್ಸರ್) ಹಾಗೂ ಆಲ್ರೌಂಡರ್ ಆಂಡ್ರೆ ರಸೆಲ್(34 ರನ್, 19 ಎಸೆತ, 2 ಬೌಂಡರಿ, 3 ಸಿಕ್ಸರ್) ಸ್ಪೋಟಕ ಬ್ಯಾಟಿಂಗ್ ಫಲವಾಗಿ ಕೊಲ್ಕತ್ತಾ ತಂಡವು 20 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 179 ರನ್ ಗಳಿಸಿತ್ತು.
ಗುಜರಾತ್ ಪರ ಮೊಹಮ್ಮದ್ ಶಮಿ(4-0-33-3), ಜೋಶ್ವಾ ಲಿಟಲ್(4-0-25-2), ನೂರ್ ಅಹ್ಮದ್(4-0-21-2), ಹಾರ್ದಿಕ್ ಪಾಂಡ್ಯ 3-0-34-0), ರಶೀದ್ ಖಾನ್(4-0-54-0), ಮೋಹಿತ್ ಶರ್ಮಾ(1-0-012-0) ರನ್ ನೀಡಿ ವಿಕೆಟ್ ಪಡೆದಿದ್ದಾರೆ.
ಗುರಿ ಬೆನ್ನತ್ತಿದ್ದ ಗುಜರಾತ್ ಟೈಟಾನ್ಸ್ ತಂಡವು ಆರಂಭಿಕ ಶುಭಮಾನ್ ಗಿಲ್(49 ರನ್, 35 ಎಸೆತ, 8 ಬೌಂಡರಿ, ಮಧ್ಯಮ ಕ್ರಮಾಂಕದ ಬ್ಯಾಟ್ಸ್ಮ್ಯಾನ್ ವಿಜಯ್ ಶಂಕರ್(51 ರನ್, 24 ಎಸೆತ, 2 ಬೌಂಡರಿ, 5 ಸಿಕ್ಸರ್), ಡೇವಿಡ್ ಮಿಲ್ಲರ್(32 ರನ್, 18 ಎಸೆತ, 2 ಬೌಂಡರಿ, 2 ಸಿಕ್ಸರ್) ಸ್ಪೋಟಕ ಬ್ಯಾಟಿಂಗ್ ಫಲವಾಗಿ ಗುಜರಾತ್ ಟೈಟಾನ್ಸ್ ತಂಡವು 3 ವಿಕೆಟ್ ನಷ್ಟಕ್ಕೆ ಗುರಿಯನ್ನು 17.5 ಮೋವರ್ಗಳಲ್ಲಿ ತಲುಪಿ ಹಳೆಯು ಸೇಡನ್ನು ತೀರಿಸಿಕೊಂಡಿತ್ತು.
ಕೊಲ್ಕತ್ತಾ ಪರ ಹರ್ಷಿತ್ ರಾಣಾ(3-0-25-1), ಆಂಡ್ರೆ ರಸೆಲ್(3-0-29-1), ಸುನೀಲ್ ನರೇನ್(3-0-24-1), ವರುಣ್ ಚಕ್ರವರ್ತಿ(4-0-42-0), ಸುಯಾಶ್ ಶರ್ಮಾ(4-0-37-0), ನಿತೀಶ್ ರಾಣಾ(0.5-0-14-0) ರನ್ ನೀಡಿ ವಿಕೆಟ್ ಪಡೆದಿದ್ದಾರೆ.