ಆಫ್ಘಾನಿಸ್ತಾನ ವಿರುದ್ಧ ಗೆದ್ದ ಬೆನ್ನಲ್ಲೇ ಭಾರತ ತಂಡದಲ್ಲಿ ಮಹತ್ವದ ಬದಲಾವಣೆ! ಸುಳಿವು ಕೊಟ್ಟ ರೋಹಿತ್ ಶರ್ಮಾ

Untitled design - 2024-06-21T143745.907
Published on

ವೆಸ್ಟ್​ ಇಂಡೀಸ್​: ನಿನ್ನೆ (ಜೂ.20) ಇಲ್ಲಿನ ಕೆನ್ಸಿಂಗ್ಟನ್ ಓವಲ್ ಬಾರ್ಬಡೋಸ್ ಮೈದಾನದಲ್ಲಿ ನಡೆದ ಆಫ್ಘಾನಿಸ್ತಾನ ಮತ್ತು ಟೀಂ ಇಂಡಿಯಾ ನಡುವಿನ ಐಸಿಸಿ ಟಿ20 ವಿಶ್ವಕಪ್​ ಸೂಪರ್ 8 ಕ್ಲ್ಯಾಶ್​ನಲ್ಲಿ 47 ರನ್​ಗಳಿಂದ ಭಾರತ ಭರ್ಜರಿ ಜಯ ದಾಖಲಿಸಿತು. ಈ ಪಂದ್ಯದಲ್ಲಿ ಟೀಂ ಇಂಡಿಯಾದ 360 ಡಿಗ್ರಿ ಬ್ಯಾಟ್ಸ್​ಮನ್​ ಎಂದೇ ಖ್ಯಾತಿ ಪಡೆದಿರುವ ಸೂರ್ಯಕುಮಾರ್​ ಯಾದವ್ ಅವರ ಆಕರ್ಷಕ ಬ್ಯಾಟಿಂಗ್ ವೈಖರಿ ತಂಡದ ಗೆಲುವಿಗೆ ಪ್ರಮುಖ ಕಾರಣವಾಯಿತು.

ಟಾಸ್​ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ಟೀಂ ಇಂಡಿಯಾ, ಆಫ್ಘಾನಿಸ್ತಾನಕ್ಕೆ ಬೌಲಿಂಗ್​ ಮಾಡುವಂತೆ ಆಹ್ವಾನಿಸಿತು. 20 ಓವರ್​ನಲ್ಲಿ 8 ವಿಕೆಟ್ ನಷ್ಟಕ್ಕೆ 181 ರನ್​ ಕಲೆಹಾಕಿದ ಭಾರತ, ಎದುರಾಳಿಗಳಿಗೆ 182 ರನ್​ಗಳ ಗುರಿಯನ್ನು ಚೇಸ್​ ಮಾಡುವಂತೆ ಸವಾಲು ಎಸೆಯಿತು. ಇದನ್ನು ತಲುಪುವಲ್ಲಿ ಎಡವಿದ ಆಫ್ಘಾನಿಸ್ತಾನದ ಬ್ಯಾಟ್ಸ್​ಮನ್​ಗಳು, ಕೇವಲ 134ಕ್ಕೆ ಆಲ್​ಔಟ್​ ಆಗುವ ಮೂಲಕ ಟೀಂ ಇಂಡಿಯಾಗೆ ಗೆಲುವಿನ ಕಿರೀಟ ಮುಡಿಸಿತು.

ಭಾರತದ ಪರ ಸೂರ್ಯಕುಮಾರ್ ಯಾದವ್​ (53 ರನ್​, 28 ಎಸೆತ, 5 ಫೊರ್, 3 ಸಿಕ್ಸರ್) ಹಾಗೂ ಜಸ್​ಪ್ರಿತ್ ಬುಮ್ರಾ (3 ವಿಕೆಟ್​, 4 ಓವರ್​, 7 ರನ್​) ಬಾರತ ತಂಡದ ಗೆಲುವಿಗೆ ಪ್ರಮುಖ ಕಾರಣರಾದರು. ಸದ್ಯ ಐಸಿಸಿ ವಿಶ್ವಕಪ್​ ಟೂರ್ನಿಯಲ್ಲಿ ಸತತವಾಗಿ ಅದ್ಭುತ ಪ್ರದರ್ಶನ ನೀಡುತ್ತಿರುವ ಟೀಂ ಇಂಡಿಯಾಗೆ ಎಲ್ಲಿಲ್ಲದ ಪ್ರಶಂಸೆ, ಮೆಚ್ಚುಗೆಗಳು ಹರಿದುಬರುತ್ತಿವೆ. ರೋಹಿತ್ ಶರ್ಮಾ ನಾಯಕತ್ವದಲ್ಲಿ ಈ ಬಾರಿಯ ವಿಶ್ವಕಪ್ ಚಾಂಪಿಯನ್ ಪಟ್ಟ ದೊರೆಯುವುದು ಖಚಿತ ಎಂದು ಕ್ರಿಕೆಟ್ ಅಭಿಮಾನಿಗಳು ಭರವಸೆ ವ್ಯಕ್ತಪಡಿಸಿದ್ದಾರೆ.

ಇನ್ನು ತಂಡದ ಗೆಲುವನ್ನು ಕೊಂಡಾಡಿದ ನಾಯಕ ರೋಹಿತ್ ಶರ್ಮಾ,"ನಾವು ಆಯಾ ಪಿಚ್​ಗಳ ಪರಿಸ್ಥಿತಿಗಳನ್ನು ಗಮನಿಸುತ್ತೇವೆ ಮತ್ತು ಆಟಗಾರರ ಸಾಮರ್ಥ್ಯಗಳನ್ನು ಅರಿತಿದ್ದೇವೆ. ಪರಿಸ್ಥಿತಿಗೆ ಅನುಗುಣವಾಗುವಂತೆ ತಂಡದ ಆಟಗಾರರನ್ನು ಕಣಕ್ಕಿಳಿಸುವ ಬಗ್ಗೆ ಮಾತುಕತೆ ಮಾಡ್ತೇವೆ. ಈ ಪಂದ್ಯದಲ್ಲಿಯೂ ಸಹ ಹಾಗೇ ಮಾಡಿದ್ದು, ಅಗತ್ಯವಿದ್ದರೆ ಹೊಂದಾಣಿಕೆಗಳನ್ನು ಮಾಡಲು ನಾವು ಸಿದ್ಧ. ಮುಂದಿನ ಬಾರಿ ಷರತ್ತುಗಳ ಪ್ರಕಾರ, ವೇಗಿಗಳೊಂದಿಗೆ ಮುನ್ನುಗ್ಗುತ್ತೇವೆ. ನಮ್ಮ ತಂಡದ ಮೂವರು ಸ್ಪಿನ್ನರ್‌ಗಳು ಕಳೆದ ಪಂದ್ಯಗಳಲ್ಲಿ ಹಾಗೂ ಇಂದಿನ ಮ್ಯಾಚ್​ನಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿದ್ದಾರೆ" ಎಂದು ಹೇಳಿದರು,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net