"ನೀನ್ನಿನ್ನು..." ಆಂಗ್ಲರ ವಿರುದ್ಧ 'ಯಶಸ್ವಿ' ಶತಕ; ಕ್ರೀಸ್​ನಲ್ಲಿದ್ದ ಜೈಸ್ವಾಲ್​ಗೆ​ ರೋಹಿತ್​ ಶರ್ಮ ಸಂದೇಶ! | Rohit Sharma

ವಿಜಯವಾಣಿ - 2025-08-03T115421.353
Published on

Rohit Sharma: ನಿನ್ನೆ (ಆ.02) ಓವಲ್​ ಮೈದಾನದಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಐದನೇ ಹಾಗೂ ಕೊನೆಯ ಟೆಸ್ಟ್​ ಪಂದ್ಯದ 3ನೇ ದಿನದಾಟದಲ್ಲಿ ಯಶಸ್ವಿ ಜೈಸ್ವಾಲ್ ಭರ್ಜರಿ ಶತಕ ದಾಖಲಿಸಿದರು. ಟೀಮ್ ಇಂಡಿಯಾ ಪರ ಅದ್ಭುತ ಓಪನಿಂಗ್ ಪ್ರದರ್ಶನ ನೀಡಿದ ಜೈಸ್ವಾಲ್​, ದಿಗ್ಗಜ ಕ್ರಿಕೆಟಿಗರ ಮೆಚ್ಚುಗೆಗೆ ಪಾತ್ರರಾದರು. ಈ ವೇಳೆ ಸ್ಟೇಡಿಯಂಗೆ ಹಾಜರಾಗಿದ್ದ ಟೀಮ್ ಇಂಡಿಯಾ ಮಾಜಿ ಕ್ಯಾಪ್ಟನ್​, ಹಿಟ್​ಮ್ಯಾನ್ ರೋಹಿತ್ ಶರ್ಮ, ಜೈಸ್ವಾಲ್ ಪ್ರದರ್ಶನವನ್ನು ಪ್ರೋತ್ಸಾಹಿಸಿದ್ದಾರೆ.

ಊಟದ ಬ್ರೇಕ್​ಗೂ ಮುನ್ನ ಭರ್ಜರಿ ಶತಕದಾಟ ತೋರಿದ ಜೈಸ್ವಾಲ್ (118 ರನ್​​, 164 ಎಸೆತ) ಸ್ಟ್ಯಾಂಡ್ಸ್​ನಲ್ಲಿ ರೋಹಿತ್ ಕುಳಿತಿರುವುದನ್ನು ಕಂಡಿದ್ದಾರೆ. ಈ ವೇಳೆ ಚಪ್ಪಾಳೆ ತಟ್ಟುತ್ತಿದ್ದ 'ಹಿಟ್​ಮ್ಯಾನ್'​, ಜೈಸ್ವಾಲ್​ರನ್ನು ನೋಡುತ್ತಲೇ, 'ನೀನ್ನಿನ್ನು ಕೆಲ ಹೊತ್ತು ಕ್ರೀಸ್​ಗೆ ಅಂಟಿ ನಿಲ್ಲಬೇಕು' ಎಂದು ಹುರಿದುಂಬಿಸಿದ್ದರಂತೆ. ಈ ಕುರಿತು ಸ್ವತಃ ಯಶಸ್ವಿ ಜೈಸ್ವಾಲ್​ ಪ್ರತಿಕ್ರಿಯಿಸಿದ್ದು, ರೋಹಿತ್ ಹೇಳಿದ ಸಂದೇಶವೇನು ಎಂಬುದನ್ನು ಸ್ಪಷ್ಟವಾಗಿ ತಿಳಿಸಿದ್ದಾರೆ.

"ವಿಕೆಟ್​ ಕಳೆದುಕೊಳ್ಳದಂತೆ ಆಡುವುದು ಬಹಳ ಕಷ್ಟಕರವಾಗಿತ್ತು. ನನ್ನ ಆಟದ ಪೂರ ಅವಧಿ ಬಹಳ ಆನಂದಿಸುತ್ತಿದ್ದೆ. ಖುಷಿಯಿಂದಲೇ ಬ್ಯಾಟಿಂಗ್ ಮಾಡುತ್ತಿದ್ದೆ. ಮಾನಸಿಕವಾಗಿ ನಾನು ರೆಡಿಯಿದ್ದೆ. ಹೇಗೆ ಆಡಬೇಕು, ಹೇಗೆ ಇಂಗ್ಲೆಂಡ್​ ಬೌಲರ್​ಗಳನ್ನು ಎದುರಿಸಬೇಕೆಂದು. ನಾನು ಶತಕ ಬಾರಿಸಿದ ವೇಳೆ ರೋಹಿತ್ ಅಣ್ಣ ಸ್ಟ್ಯಾಂಡ್ಸ್​ನಲ್ಲಿ ಕುಳಿತಿದ್ದನ್ನು ಗಮನಿಸಿದೆ. ಇದೇ ಸಮಯಕ್ಕೆ ಅವರು ಕೂಡ ನನ್ನನ್ನು ನೋಡುತ ಚಪ್ಪಾಳೆ ತಟ್ಟುತ್ತಿದ್ದರು. ಅವರು, ನಾನಿನ್ನು ಹೆಚ್ಚು ಸಮಯ ಬ್ಯಾಟಿಂಗ್ ಮಾಡಬೇಕು ಎಂದರು. ನನ್ನ ಕ್ರಿಕೆಟ್​ ಕರಿಯರ್​ನಲ್ಲಿ ರೋಹಿತ್ ಮತ್ತು ವಿರಾಟ್​ ಕೊಹ್ಲಿಯಿಂದ ಸಾಕಷ್ಟು ಕಲಿತಿದ್ದೇನೆ" ಎಂದು ಜೈಸ್ವಾಲ್ ಹೇಳಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net