ಪಾಕಿಸ್ತಾನ ಕ್ರಿಕೆಟಿಗನ ಜತೆ ಸಂಭ್ರಮಿಸಿದ ಇಶಾನ್​ ಕಿಶಾನ್​! ವಿಡಿಯೋ ವೈರಲ್​... Ishan Kishan

Ishan Kishan
Published on

Ishan Kishan : ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ಭಾರತ ಮತ್ತು ಪಾಕಿಸ್ತಾನ ನಡುವಿನ ಸಂಬಂಧಗಳು ಇನ್ನಷ್ಟು ಹದಗೆಟ್ಟಿವೆ. ಭಾರತ ಮತ್ತು ಪಾಕಿಸ್ತಾನ ಕ್ರಿಕೆಟ್​ ತಂಡಗಳು ಐಸಿಸಿ ಪಂದ್ಯಾವಳಿಗಳಲ್ಲಿ ಮಾತ್ರ ಕ್ರಿಕೆಟ್‌ನಲ್ಲಿ ಸ್ಪರ್ಧಿಸುತ್ತಿವೆ. ಆದರೆ, ಯಾವುದೇ ಪಂದ್ಯವನ್ನು ಪಾಕ್​ ಜತೆ ಆಡಬಾರದೆಂಬ ಕೂಗು ಪಹಲ್ಗಾಮ್​ ದಾಳಿಯ ಬಳಿಕ ಹೆಚ್ಚಾಗಿ ಕೇಳಿಬಂದಿದೆ. ಇದರ ನಡುವೆ, ಟೀಮ್ ಇಂಡಿಯಾ ವಿಕೆಟ್ ಕೀಪರ್ ಇಶಾನ್ ಕಿಶಾನ್ ಪಾಕಿಸ್ತಾನಿ ಆಟಗಾರನೊಂದಿಗೆ ಆಟವಾಡುತ್ತಿರುವುದು ಈಗ ಚರ್ಚೆಯ ವಿಷಯವಾಗಿದೆ.

ಇಂಗ್ಲೆಂಡ್ ಕೌಂಟಿ ಚಾಂಪಿಯನ್‌ಶಿಪ್‌ನಲ್ಲಿ ಈ ಘಟನೆ ನಡೆದಿದೆ. ಭಾರತದ ಆಟಗಾರ ಇಶಾನ್ ಕಿಶಾನ್ ಮತ್ತು ಪಾಕಿಸ್ತಾನಿ ಆಟಗಾರ ಮೊಹಮ್ಮದ್ ಅಬ್ಬಾಸ್ ನಾಟಿಂಗ್‌ಹ್ಯಾಮ್‌ಶೈರ್ ತಂಡಕ್ಕಾಗಿ ಒಟ್ಟಿಗೆ ಆಡುತ್ತಿದ್ದಾರೆ. ಯಾರ್ಕ್‌ಷೈರ್ ವಿರುದ್ಧದ ಪಂದ್ಯದಲ್ಲಿ, ವಿಕೆಟ್ ಕೀಪರ್ ಇಶಾನ್ ಕಿಶಾನ್, ಅಬ್ಬಾಸ್ ಬೌಲಿಂಗ್ ಮಾಡುವಾಗ ಎದುರಾಳಿ ಬ್ಯಾಟ್ಸ್‌ಮನ್ ನೀಡಿದ ಕ್ಯಾಚ್ ಅನ್ನು ಅಚ್ಚುಕಟ್ಟಾಗಿ ಹಿಡಿದರು. ಈ ಸಮಯದಲ್ಲಿ, ಅಬ್ಬಾಸ್ ಮತ್ತು ಇಶಾನ್ ಕಿಶನ್ ಪರಸ್ಪರ ಅಪ್ಪಿಕೊಂಡು ಸಂಭ್ರಮಿಸುತ್ತಿರುವುದು ಕಂಡುಬಂದಿದೆ. ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದ್ದು, ಪರ-ವಿರೋಧ ಚರ್ಚೆಯನ್ನು ಹುಟ್ಟುಹಾಕಿದೆ.

ಈ ಪಂದ್ಯದಲ್ಲಿ ಇಶಾನ್ ಕಿಶಾನ್ ತಮ್ಮ ಬ್ಯಾಟಿಂಗ್​ನಲ್ಲಿ ಮಿಂಚಿದರು. 98 ಎಸೆತಗಳಲ್ಲಿ 12 ಬೌಂಡರಿ ಮತ್ತು ಒಂದು ಸಿಕ್ಸರ್ ನೆರವಿನಿಂದ 87 ರನ್ ಗಳಿಸಿದರು. ಇದರೊಂದಿಗೆ ನಾಟಿಂಗ್‌ಹ್ಯಾಮ್‌ಶೈರ್ ಮೊದಲ ಇನ್ನಿಂಗ್ಸ್‌ನಲ್ಲಿ 487 ರನ್ ಗಳಿಸಿತು. ಆ ನಂತರ, ಯಾರ್ಕ್‌ಷೈರ್ ಎರಡನೇ ದಿನದ ಆಟದ ಅಂತ್ಯಕ್ಕೆ ಮೊದಲ ಇನ್ನಿಂಗ್ಸ್‌ನಲ್ಲಿ ಮೂರು ವಿಕೆಟ್ ನಷ್ಟಕ್ಕೆ 153 ರನ್ ಗಳಿಸಿದೆ.

ಇದೇ ಸಂದರ್ಭದಲ್ಲಿ ಇಶಾನ್ ಕಿಶಾನ್ ನಾಟಿಂಗ್‌ಹ್ಯಾಮ್‌ಶೈರ್ ಜೊತೆ ಅಲ್ಪಾವಧಿಯ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ. ದಕ್ಷಿಣ ಆಫ್ರಿಕಾದ ಆಟಗಾರ ಕೈಲ್ ವೆರೈನ್ ರಾಷ್ಟ್ರೀಯ ತಂಡಕ್ಕೆ ಆಡಲು ತೆರಳಿದ ನಂತರ ನಾಟಿಂಗ್‌ಹ್ಯಾಮ್‌ಶೈರ್ ಇಶಾನ್ ಕಿಶಾನ್ ಅವರನ್ನು ಎರಡು ಪಂದ್ಯಗಳಿಗೆ ತೆಗೆದುಕೊಂಡಿದೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net