More

  ಟೀಮ್​ ಇಂಡಿಯಾದ ಈ ಆಟಗಾರನ ಜತೆ ಯಾರೂ ಹೆಚ್ಚು ಮಾತನಾಡುವುದಿಲ್ಲ: ಅಕ್ಷರ್​ ಪಟೇಲ್​ ಶಾಕಿಂಗ್​ ಹೇಳಿಕೆ

  ನವದೆಹಲಿ: ಟಿ20 ವಿಶ್ವಕಪ್ ಅಂಗವಾಗಿ ಗುರುವಾರ (ಜೂನ್​ 20) ಅಫ್ಘಾನಿಸ್ತಾನ ವಿರುದ್ಧ ನಡೆದ ಪಂದ್ಯದಲ್ಲಿ ಟೀಮ್​ ಇಂಡಿಯಾ ಜಯಭೇರಿ ಬಾರಿಸಿದ್ದು ಗೊತ್ತೇ ಇದೆ. ಸೂಪರ್ 8ರ ಮೊದಲ ಪಂದ್ಯದಲ್ಲಿ ರೋಹಿತ್ ಪಡೆಗೆ ಶುಭಾರಂಭ ಸಿಕ್ಕಿದೆ. ಆದರೆ, ಈ ಪಂದ್ಯದ ನಂತರ ಟೀಮ್​ ಇಂಡಿಯಾದ ಆಲ್ ರೌಂಡರ್ ಅಕ್ಷರ್ ಪಟೇಲ್ ಕುತೂಹಲಕಾರಿ ಕಾಮೆಂಟ್ ಮಾಡಿದ್ದಾರೆ. ಸದ್ಯ ತಂಡದಲ್ಲಿರುವ ಸ್ಟಾರ್ ಆಟಗಾರನ ಜತೆ ಯಾರೂ ಹೆಚ್ಚು ಮಾತನಾಡುವುದಿಲ್ಲ ಎಂದು ತಿಳಿಸಿದ್ದಾರೆ. ಆ ಆಟಗಾರ ಯಾರು ಎಂದು ನೀವು ಯೋಚಿಸುತ್ತಿದ್ದೀರಾ? ಅವರೇ ಜಸ್ಪ್ರೀತ್​ ಬುಮ್ರಾ.

  ಬೌಲಿಂಗ್ ವಿಭಾಗದಲ್ಲಿ ಟೀಮ್​ ಇಂಡಿಯಾ ಬುಮ್ರಾರಂತಹ ದೊಡ್ಡ ಅಸ್ತ್ರವನ್ನೇ ಹೊಂದಿದೆ. ವರ್ಷಾನುಗಟ್ಟಲೆ ಅದೇ ತೀಕ್ಷ್ಣ ಬೌಲಿಂಗ್‌ ಮಾಡುತ್ತಿದ್ದಾರೆ. 2022ರ ಟಿ20 ವಿಶ್ವಕಪ್​ನಲ್ಲಿ ಬುಮ್ರಾ ಕೊರತೆ ಎದ್ದು ಕಾಣುತ್ತಿತ್ತು. ಈ ಬಾರಿ ಆ ಆತಂಕ ದೂರವಾಗಿದೆ. ಬುಮ್ರಾ ಅವರು ಉತ್ತಮ ಲಯದಲ್ಲಿದ್ದಾರೆ. ಪಾಕಿಸ್ತಾನ ವಿರುದ್ಧ ಭಾರತ ತಂಡ 119 ರನ್​​ಗಳ ಸಾಧಾರಣ ಗುರಿ ನೀಡಿದಾಗಲೂ ಮಿಂಚಿನ ಬೌಲಿಂಗ್​ ದಾಳಿ ಮಾಡುವ ಮೂಲಕ ಬುಮ್ರಾ ಜಯ ತಂದುಕೊಟ್ಟರು. ಪ್ರಸಕ್ತ ಟಿ20 ವಿಶ್ವಕಪ್‌ನಲ್ಲಿ ಟೀಮ್​ ಇಂಡಿಯಾ ಪರ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

  ಬುಮ್ರಾ ಅವರ ಯಶಸ್ವಿ ವೃತ್ತಿಜೀವನವು ಮುಖ್ಯವಾಗಿ ಅವರ ವಿಶಿಷ್ಟ ಬೌಲಿಂಗ್ ಶೈಲಿ ಮತ್ತು ಅವರ ತಂತ್ರಗಳಿಂದ ಕೂಡಿದೆ. ಅದಕ್ಕಾಗಿಯೇ ತಂಡದ ಯಾವುದೇ ಆಟಗಾರರು ಬುಮ್ರಾ ಅವರೊಂದಿಗೆ ಬೌಲಿಂಗ್ ಬಗ್ಗೆ ಚರ್ಚಿಸುವುದೇ ಇಲ್ಲ, ಆಟಗಾರರು ಮಾತ್ರವಲ್ಲದೆ ಬೌಲಿಂಗ್ ಕೋಚ್ ಮತ್ತು ಮುಖ್ಯ ಕೋಚ್ ಕೂಡ ಬುಮ್ರಾ ಅವರೊಂದಿಗೆ ಹೇಗೆ ಬೌಲಿಂಗ್ ಮಾಡಬೇಕೆಂದು ಮಾತನಾಡುವುದಿಲ್ಲ ಎಂದು ಅಕ್ಷರ್ ಪಟೇಲ್ ಹೇಳಿದ್ದಾರೆ.

  See also  ರಾಧಿಕಾಗೆ ಮಾತ್ರವಲ್ಲ, ಬೇರೆ 8 ನಟಿಯರಿಗೂ ಲಕ್ಷಾಂತರ ಹಣ ಕೊಟ್ಟಿದ್ದ ಯುವರಾಜ್​!

  ಅದ್ಬುತವಾಗಿ ಬೌಲಿಂಗ್ ಮಾಡುವ ಬೌಲರ್​ನನ್ನು ಅನಾವಶ್ಯಕವಾಗಿ ಮಾತನಾಡಿಸಿ, ಮನಸ್ಸನ್ನು ಕೆಡಿಸುವ ಬದಲು ಅವರ ಆಟವನ್ನು ಆನಂದಿಸುವುದು ಉತ್ತಮ ಎಂದು ಟೀಮ್​ ಇಂಡಿಯಾದ ಕೋಚಿಂಗ್ ಸಿಬ್ಬಂದಿ ಅಭಿಪ್ರಾಯಪಟ್ಟಿದ್ದಾರಂತೆ. ಅಕ್ಷರ್ ಪಟೇಲ್ ಕೂಡ ಇದೇ ವಿಷಯವನ್ನು ಪ್ರಸ್ತಾಪಿಸಿದರು. ಮೈದಾನದಲ್ಲಿಯೂ ಕೂಡ ಬುಮ್ರಾಗೆ ಕ್ಯಾಪ್ಟನ್‌ಗಳು ಹೆಚ್ಚು ಸಲಹೆ ನೀಡುತ್ತಿರುವುದು ಕಂಡುಬಂದಿಲ್ಲ. (ಏಜೆನ್ಸೀಸ್​)

  17 ಮಂದಿಗೆ 60 ರೂಮ್ಸ್,​ ಪಕ್ಕದಲ್ಲಿ ಹೆಂಡತಿಯರು! ಪಾಕಿಸ್ತಾನದ ಹೀನಾಯ ಸೋಲಿನ ರಹಸ್ಯ ಬಿಚ್ಚಿಟ್ಟ ಮಾಜಿ ಕ್ರಿಕೆಟಿಗ

  ಪರಪ್ಪನ ಅಗ್ರಹಾರ ಜೈಲಿನಲ್ಲಿ ಪವಿತ್ರಾ ಫಸ್ಟ್​ ನೈಟ್​! ನಿದ್ದೆಯಿಲ್ಲದೇ ಇಡೀ ರಾತ್ರಿ ಚಡಪಡಿಸಿದ ದಚ್ಚು ಗೆಳತಿ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts