ನೆಟ್ಟಿಗರ ಕಾಟಕ್ಕೆ ಬೇಸತ್ತ ಚಹಲ್​ ಗೆಳತಿ ಆರ್​ಜೆ ಮಹ್ವಾಶ್!? RCB ಪಂದ್ಯ ಸೋತ ಬೆನ್ನಲ್ಲೇ ಈ ನಿರ್ಧಾರ | RJ Mahvash

ವಿಜಯವಾಣಿ - 2025-05-31T131022.521
Published on

RJ Mahvash: ಪಂಜಾಬ್ ಕಿಂಗ್ಸ್​ ತಂಡದ ಸ್ಟಾರ್​ ಸ್ಪಿನ್ನರ್​​ ಯುಜ್ವೇಂದ್ರ ಚಹಲ್ ಮತ್ತು ಅವರ ಆಪ್ತ ಸ್ನೇಹಿತೆ ಆರ್.ಜೆ. ಮಹ್ವಾಶ್ ಡೇಟಿಂಗ್ ವದಂತಿಗಳು ಸದ್ಯ ಜಾಲತಾಣಗಳಲ್ಲಿ ಭಾರೀ ಸದ್ದು ಮಾಡುತ್ತಿವೆ. ಕಳೆದ ಕೆಲವು ಪಂದ್ಯಗಳಿಂದ ಪಂಜಾಬ್ ಪರ ಚಹಲ್​ ಆಡದಿರಲು ಅವರ ಬೆರಳಿಗೆ ಬಿದ್ದಿರುವ ಪೆಟ್ಟು ಕಾರಣ. ಹೀಗಾಗಿ ಯುಜಿ ವಿಶ್ರಾಂತಿಯಲ್ಲಿದ್ದಾರೆ. ಮತ್ತೊಂದೆಡೆ, ಚಹಲ್​ ಅನುಪಸ್ಥಿತಿಯಲ್ಲಿಯೂ ಪಂಜಾಬ್ ಪರ ಬೆಂಬಲ ಸೂಚಿಸಿರುವ ಮಹ್ವಾಶ್​, ಕಳೆದ ಆರ್​ಸಿಬಿ ಪಂದ್ಯ ವೀಕ್ಷಿಸಲು ಸ್ಟೇಡಿಯಂಗೆ ಆಗಮಿಸಿದ್ದರು.

ಆರ್​ಸಿಬಿ ಎದುರು ಪಂಜಾಬ್​ ಕ್ವಾಲಿಫೈಯರ್​-1 ಪಂದ್ಯದಲ್ಲಿ ಸೋತ ಬಳಿಕ ಭಾರೀ ನಿರಾಶೆಗೊಂಡ ಮಹ್ವಾಶ್​, ಪಂಜಾಬ್ ಫೈನಲ್ಸ್​ ಆಡಲಿದೆ ಎಂದೇ ನಿರೀಕ್ಷಿಸಿದ್ದರು. ಈ ಕುರಿತು ತಮ್ಮ ಇನ್​ಸ್ಟಾಗ್ರಾಮ್​ ಸ್ಟೋರಿಯಲ್ಲಿ ಪೋಲ್ ಕೂಡ​ ಹಂಚಿಕೊಂಡಿದ್ದರು. ಆದರೆ, ಸೋಲಿನಿಂದ ಬೇಸರಗೊಂಡ ಚೆಲುವೆ, ಇದೀಗ ತಮ್ಮ ಇನ್​ಸ್ಟಾಗ್ರಾಮ್​ ಫೋಟೋ, ವಿಡಿಯೋ ಪೋಸ್ಟ್​ ಆಯ್ಕೆಯಲ್ಲಿ ಕಮೆಂಟ್​ ಸೆಕ್ಷನ್​ ಅನ್ನು ಆಫ್​ ಮಾಡಿದ್ದಾರೆ.

ಪಂದ್ಯದ ಬಳಿಕ ತನ್ನ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಸೆಲ್ಫಿ ಪೋಸ್ಟ್ ಹಾಕಿ, "ನೀನು ಯಾರಿಗೂ ಎಂದಿಗೂ ತಪ್ಪು ಮಾಡಿಲ್ಲ ಎಂಬುದು 'ನಿನಗೆ ತಿಳಿದಿದೆ' ಅನ್ನೋದು ಅತಿ ಮುಖ್ಯ. ನೀವು ಯಾವಾಗಲೂ ನಿಮ್ಮ ಉದ್ದೇಶಗಳಲ್ಲಿ ಪರಿಶುದ್ಧರಾಗಿರುತ್ತೀರಿ. ನಿಮಗೆ ಸರಿ ಅನಿಸಿದಂತೆ ಬದುಕಿ. ಜನರು ಹೇಳುವುದೆಲ್ಲವೂ ಕೇವಲ ಶಬ್ದವಷ್ಟೇ. ಅದನ್ನು ತಿರಸ್ಕರಿಸಿ" ಎಂದು ಬರೆದು ಹಂಚಿಕೊಂಡಿದ್ದರು. ಇದು ಹಲವರ ಅಚ್ಚರಿಗೂ ಕಾರಣವಾಯಿತು. ಇದಾದ ಬೆನ್ನಲ್ಲೇ ಕಮೆಂಟ್​ ಸೆಕ್ಷನ್ ಆಫ್ ಮಾಡಿದ್ದಾರೆ. ಅಸಲಿಗೆ ಚಹಲ್ ಕುರಿತು ಆಗಾಗ್ಗೆ ಕಾಲೆಳೆಯುವ ನೆಟ್ಟಿಗರ ಕಾಟಕ್ಕೆ ಬೇಸತ್ತು ಮಹ್ವಾಶ್​ ಈ ನಿರ್ಧಾರ ಕೈಗೊಂಡಿರಬಹುದು ಎಂದು ಮೇಲ್ನೋಟಕ್ಕೆ ಕಾಣಿಸುತ್ತಿದೆ,(ಏಜೆನ್ಸೀಸ್). ಇದನ್ನೂ ಓದಿ: ಹೇರಾ ಫೇರಿ-3 ಚಿತ್ರದಿಂದ ಹೊರಬಂದ ಪರೇಶ್ ರಾವಲ್:​​ ಬಾಬುರಾವ್​​ ಪಾತ್ರಕ್ಕೆ ಪಂಕಜ್​ ತ್ರಿಪಾಠಿ ಬೆಸ್ಟ್​ ಅಂದ್ರು ಫ್ಯಾನ್ಸ್​! Hera Pheri 3

ಇಲ್ಲಿಂದ ವದಂತಿ

ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಫೈನಲ್ ಹಣಾಹಣಿಯ ಚಾಂಪಿಯನ್ಸ್​ ಟ್ರೋಫಿ ಪಂದ್ಯದಲ್ಲಿ ಕ್ರಿಕೆಟ್ ಅಭಿಮಾನಿಗಳಲ್ಲಿ ಹೊಸ ಗೊಂದಲ ಹುಟ್ಟುಹಾಕಿದ ಟೀಮ್ ಇಂಡಿಯಾ ಸ್ಪಿನ್ನರ್​ ಯುಜ್ವೇಂದ್ರ ಚಹಲ್ ಮತ್ತು ಅವರ ಆಪ್ತ ಸ್ನೇಹಿತೆ ಆರ್.ಜೆ. ಮಹ್ವಾಶ್, ದುಬೈ ಸ್ಟೇಡಿಯಂನಲ್ಲಿ ಫ್ಯಾನ್ಸ್​ಗಳ ಮಧ್ಯೆಯೇ ಕುಳಿತು ಪಂದ್ಯ ವೀಕ್ಷಿಸುವ ಮೂಲಕ ಎಲ್ಲರ ಗಮನ ಸೆಳೆದಿದ್ದರು ಮತ್ತು ವದಂತಿ ಹುಟ್ಟುಹಾಕಿದರು. ಅಂದಿನಿಂದ ಇಂದಿನವರೆಗೂ ಇಬ್ಬರ ಓಡಾಟ, ಸುತ್ತಾಟ ಜೋರಾಗಿದ್ದು, ಇದು ವದಂತಿಗಳಿಗೆ ಮತ್ತಷ್ಟು ಪುಷ್ಠಿ ನೀಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net