IPL 2024: ಪಂದ್ಯ ಗೆದ್ದ ತಕ್ಷಣವೇ ಪತ್ನಿ-ಮಗಳಿಗೆ ವಿಡಿಯೋ ಕಾಲ್​ ಮಾಡಿದ ವಿರಾಟ್! ಆರ್​ಸಿಬಿ ಫ್ಯಾನ್ಸ್ ದಿಲ್​​ ಖುಷ್​

WhatsApp Image 2024-03-26 at 1.15.12 PM
Published on

ಬೆಂಗಳೂರು: ಎರಡು ತಿಂಗಳ ಬ್ರೇಕ್ ಬಳಿಕ ಐಪಿಎಲ್​ಗೆ ಮರಳಿದ ಟೀಮ್ ಇಂಡಿಯಾದ ಮಾಜಿ ನಾಯಕ, ರನ್ ಮಷಿನ್ ವಿರಾಟ್ ಕೊಹ್ಲಿ, ನಿನ್ನೆ (ಮಾ.25) ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ಪಂದ್ಯದಲ್ಲಿ ರೋಚಕವಾಗಿ ಗೆದ್ದು ಬೀಗಿದರು. ಐಪಿಎಲ್ ಆವೃತ್ತಿಯ ಎರಡನೇ ಪಂದ್ಯದಲ್ಲಿ ಮೊದಲ ಗೆಲುವು ನೋಡಿದ ಆರ್​ಸಿಬಿಗೆ ಅಭಿಮಾನಿಗಳಿಂದ ಅಭಿನಂದನೆಗಳ ಮಹಾಪೂರವೇ ಹರಿದುಬಂದಿದೆ.

ಇನ್ನು ಪಂಜಾಬ್ ಕಿಂಗ್ಸ್​ ವಿರುದ್ಧದ ಪಂದ್ಯದಲ್ಲಿ ಆಕರ್ಷಕ ಬ್ಯಾಟಿಂಗ್ ಮಾಡಿದ ವಿರಾಟ್​ 49 ಎಸೆತಗಳಲ್ಲಿ 77 ರನ್​ ಗಳಿಸಿದರು. ಇದು ತಂಡದ ಗೆಲುವಿಗೆ ಪ್ರಮುಖ ಕಾರಣವಾಯಿತು. ಪಂದ್ಯ ಗೆದ್ದ ಕೂಡಲೇ ಹರ್ಷೋಧ್ಘಾರದಲ್ಲಿ ಕುಣಿದು ಕುಪ್ಪಳಿಸಿದ ತಂಡದ ಸದಸ್ಯರ ಮಧ್ಯೆ ಬಿಡುವು ಮಾಡಿಕೊಂಡ ಕೊಹ್ಲಿ, ತಮ್ಮ ಪತ್ನಿ ಅನುಷ್ಕಾ ಹಾಗೂ ಪುತ್ರಿ ವಮಿಕಾಗೆ ವಿಡಿಯೋ ಕಾಲ್ ಮಾಡಿ, ಪಂದ್ಯ ಗೆದ್ದ ಬಗ್ಗೆ ಮಾಹಿತಿ ನೀಡಿದರು.

ಸದ್ಯ ಈ ವಿಡಿಯೋ ಆರ್​ಸಿಬಿ ಹಾಗೂ ಕೊಹ್ಲಿ ಅಭಿಮಾನಿಗಳ ಮನಸ್ಸು ಗೆದ್ದಿದ್ದು, ಸಾಮಾಜಿಕ ಜಾಲತಾಣದಲ್ಲಿ ನೋಡುಗರ ಗಮನಸೆಳೆಯುತ್ತಿದೆ. ಇದೇ ಖುಷಿಯಲ್ಲಿ ಮುಂಬರುವ ಪಂದ್ಯಗಳಿಗೆ ಆರ್​ಸಿಬಿ ಭರ್ಜರಿ ತಯಾರಿ ಮಾಡಿಕೊಳ್ಳುವಲ್ಲಿ ಹೆಚ್ಚು ಸಕ್ರಿಯವಾಗಿದೆ.

ಐಪಿಎಲ್​ 2024ರ ಆವೃತ್ತಿಯಲ್ಲಿ ತನ್ನ ಮೊದಲು ಗೆಲುವು ದಾಖಲಿಸಿದ ಆರ್​ಸಿಬಿ, ತವರಿನಲ್ಲೇ ಗೆದ್ದಿದ್ದು ಅಭಿಮಾನಿಗಳಲ್ಲಿ ಭಾರೀ ಸಂತಸ ಕೊಟ್ಟಿದೆ. ಟಾಸ್​ ಗೆದ್ದ ಆರ್​​ಸಿಬಿ ಮೊದಲು ಫೀಲ್ಡಿಂಗ್ ಆಯ್ದುಕೊಂಡಿತು. ಪಂಜಾಬ್ ಕ್ಯಾಪ್ಟನ್ ಶಿಖರ್​ ಧವನ್, ಜಿತೇಶ್​ ಶರ್ಮಾ ನೆರವಿನಿಂದ ಕಿಂಗ್ಸ್​ 20 ಓವರ್​ಗಳಲ್ಲಿ 176 ರನ್​ ಕಲೆಹಾಕಿತು.


ಇನ್ನು ಈ ಗುರಿಯನ್ನು ಬೆನ್ನಟ್ಟಿದ ಆರ್​​ಸಿಬಿ ತಂಡಕ್ಕೆ ಆರಂಭಿಕ, ಕ್ಯಾಪ್ಟನ್ ಫಾಫ್ ವಿಕೆಟ್​ ಬೇಗ ಕಳೆದುಕೊಂಡಿದ್ದು, ದೊಡ್ಡ ಆಘಾತ ತಂದೊಡ್ಡಿತು. ಆದ್ರೆ, ಕ್ರೀಸ್​ನಲ್ಲಿ ಗಟ್ಟಿಯಾಗಿ ನಿಂತ ಕಿಂಗ್ ಕೊಹ್ಲಿ, 49 ಎಸೆತಗಳಲ್ಲಿ 77 ರನ್ ಗಳಿಸಿ ಪೆವಿಲಿಯನ್ ಸೇರಿದರು. ತದನಂತರ ಬ್ಯಾಕ್ ಟು ಬ್ಯಾಕ್ ವಿಕೆಟ್ ಪತನವಾದ ಬೆನ್ನಲ್ಲೇ ಯಾರು ಆಡಲಿದ್ದಾರೆ ಎಂಬ ಗೊಂದಲ ಕಾಡುತ್ತಿದ್ದಂತೆ ಆರ್​ಸಿಬಿಯನ್ನು ಗೆಲುವಿನ ದಡ ಸೇರಿಸಿದ್ದು, ದಿನೇಶ್ ಕಾರ್ತಿಕ್! ಕೇವಲ 10 ಎಸೆತಗಳಲ್ಲಿ ಅಜೇಯ 28 ರನ್ ಗಳಿಸುವ ಮೂಲಕ ಬೆಂಗಳೂರಿಗೆ ಭರ್ಜರಿ ಗೆಲುವು ತಂದುಕೊಟ್ಟರು,(ಏಜೆನ್ಸೀಸ್). 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net