

ಧರ್ಮಶಾಲಾ: ಇಲ್ಲಿನ ಕ್ರೀಡಾಂಗಣದಲ್ಲಿ ನಡೆದ ಪಂಜಾಬ್ ಕಿಂಗ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳ ನಡುವಿನ ಭಾರೀ ಹಣಾಹಣಿಯಲ್ಲಿ ಆರ್ಸಿಬಿ 60 ರನ್ಗಳ ಅಂತರದಿಂದ ಪಂಜಾಬ್ ವಿರುದ್ಧ ಗೆದ್ದು ಬೀಗಿತು. ಕಡೆಗೂ ರನ್ ಮಷಿನ್ ಸ್ಪೋಟಕ ಬ್ಯಾಟಿಂಗ್ ಫಲಿಸಿತು ಎಂಬುದೇ ಕ್ರಿಕೆಟ್ ಅಭಿಮಾನಿಗಳ ಸಂತಸ.
ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ದುಕೊಂಡ ಪಂಜಾಬ್ ಕಿಂಗ್ಸ್ ಚಾಲೆಂಜರ್ಸ್ಗೆ ಬ್ಯಾಟಿಂಗ್ ಮಾಡುವಂತೆ ಆಹ್ವಾನಿಸಿತು. ಅದಕ್ಕೆ ಅನುಗುಣವಾಗಿ ಕ್ರೀಸ್ಗೆ ಇಳಿದ ಆರ್ಸಿಬಿ 20 ಓವರ್ಗಳಲ್ಲಿ 241 ರನ್ ಕಲೆಹಾಕುವಲ್ಲಿ ಶಕ್ತವಾಯಿತು. ಆದರೆ, ಈ ಬೃಹತ್ ರನ್ ಬೆನ್ನಟ್ಟಲು ಮುಂದಾದ ಪಂಜಾಬ್ ಹುಲಿಗಳು ಒಬ್ಬರ ಹಿಂದೆ ಮತ್ತೊಬ್ಬರ ವಿಕೆಟ್ ಕಳೆದುಕೊಳ್ಳುವ ಮೂಲಕ ಗೆಲ್ಲುವ ಪಂದ್ಯವನ್ನು ಕೈಚೆಲ್ಲಿತು.
ಸದ್ಯ ಈ ಗೆಲುವು ಆರ್ಸಿಬಿಯ ಪ್ಲೇ-ಆಫ್ ಕನಸನ್ನು ಇನ್ನೂ ಜೀವಂತವಾಗಿರಿಸಿದೆ. ಇದು ಅಭಿಮಾನಿಗಳಲ್ಲಿ ಅತೀವ ಸಂತಸ ಮೂಡಿಸಿದ್ದು, ಮುಂಬರುವ ಪಂದ್ಯಗಳನ್ನು ಗೆದ್ದು ಬನ್ನಿ ಎಂದು ಆಶಿಸುವಂತೆ ಮಾಡಿದೆ.