

ಸುಶಾಂತ್ ಸಿಂಗ್ ರಜಪೂತ್ ಸಾವನ್ನಪ್ಪಿ ಇಂದಿಗೆ ಒಂದು ತಿಂಗಳಾಯಿತು. ಅವರ ಸಾವನ ಬಳಿಕ ಇಡೀ ಸಿನಿಮಾರಂಗ ಅವರ ಸಾವಿಗೆ ಕಂಬನಿ ಮಿಡಿಯುತ್ತಿದೆ. ಜತೆಗೆ ಬಾಲಿವುಡ್ನಲ್ಲಿ ಹಲವು ಬದಲಾವಣೆಗಳಿಗೂ ಸುಶಾಂತ್ ಸಾವು ಕಾರಣವಾಗಿದೆ. ಈ ನಡುವೆ ಅವರ ‘ದಿಲ್ ಬೇಚಾರಾ‘ ಚಿತ್ರ ಬಿಡುಗಡೆಗೆ ದಿನಗಣನೆ ಆರಂಭವಾಗಿದೆ. ಚಿತ್ರದ ಟ್ರೇಲರ್ ದಾಖಲೆ ಪ್ರಮಾಣದಲ್ಲಿ ವೀಕ್ಷಣೆಗೊಳಪಟ್ಟಿದೆ.
ದಿಲ್ ಬೇಚಾರಾ ಚಿತ್ರದ ಟೈಟಲ್ ಟ್ರ್ಯಾಕ್ ಸಹ ಈಗಷ್ಟೇ ಬಿಡುಗಡೆಯಾಗಿದ್ದು, ಯೂಟ್ಯೂಬ್ನಲ್ಲಿ ಟ್ರೆಂಡಿಂಗ್ನಲ್ಲಿದೆ. ಇದೀಗ ಇದೇ ಸುಶಾಂತ್ ಹಾಡು ಅಮೆರಿಕದ ಬಾಸ್ಕೇಟ್ ಬಾಲ್ ಪ್ಲೇಯರ್ ಗಮನ ಸೆಳೆದಿದೆ. ಹೌದು, ಅಮೆರಿಕದ ಖ್ಯಾತ ಬಾಸ್ಕೇಟ್ ಬಾಲ್ ಮಾಜಿ ಆಟಗಾರ ರೆಗ್ಗಿ ಮಿಲ್ಲರ್, ಸುಶಾಂತ್ ಹಾಡಿನ ವಿಡಿಯೋ ಹಾಕಿಕೊಂಡು ಸುಶಾಂತ್ ಅವರ ನೆನಪು ಶಾಶ್ವತ. ಅವರು ಜೀವಂತವಾಗಿಲ್ಲ. ಆದರೆ ಅವರು ನೆನಪು ಯಾವತ್ತೂ ಜೀವಂತ’ ಎಂದು ಬರೆದುಕೊಂಡಿದ್ದಾರೆ.
ಇನ್ನು ಚಿತ್ರದ ಟೈಟಲ್ ಟ್ರ್ಯಾಕ್ನಲ್ಲಿ ರೆಗ್ಗಿ ಅವರ ಜೆರ್ಸಿಯನ್ನೇ ಸುಶಾಂತ್ ಧರಿಸಿದ್ದು, ಅದೂ ಕೂಡ ರೆಗ್ಗಿ ಅವರನ್ನು ಸೆಳೆದಿತ್ತು. ಸುಶಾಂತ್ ಡಾನ್ಸ್ ಸಹ ರೆಗ್ಗಿಗೆ ಇಷ್ಟವಾಗಿತ್ತು. ಇನ್ನೇನು ಇದೇ ತಿಂಗಳು 24ರಂದು ಡಿಸ್ನಿ ಹಾಟ್ಸ್ಟಾರ್ನಲ್ಲಿ ದಿಲ್ ಬೇಚಾರಾ ಚಿತ್ರ ತೆರೆಕಾಣಲಿದೆ.
ಇದನ್ನೂ ಓದಿ: ‘ಫ್ರೆಂಚ್ ಬಿರಿಯಾನಿ’ ಬಡಿಸಲು ದಾನಿಶ್ ಸೇಠ್ ರೆಡಿ
ಮುಖೇಶ್ ಛಾಬ್ರಾ ನಿರ್ದೇಶನದ ಈ ಚಿತ್ರದಲ್ಲಿ ಸಂಜನಾ ಸಿಂಘಿ ನಾಯಕಿಯಾಗಿ ನಟಿಸಿದ್ದು, ಇದು ಅವರ ಚೊಚ್ಚಲ ಸಿನಿಮಾ ಆಗಿದೆ. (ಏಜೆನ್ಸೀಸ್)