93 ವರ್ಷದ ಭಾರತೀಯ ಟೆಸ್ಟ್ ಕ್ರಿಕೆಟ್‌ ಇತಿಹಾಸದಲ್ಲೇ ಇದೇ ಮೊದಲು... ವಿಶೇಷ ದಾಖಲೆ ಬರೆದ ಟೀಮ್​ ಇಂಡಿಯಾ! Team India

Team India
Published on

Team India : ಟೀಮ್ ಇಂಡಿಯಾ ಐತಿಹಾಸಿಕ ದಾಖಲೆಯನ್ನು ಸೃಷ್ಟಿಸಿದೆ. ಒಂದೇ ಒಂದು ಟೆಸ್ಟ್ ಪಂದ್ಯದಲ್ಲಿ ಭಾರತ ಐದು ಶತಕಗಳನ್ನು ಗಳಿಸಿದ್ದು ಇದೇ ಮೊದಲು. ಹೆಡಿಂಗ್ಲಿಯಲ್ಲಿ ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ ಈ ವಿಶೇಷ ಸಾಧನೆ ಮಾಡಿದೆ. 1932ರಲ್ಲಿ ಟೆಸ್ಟ್ ಕ್ರಿಕೆಟ್ ಆಡಲು ಪ್ರಾರಂಭಿಸಿದ ನಂತರ ಭಾರತ ತಂಡ ಈ ಅಪರೂಪದ ಸಾಧನೆ ಮಾಡುತ್ತಿರುವುದು ಇದೇ ಮೊದಲು.

ಈ ಹಿಂದೆ ಟೀಮ್ ಇಂಡಿಯಾ ನಾಲ್ಕು ಶತಕಗಳನ್ನು ಗಳಿಸಿದ ಹಲವು ಸಂದರ್ಭಗಳಿವೆ. ಆದರೆ, ಐದು ಶತಕಗಳು ದಾಖಲಾಗಿರುವುದು ಇದೇ ಮೊದಲು. ಹೆಡಿಂಗ್ಲೆ ಟೆಸ್ಟ್‌ನ ಮೊದಲ ಇನ್ನಿಂಗ್ಸ್‌ನಲ್ಲಿ ಯಶಸ್ವಿ ಜೈಸ್ವಾಲ್ (101), ಶುಭಮಾನ್ ಗಿಲ್ (147) ಮತ್ತು ರಿಷಭ್ ಪಂತ್ (134) ಶತಕಗಳನ್ನು ಗಳಿಸಿದರೆ, ಎರಡನೇ ಇನ್ನಿಂಗ್ಸ್‌ನಲ್ಲಿ ಕೆ.ಎಲ್. ರಾಹುಲ್ (137) ಮತ್ತು ರಿಷಭ್ ಪಂತ್ (118) ಶತಕಗಳನ್ನು ಗಳಿಸಿದರು.

1955ರ ನಂತರ ವಿದೇಶಿ ನೆಲದಲ್ಲಿ ಒಂದೇ ಟೆಸ್ಟ್ ಪಂದ್ಯದಲ್ಲಿ ಐದು ಶತಕಗಳನ್ನು ಗಳಿಸಿದ ಮೊದಲ ಪ್ರವಾಸಿ ತಂಡ ಭಾರತ. 70 ವರ್ಷಗಳ ಹಿಂದೆ, ವೆಸ್ಟ್ ಇಂಡೀಸ್ ಪ್ರವಾಸದ ಸಂದರ್ಭದಲ್ಲಿ ಐದು ಆಸ್ಟ್ರೇಲಿಯನ್ ಆಟಗಾರರು ಟೆಸ್ಟ್ ಪಂದ್ಯದಲ್ಲಿ ಶತಕಗಳನ್ನು ಗಳಿಸಿದರು.

ಇನ್ನು ಪಂದ್ಯದ ವಿಷಯಕ್ಕೆ ಬಂದರೆ, ಪ್ರವಾಸಿ ಭಾರತ, ಆತಿಥೇಯ ಇಂಗ್ಲೆಂಡ್‌ ತಂಡಕ್ಕೆ 371 ರನ್‌ಗಳ ಗುರಿಯನ್ನು ನೀಡಿದೆ. ಗುರಿಯನ್ನು ಬೆನ್ನಟ್ಟಿರುವ ಆಂಗ್ಲ ಪಡೆ ನಾಲ್ಕನೇ ದಿನದಾಟದ ಅಂತ್ಯಕ್ಕೆ ವಿಕೆಟ್ ನಷ್ಟವಿಲ್ಲದೆ 21 ರನ್ ಗಳಿಸಿದೆ. ಬೆನ್ ಡಕೆಟ್ (9) ಮತ್ತು ಜ್ಯಾಕ್ ಕ್ರಾಲಿ (12) ಕ್ರೀಸ್‌ನಲ್ಲಿದ್ದಾರೆ. ಕೊನೆಯ ದಿನವಾದ ಇಂದು ಇಂಗ್ಲೆಂಡ್ ಗೆಲ್ಲಲು 350 ರನ್‌ಗಳ ಅಗತ್ಯವಿದೆ. ಅದೇ ರೀತಿ ಭಾರತ ಗೆಲ್ಲಲು 10 ವಿಕೆಟ್‌ಗಳನ್ನು ಪಡೆಯಬೇಕಾಗಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net