ಇದೇ ಕಾರಣಕ್ಕೆ ನಾವು ಸೋತೆವು! ಇಲ್ಲದಿದ್ರೆ... ಪಂದ್ಯ ಸೋತ ಬೆನ್ನಲ್ಲೇ ಕ್ಯಾಪ್ಟನ್​ ಗಿಲ್​ ಆಡಿದ ಮಾತುಗಳಿವು | GT vs MI

ವಿಜಯವಾಣಿ - 2025-05-31T123012.545
Published on

GT vs MI: ಮೇ.30ರಂದು ನಡೆದ ಐಪಿಎಲ್​ ಪ್ಲೇಆಫ್​ ಹಂತದ ಎಲಿಮಿನೇಟರ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಎದುರು​ 20 ರನ್​ನಿಂದ ಕ್ವಾಲಿಫೈಯರ್​-2 ಪಂದ್ಯದಲ್ಲಿ ಆಡುವ ಅವಕಾಶ ಕಳೆದುಕೊಂಡ ಗುಜರಾತ್​ ಟೈಟನ್ಸ್​, ಭಾರೀ ಬೇಸರದಿಂದ ಲೀಗ್​ನಿಂದ ಹೊರನಡೆದಿದೆ. ಗೆಲ್ಲುವ ಅವಕಾಶವನ್ನು ಕೊನೆ ಕ್ಷಣಗಳಲ್ಲಿ ಬ್ಯಾಟರ್​ಗಳ ಬೇಜವಾಬ್ದಾರಿಯಿಂದ ಕಳೆದುಕೊಂಡ ಜಿಟಿ, ಇದೀಗ ತನ್ನ ಐಪಿಎಲ್​ ಫೈನಲ್​ ಕನಸನ್ನು ಎಲಿಮಿನೇಟರ್​ ಸೋಲಿನಿಂದ ಮೊಟಕುಗೊಳಿಸಿದೆ.

ಇನ್ನು ನಿರ್ಣಾಯಕ ಪಂದ್ಯದಲ್ಲಿ ಹೀನಾಯವಾಗಿ ಸೋತ ಬಳಿಕ ಮಾತನಾಡಿದ ಜಿಟಿ ಕ್ಯಾಪ್ಟನ್ ಶುಭಮನ್ ಗಿಲ್​, "ಫೀಲ್ಡಿಂಗ್‌ನಲ್ಲಿನ ಒಂದಷ್ಟು ವೈಫಲ್ಯದಿಂದಾಗಿ ನಾವು ಸೋತೆವು. ಇದೊಂದು ಅದ್ಭುತ ಪಂದ್ಯವಾಗಿತ್ತು. ನಾವು ಸ್ವಲ್ಪ ಅಂತರದಲ್ಲಿ ಸೋತಿದ್ದೇವೆ. ಗುರಿಯನ್ನು ಬೆನ್ನಟ್ಟಲು ನಮಗೆ ಕೊನೆಯ ಮೂರು ಅಥವಾ ನಾಲ್ಕು ಓವರ್‌ಗಳಲ್ಲಿ ಸಾಧ್ಯವಾಗಲಿಲ್ಲ. ಆದರೆ, ಉತ್ತಮವಾಗಿಯೇ ಆಡಿದ್ದೇವೆ. ಮೂರು ಕ್ಯಾಚ್‌ಗಳನ್ನು ಡ್ರಾಪ್​ ಮಾಡಿದೆವು. ಇಂತಹ ಕ್ಯಾಚ್‌ಗಳನ್ನು ಕೈಬಿಟ್ಟಾಗ, ಬೌಲರ್‌ಗಳು ರನ್‌ಗಳನ್ನು ನಿಯಂತ್ರಿಸುವುದು ಬಹಳ ಕಷ್ಟ" ಎಂದರು.

"ಸಾಯಿ ಸುದರ್ಶನ್ ಮತ್ತು ವಾಷಿಂಗ್ಟನ್ ಸುಂದರ್ ಒಳ್ಳೆಯ ಪ್ರದರ್ಶನ ನೀಡಿದರು. ಬ್ಯಾಕ್ ಟು ಬ್ಯಾಕ್​ ವಿಕೆಟ್​ ಹೋಗಿದ್ದೇ ನಮಗೆ ಸಮಸ್ಯೆಯಾಯಿತು. 229 ರನ್‌ಗಳು ಕಷ್ಟದ ಟಾರ್ಗೆಟ್​. ಆದರೂ. ನಾವು ಚೆನ್ನಾಗಿ ಆಡಿದ್ದೇವೆ. 20 ರನ್‌ಗಳಿಂದ ಪಂದ್ಯವನ್ನು ಬಿಟ್ಟುಕೊಟ್ಟಿದ್ದೇವೆ ಅಷ್ಟೇ" ಎಂದು ಗಿಲ್ ಹೇಳಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net