IPL 2024: ಡಿಕೆ, ಅನುಜ್​ ಸಿಕ್ಸರ್​ಗಳ ಅಬ್ಬರ, 174 ರನ್​ ಟಾರ್ಗೆಟ್​ ಸೆಟ್​ ಮಾಡಿದ ಆರ್​​ಸಿಬಿ

WhatsApp Image 2024-03-22 at 9.56.25 PM
Published on

ಚೆನ್ನೈ: ಇಂಡಿಯನ್ ಪ್ರೀಮಿಯರ್ ಲೀಗ್​ 2024ರ ಆವೃತ್ತಿಗೆ ಇಂದು ಅದ್ದೂರಿ ಚಾಲನೆ ದೊರೆತಿದ್ದು, ಗ್ರ್ಯಾಂಡ್ ಓಪನಿಂಗ್ ಕಾರ್ಯಕ್ರಮದಲ್ಲಿ ಬಾಲಿವುಡ್ ತಾರೆಯರು, ಗಾಯಕರ ಹಾಡು, ನೃತ್ಯ ಪ್ರದರ್ಶನದ ಮೂಲಕ ಕ್ರಿಕೆಟ್ ಅಭಿಮಾನಿಗಳನ್ನು ರಂಜಿಸಿದರು. ಇನ್ನು ಕಿಕ್​ಸ್ಟಾರ್ಟ್​ ಪಂದ್ಯದಲ್ಲಿ ಮೊದಲು ಟಾಸ್​ ಗೆದ್ದ ಫಾಫ್ ಡುಪ್ಲೆಸಿಸ್​ ನಾಯಕತ್ವದ ರಾಯಲ್​ ಚಾಲೆಂಜರ್ಸ್​ ಬೆಂಗಳೂರು (RCB) ಬ್ಯಾಟಿಂಗ್ ಆಯ್ದು, 173 ಗುರಿಯನ್ನು ಸಿಎಸ್​ಕೆಗೆ ನೀಡಿದೆ.

ಚೇಪಾಕ್​ ಸ್ಟೇಡಿಯಂನಲ್ಲಿ ಮೊದಲು ಬ್ಯಾಟಿಂಗ್ ಆಯ್ದುಕೊಂಡ ಆರ್​ಸಿಬಿ, ಆರಂಭಿಕ ಬ್ಯಾಟ್ಸ್​ಮನ್​ಗಳಾದ ಫಾಫ್ ಡು ಪ್ಲೆಸಿಸ್​ ಮತ್ತು ವಿರಾಟ್​ ಕೊಹ್ಲಿ ಜೊತೆಯಾಟವನ್ನು ಹೆಚ್ಚಿನ ಸಮಯದವರೆಗೂ ನೋಡುವ ಅವಕಾಶ ಸಿಗಲಿಲ್ಲ. ಪ್ರಾರಂಭದಲ್ಲಿ ಸಿಕ್ಸರ್​ ಸಿಡಿಸಿದ ನಾಯಕ ಫಾಫ್​ 35 ರನ್​ಗಳಿಗೆ ಔಟ್ ಆಗುವ ಮೂಲಕ ಪೆವಿಲಿಯನ್​ ಸೇರಿದರು.

ವಿರಾಟ್​ ಔಟ್​ ಆದ ಬೆನ್ನಲ್ಲೇ ಪಟಿದಾರ್​, ಮ್ಯಾಕ್ಸ್​ವೆಲ್ ಕೂಡ ಹೆಚ್ಚು ರನ್ ಗಳಿಸದೆ ಪೆವಿಲಿಯನ್ ಸೇರಿದರು. ಇನ್ನು ಅಂತಿಮ ಓವರ್​ವರೆಗೂ ಜತೆಯಾಗಿ ನಿಂತ ದಿನೇಶ್ ಕಾರ್ತಿಕ್ ಮತ್ತು ಅನುಜ್​ ರಾವತ್​ ಸಿಕ್ಸ್​, ಫೋರ್​ ಸಿಡಿಸುವ ಮೂಲಕ 20 ಓವರ್​ಗಳಲ್ಲಿ 173 ರನ್​ ಕಲೆಹಾಕುವಲ್ಲಿ ಯಶಸ್ವಿಯಾದರು. ಇದೀಗ ಸಿಎಸ್​ಕೆ 174 ರನ್​ಗಳ ಗುರಿ ನೀಡಿರುವ ಆರ್​ಸಿಬಿ ಹೇಗೆ ತನ್ನ ಎದುರಾಳಿಯನ್ನು ಕಟ್ಟು ಹಾಕಲಿದೆ ಎಂಬುದೇ ರೋಚಕ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net