

ಮುಂಬೈ: ಇಲ್ಲಿನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಏಕದಿನ ವಿಶ್ವಕಪ್ ಪಂದ್ಯದಲ್ಲಿ ಹಾಲಿ ಚಾಂಪಿಯನ್ಸ್ ಇಂಗ್ಲೆಂಡ್ ವಿರುದ್ಧ ಆಲ್ರೌಂಡ್ ಪ್ರದರ್ಶನದ ಫಲವಾಗಿ ದಕ್ಷಿಣ ಆಫ್ರಿಕಾ ತಂಡವು 229 ರನ್ಗಳ ಭರ್ಜರಿ ಜಯಗಳಿಸಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ದಕ್ಷಿಣ ಆಫ್ರಿಕಾ ತಂಡವು ಹೆನ್ರಿಚ್ ಕ್ಲಾಸಿನ್ (109 ರನ್, 67 ಎಸೆತ, 12 ಬೌಂಡರಿ, 4 ಸಿಕ್ಸರ್), ರೀಜಾ ಹೆನ್ಡ್ರಿಕ್ಸ್ (85 ರನ್, 75 ಎಸೆತ, 9 ಬೌಂಡರಿ, 3 ಸಿಕ್ಸರ್), ಮಾರ್ಕೋ ಜೇನ್ಸನ್ (75 ರನ್, 42 ಎಸೆತ, 3 ಬೌಂಡರಿ, 6 ಸಿಕ್ಸರ್), ರಾಸ್ಸಿ ವ್ಯಾನ್ ಡೆರ್ ಡಸ್ಸೆನ್ (60 ರನ್, 61 ಎಸೆತ, 8 ಬೌಂಡರಿ) ಬಿರುಸಿನ ಬ್ಯಾಟಿಂಗ್ ಫಲವಾಗಿ 7 ವಿಕೆಟ್ ನಷ್ಟಕ್ಕೆ 50 ಓವರ್ಗಳಲ್ಲಿ 399 ರನ್ ಗಳಿಸಿತ್ತು.
ಸವಾಲಿನ ಮೊತ್ತ ಬೆನ್ನತ್ತಿದ್ದ ಇಂಗ್ಲೆಂಡ್ ತಂಡವು ಯಾವುದೇ ಪ್ರತಿರೋಧವನ್ನು ತೋರದೆ 22 ಓವರ್ಗಳಲ್ಲಿ 170 ರನ್ಗಳಿಗೆ ಆಲೌಟ್ ಆಯಿತು. ದಕ್ಷಿಣ ಆಫ್ರಿಕಾ ಪರ ಗೆರಾಲ್ಡ್ ಕೋಟ್ಜೀ (4-0-35-3), ಲುಂಗಿ ಎನ್ಗಿಡಿ (5-1-26-2), ಮಾರ್ಕೋ ಜೇನ್ಸನ್ (5-0-35-2), ಕಗಿಸೋ ರಬಾಡ (6-1-38-1), ಕೇಶವ್ ಮಹಾರಾಜ್ (2-0-27-1) ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.