ಬಿಗ್​ಬಾಸ್​ ವಿನ್ನರ್​ಗೆ ಹಿಟ್​ಮ್ಯಾನ್​ ರೋಹಿತ್​ ಸರ್ಪ್ರೈಸ್​ ಗಿಫ್ಟ್​ ನೀಡಿದ್ದೇಕೆ? ಇಲ್ಲಿದೆ ಕುತೂಹಲಕಾರಿ ಸಂಗತಿ!

Rohith
Published on

ಹೈದರಾಬಾದ್​: ಟೀಮ್​ ಇಂಡಿಯಾದ ಆರಂಭಿಕ ಆಟಗಾರ ಹಿಟ್​ಮ್ಯಾನ್​ ರೋಹಿತ್​ ಶರ್ಮಾ ಅವರು ತೆಲುಗಿನ ನಾಲ್ಕನೇ ಆವೃತ್ತಿಯ ಬಿಗ್​ಬಾಸ್​ ವಿಜೇತ ಅಭಿಜಿತ್​ಗೆ ವಿಶೇಷ ಉಡುಗೊರೆಯೊಂದನ್ನು ಕಳುಹಿಸಿಕೊಟ್ಟಿದ್ದಾರೆ.

ಉಡುಗೊರೆ ಮಾತ್ರವಲ್ಲದೆ ದೂರವಾಣಿ ಕರೆ ಮೂಲಕ ಉಭಯ ಕುಶಲೋಪರಿಯನ್ನು ವಿಚಾರಿಸಿದ್ದಾರೆ. ಅಂದಹಾಗೆ ಉಡುಗೊರೆಯನ್ನಾಗಿ ತಮ್ಮ ಹಸ್ತಾಕ್ಷರವುಳ್ಳ ಟೀಮ್​ ಇಂಡಿಯಾದ ಜರ್ಸಿಯನ್ನು ಅಭಿಜಿತ್​ಗೆ ರೋಹಿತ್​ ಕಳುಹಿಸಿಕೊಟ್ಟಿದ್ದಾರೆ. ಟ್ವಿಟರ್​ನಲ್ಲಿ ಫೋಟೋ ಶೇರ್​ ಮಾಡುವ ಮೂಲಕ ಈ ವಿಚಾರವನ್ನು ಅಭಿಜಿತ್​ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ. ಅಲ್ಲದೆ, ಹನುಮ ವಿಹಾರಿ ಅವರಿಗೂ ಉತ್ತಮ ಪ್ರದರ್ಶನ ನೀಡಿದ್ದಕ್ಕೆ ಶುಭಕೋರಿ, ಆದಷ್ಟು ಬೇಗ ಗಾಯದ ಸಮಸ್ಯೆಯಿಂದ ಚೇತರಿಸಿಕೊಳ್ಳುವಂತೆ ಹಾರೈಸಿದ್ದಾರೆ.

ತೆಲುಗು ಬಿಗ್​ಬಾಸ್ ಸೀಸನ್​ ಬಗ್ಗೆ ಮಾತನಾಡುವಾಗ ವಿಹಾರಿ, ವಿಜೇತ ಅಭಿಜಿತ್​ ಬಗ್ಗೆ ರೋಹಿತ್​ ಜತೆ ಚರ್ಚಿಸಿದ್ದಾರೆ. ಅಲ್ಲದೆ, ಅಭಿಜಿತ್​, ರೋಹಿತ್​ ಶರ್ಮಾರ ದೊಡ್ಡ ಅಭಿಮಾನಿ ಎಂತಲು ಹೇಳಿದ್ದಾರೆ. ತಕ್ಷಣ ಅಭಿಜಿತ್​ಗೆ ಕರೆ ಮಾಡಿದ ರೋಹಿತ್​, ಅಭಿಜಿತ್​ಗೆ ಸರ್ಪ್ರೈಸ್​ ನೀಡಿದ್ದಾರೆ.

ಕೇವಲ ಮಾತನಾಡದೇ ಅಭಿಜಿತ್​ಗೆ ರೋಹಿತ್​ ತಮ್ಮ ಹಸ್ತಾಕ್ಷರವುಳ್ಳ ಟೀಮ್​ ಇಂಡಿಯಾ ಜರ್ಸಿ ಸಹ ಗಿಫ್ಟ್​ ನೀಡಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net