ರೋಹಿತ್ ಶರ್ಮಾ 37, ಆರ್ ಅಶ್ವಿನ್ 37, ವಿರಾಟ್ ಕೊಹ್ಲಿ 35... ಟೀಮ್​ ಇಂಡಿಯಾ ಕುರಿತು ಮಾಜಿ ಕೋಚ್​ ಹೇಳಿಕೆ ವೈರಲ್​

Ashwin, Sharma, Kohli
Published on

ನವದೆಹಲಿ: ನಾವು ನೋಡಿರುವಂತೆ ಯಾವುದಾದರು ಪ್ರತಿಷ್ಠಿತ ಟೂರ್ನಿ ಅಥವಾ ಸರಣಿ ಅರಂಭಕ್ಕೂ ಮುನ್ನ ಆ ದೇಶದ ಮಾಜಿ ಆಟಗಾರರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಾರೆ. ಮಾಜಿ ಆಟಗಾರರು ಮಾತನಾಡುವಾಗ ಬೇಕಂತಲೇ ಕೆಲವೊಮ್ಮೆ ಅತಿರೇಕದ ಹೇಳಿಕೆಗಳನ್ನು ಕೊಡುವ ಮೂಲಕ ಎದುರಾಳಿಗಳನ್ನು ಕೆಣಕುವ ಮೂಲಕ ಕೆಂಗಣ್ಣಿಗೆ ಗುರಿಯಾಗುತ್ತಾರೆ. ಇದೀಗ ಆಸ್ಟ್ರೇಲಿಯಾ ಕ್ರಿಕೆಟ್​ ತಂಡದ ಮಾಜಿ ಕೋಚ್​ ಜಾನ್​ ಬುಕಾನನ್​ ಟೀಮ್​ ಇಂಡಿಯಾ ಕುರಿತು ನೀಡಿರುವ ಹೇಳಿಕೆ ವೈರಲ್​ ಆಗುತ್ತಿದೆ.

ಕಳೆದ ಬಾರಿ ಆಸ್ಟ್ರೇಲಿಯಾವು ಭಾರತ ತಂಡದ ವಿರುದ್ಧ ಸೋತ ನಂತರ ನ್ಯಾಥನ್​ ಲ್ಯಾನ್​ ಜೊತೆಗೆ ಇದೀಗ ಕ್ಯಾಮರೂನ್​ ಗ್ರೀನ್​ ಮತ್ತು ಮಿಚೆಲ್​ ಮಾರ್ಷ್​ ಕೂಡ ತಂಡಕ್ಕೆ ಸೇರ್ಪಡೆಯಾಗಿದ್ದು, ಬೌಲಿಂಗ್​ ವಿಭಾಗ ಶಕ್ತಿಯುತವಾಗಿದೆ. ನಮ್ಮ ಈ ಬೌಲಿಂಗ್​ ಲೈನ್​ ಅಪ್​ ಮುಂದೆ ಭಾರತದ ಅಗ್ರ ಕ್ರಮಾಂಕ ಬ್ಯಾಟ್ಸ್​ಮನ್​ಗಳು ಚೆನ್ನಾಗಿ ಬ್ಯಾಟ್​ ಮಾಡಬೇಕಿದೆ. ಇಲ್ಲಿ ಮೈಂಡ್​ಗೇಮ್​ಗಳು ಪ್ರಮುಖ ಪಾತ್ರ ವಹಿಸಲಿದ್ದು, ಸರಣಿಯಲ್ಲಿ ಮಹತ್ವದ ಪಾತ್ರ ವಹಿಸಲಿದೆ.

john buchanan

ಭಾರತ ಹಾಗೂ ಆಸ್ಟ್ರೇಲಿಯಾದಲ್ಲಿರುವ ಆಟಗಾರರು ವೃತ್ತಿಜೀನದ ಹಂತದಲ್ಲಿದ್ದು, ಅವರೆಲ್ಲರೂ ಉತ್ತಮ ಪ್ರದರ್ಶನ ನೀಡಲು ಬಯಸುತ್ತಾರೆ. ಭಾರತ ತಂಡ ನೋಡುವುದಾದರೆ ರೋಹಿತ್​ ಶರ್ಮ (37), ವಿರಾಟ್​ ಕೊಹ್ಲಿ (35), ಆರ್​, ಅಶ್ವಿನ್​ (37) ವಯಸ್ಸಾಗಿದ್ದು, ಆಸ್ಟ್ರೇಲಿಯಾ ತಂಡದಲ್ಲಿ 30 ವರ್ಷದವರು ಇಬ್ಬರು ಮಾತ್ರ ಇದ್ದಾರೆ.

ನನ್ನ ಪ್ರಕಾರ ಈ ಸರಣಿ ಅತ್ಯುತ್ತಮವಾಗಲಿದೆ ಎಂದು ಭಾವಿಸುತ್ತೇನೆ. ಏಕೆಂದರೆ ಎರಡು ಕಡೆ ಬೌಲಿಂಗ್​ ದಾಳಿ ಉತ್ತಮವಾಗಿದ್ದು, ಅಗ್ರ ಕ್ರಮಾಂಕ ಬ್ಯಾಟ್ಸ್​ಮನ್​ಗಳ ಮೇಲೆ ಇದು ಪರಿಣಾಮ ಬೀರಲಿದೆ. ನನ್ನ ಪ್ರಕಾರ ಈ ಸರಣಿಯನ್ನು ಆಸ್ಟ್ರೇಲಿಯಾ ತಂಡ ಗೆಲ್ಲಲಿದ್ದು, ಆತಿಥೇಯರು ಪ್ರಾಬಲ್ಯ ಸಾಧಿಸಲಿದ್ದಾರೆ ಎಂದು ಏಜಾನ್​ ಬುಕಾನನ್​ ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net