2ನೇ ಅವಧಿಗೆ ಸಂಗಕ್ಕರ ಮುಂದುವರಿಕೆ : ಎಂಸಿಸಿ ಅಧ್ಯಕ್ಷತೆ ವಿಸ್ತರಣೆ

sangakkara
Published on

ಲಂಡನ್: ಅಧ್ಯಕ್ಷರಾಗಿ 2ನೇ ಅವಧಿಗೆ ಮುಂದುವರಿಯಲು ಶ್ರೀಲಂಕಾದ ಮಾಜಿ ನಾಯಕ ಕುಮಾರ ಸಂಗಕ್ಕರ ಹೆಸರನ್ನು ಶಿಫಾರಸು ಮಾಡುತ್ತಿದ್ದೇವೆ ಎಂದು ಮೆರಿಲ್​ಬೋನ್ ಕ್ರಿಕೆಟ್ ಕ್ಲಬ್ (ಎಂಸಿಸಿ) ತಿಳಿಸಿದೆ. ಕಳೆದ ವರ್ಷ ಅಕ್ಟೋಬರ್ 1ರಂದು ಸಂಗಕ್ಕರ ಎಂಸಿಸಿಗೆ ಮೊದಲ ಬ್ರಿಟಿಷೇತರ ಅಧ್ಯಕ್ಷರಾಗಿ ನೇಮಕಗೊಂಡಿದ್ದರು.

ಕರೊನಾದಿಂದಾಗಿ ಉಂಟಾಗಿರುವ ಜಾಗತಿಕ ಸಂಕಷ್ಟದಿಂದಾಗಿ 2021ರ ಸೆಪ್ಟೆಂಬರ್ 30ರವರೆಗೆ 2ನೇ ಅವಧಿಗೆ ಅಧ್ಯಕ್ಷರಾಗಿ ಮುಂದುವರಿಯಲು ಸಂಗಕ್ಕರ ಹೆಸರನ್ನು ಶಿಫಾರಸು ಮಾಡುತ್ತಿದ್ದೇವೆ ಎಂದು ಎಂಸಿಸಿ ತಿಳಿಸಿದೆ. ಈ ಶಿಫಾರಸಿಗೆ ಜೂನ್ 24ರಂದು ನಿಗದಿಯಾಗಿರುವ ಎಂಸಿಸಿಯ ವಾರ್ಷಿಕ ಮಹಾ ಸಭೆಯಲ್ಲಿ ಅಂಗೀಕಾರ ಸಿಗಬೇಕಾಗಿದೆ.

ಸಾಮಾನ್ಯವಾಗಿ ಎಂಸಿಸಿ ಅಧ್ಯಕ್ಷರ ಅವಧಿ 12 ತಿಂಗಳು ಮಾತ್ರ ಇರುತ್ತದೆ. ಆದರೆ ಈ ಹಿಂದೆ ಮಹಾಯುದ್ಧದ ಸಮಯದಲ್ಲೂ ಅಧ್ಯಕ್ಷರು ಒಂದು ವರ್ಷಕ್ಕಿಂತ ಹೆಚ್ಚು ಸಮಯ ಅಧಿಕಾರದಲ್ಲಿದ್ದರು ಎಂದು ಎಂಸಿಸಿ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net