ನನಗಾಗ ಕೇವಲ 10 ವರ್ಷ... 42 ವರ್ಷಗಳ ಹಿಂದಿನ ಘಟನೆ ನೆನಪಿಸಿಕೊಂಡ ಸಚಿನ್​​ ತೆಂಡೂಲ್ಕರ್!

dk - 2025-06-25T193332.566
Published on

ಭಾರತೀಯ ಕ್ರಿಕೆಟ್​​ ಮಾಜಿ ಆಟಗಾರ ಹಾಗೂ ದಂತಕಥೆ ಮಾಸ್ಟರ್​ ಬ್ಲಾಸ್ಟರ್​ ಸಚಿನ್​​ ತೆಂಡೂಲ್ಕರ್​ 42 ವರ್ಷಗಳ ಹಿಂದಿನ ಘಟನೆಯನ್ನು ಇದೀಗ ನೆನಪಿಸಿಕೊಂಡಿದ್ದಾರೆ. ಅಲ್ಲದೆ, ಈ ವಿಚಾರ ಅಂದು ಪ್ರತಿಯೊಬ್ಬ ಭಾರತೀಯರು ಕೂಡ ಹೆಮ್ಮೆಪಟ್ಟಿದ್ದರು ಎಂದು 42 ವರ್ಷಗಳ ಹಿಂದೆ 1983 ರಲ್ಲಿ ಭಾರತದ ಮೊದಲ ಏಕದಿನ ವಿಶ್ವಕಪ್ ಗೆಲುವನ್ನು ನೆನಪಿಸಿಕೊಂಡರು.

ಹೌದು, ಮೊದಲ ಬಾರಿಗೆ 1983ರ ಜೂ.25ರಂದು, ಕಪಿಲ್ ದೇವ್ ಮತ್ತು ಅವರ ತಂಡವು ಲಾರ್ಡ್ಸ್‌ನಲ್ಲಿ ವೆಸ್ಟ್ ಇಂಡೀಸ್ ಅನ್ನು ಸೋಲಿಸುವ ಮೂಲಕ ಮೊದಲ ಬಾರಿಗೆ ವಿಶ್ವ ಚಾಂಪಿಯನ್ ಪ್ರಶಸ್ತಿಯನ್ನು(ವಿಶ್ವಕಪ್​​) ಗೆದ್ದಿತು.

ವೆಸ್ಟ್ ಇಂಡೀಸ್ ಮೂರನೇ ಬಾರಿಗೆ ವಿಶ್ವಕಪ್ ಗೆಲ್ಲುವ ಗುರಿ ಹೊಂದಿತ್ತು. ಆದರೆ, ಭಾರತ ಅವರ ಹ್ಯಾಟ್ರಿಕ್ ಸಾಧನೆಯನ್ನು ತಡೆಯೊಡ್ಡಿತ್ತು. 1983ರ ವಿಶ್ವಕಪ್ ಅನ್ನು ನೆನಪಿಸಿಕೊಂಡ ಸಚಿನ್, "1983 ರಲ್ಲಿ ಈ ದಿನ ಭಾರತ ವಿಶ್ವಕಪ್ ಗೆದ್ದಾಗ ನನಗೆ ಕೇವಲ 10 ವರ್ಷ. ಆ ಕ್ಷಣ ನನ್ನ ಕನಸನ್ನು ಜಾಗೃತಗೊಳಿಸಿತು ಮತ್ತು ಆ ಕನಸು ನನ್ನ ಪ್ರಯಾಣವಾಯಿತು" ಎಂದು ಹೇಳಿದ್ದಾರೆ. ಈ ಕುರಿತು ತಮ್ಮ ಎಕ್ಸ್​ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಫೈನಲ್​ ಪಂದ್ಯ ಭಾರತವು 54.4 ಓವರ್‌ಗಳಲ್ಲಿ(ಈ ಹಿಂದೆ ಸಿಮಿತ​ 60 ಓವರ್​ಗಳ ಆಟವಾಗಿತ್ತು) 183 ರನ್‌ಗಳಿಗೆ ಆಲೌಟ್ ಆಯಿತು. ಗುರಿಯನ್ನು ಬೆನ್ನಟ್ಟಿದ ವೆಸ್ಟ್​​ ಇಂಡಿಸ್​​ 52 ಓವರ್​​ಗಳಲ್ಲಿ 140 ರನ್​​ ಗಳಿಸಿ ಆಲೌಟ್​​ ಆಗಿತ್ತು. ಈ ಮೂಲಕ 43 ರನ್​ಗಳಿಂದ ಭಾರತ ಗೆದ್ದಿತು.(ಏಜೆನ್ಸೀಸ್​​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net