

ಬೆಂಗಳೂರು: ಐಪಿಎಲ್ ಮುಗಿದಿದೆ, ಆದರೆ ಅದರ ಅಭಿಮಾನಿಗಳು ಮಾತ್ರ ಅದರ ಗುಂಗಿನಿಂದ ಹೊರಬಂದಿಲ್ಲ. ಅದರಲ್ಲೂ ಅತಿ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ಆರ್ಸಿಬಿ ಅಭಿಮಾನಿಗಳಂತೂ ಈಗಾಗಲೇ ಮುಂದಿನ ಐಪಿಎಲ್ಗೆ ಸಕಲ ಸಿದ್ಧತೆ ಮಾಡಿಕೊಳ್ಳಲಾರಂಭಿಸಿದ್ದಾರೆ, ಹಾಗೆಯೇ ಮುಗಿದಿರುವ ಐಪಿಎಲ್ನಲ್ಲಿ ಆರ್ಸಿಬಿ ಎಲ್ಲಿ ಎಡವಿತು, ಹೇಗೆ ಆಡಬೇಕಿತ್ತು ಎನ್ನುವುದರ ವಿಮರ್ಶೆಯನ್ನು ಮುಂದುವರಿಸಿದ್ದಾರೆ.
ನೀವು ಒಂದು ವೇಳೆ ಅರ್ಸಿಬಿಯ ಕಟ್ಟಾ ಅಭಿಮಾನಿಯಾಗಿದ್ದರೆ ನಿಮಗೊಂದು ಸವಾಲಿದೆ. ಹಾಗೆಂದು ಈ ಸವಾಲನ್ನು ನಾವು ಕೊಡುತ್ತಿದ್ದೇವೆ ಎಂದುಕೊಳ್ಳಬೇಡಿ. ಈ ಸವಾಲನ್ನು ಕೊಟ್ಟಿರುವುದು ಕೂಡ ಆರ್ಸಿಬಿ ತಂಡವೇ.
ಆರ್ಸಿಬಿಯ ನಿಮ್ಮಿಷ್ಟದ ಆಟಗಾರರೊಬ್ಬರನ್ನು ಕೇವಲ ಬಿಳಿ ಬಣ್ಣದಲ್ಲಿ ಚಿತ್ರಿಸಲಾಗಿದೆ. ಹಿಂದೆ ಆರ್ಸಿಬಿಯ ಕೆಂಪು ಬಣ್ಣದ ಬ್ಯಾಕ್ಗ್ರೌಂಡ್ ಕೊಡಲಾಗಿದೆ. ಬಿಳಿ ಬಣ್ಣದಲ್ಲಿ ಚಿತ್ರಿಸಲಾಗಿರುವ ಆಟಗಾರ ನಿಂತಿರುವ ಭಂಗಿ ನೋಡಿಯೇ ನೀವು ಅವರನ್ನು ಕಂಡು ಹಿಡಿಯುತ್ತೀರಿ ಎನ್ನುವ ನಂಬಿಕೆ ತಂಡಕ್ಕಿದೆ. ಯಾರೆಂದು ಕಂಡುಹಿಡಿಯಿರಿ ಎಂದು ಟ್ವಿಟ್ಟರ್ನಲ್ಲಿ ಕೇಳಿದೆ.
ಆರ್ಸಿಬಿ ಈ ಸವಾಲಿನ ಟ್ವೀಟ್ ಮಾಡಿ ಅರ್ಧ ಗಂಟೆಯೊಳಗೆ ಸಾವಿರಾರು ಜನರು ಆಟಗಾರರನನ್ನು ಗೆಸ್ ಮಾಡಿ ಕಮೆಂಟ್ ಮಾಡಿದ್ದಾರೆ. ಒಂದು ವೇಳೆ ನಿಮಗೂ ಅದು ಯಾರೆಂದು ತಿಳಿದರೆ ನೀವೂ ಕಮೆಂಟ್ ಮಾಡಿ ಬನ್ನಿ. (ಏಜೆನ್ಸೀಸ್)