More

    ಕೊಹ್ಲಿ-ಪಾಟೀದಾರ್ ಅಬ್ಬರ: ಪಂಜಾಬ್‌ಗೆ ಬೃಹತ್ ಸವಾಲೆಸೆದ ಆರ್‌ಸಿಬಿ

    ಧರ್ಮಶಾಲಾ: ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ (92 ರನ್, 47 ಎಸೆತ, 7 ಬೌಂಡರಿ, 6 ಸಿಕ್ಸರ್) ಶತಕವಂಚಿತ ಬ್ಯಾಟಿಂಗ್ ಬಲದಿಂದ ರನ್‌ಮಳೆ ಹರಿಸಿದ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡ ಐಪಿಎಲ್ -17ರ ತನ್ನ 12ನೇ ಲೀಗ್ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ಎದುರು ಬೃಹತ್ ಮೊತ್ತ ಪೇರಿಸಿದೆ.

    ಎಚ್‌ಪಿಸಿಎ ಕ್ರೀಡಾಂಗಣದಲ್ಲಿ ಗುರುವಾರ ನಡೆದ ‘ಮಾಡು ಇಲ್ಲವೆ ಮಡಿ’ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್‌ಗೆ ಇಳಿದ ಆರ್‌ಸಿಬಿ, ಕನ್ನಡಿಗ ವಿದ್ವತ್ ಕಾವೇರಪ್ಪ (36ಕ್ಕೆ 2) ನೀಡಿದ ಆರಂಭಿಕ ಆಘಾತದ ಬಳಿಕ, ವಿರಾಟ್ ಕೊಹ್ಲಿ ಹಾಗೂ ರಜತ್ ಪಾಟೀದಾರ್ (55 ರನ್, 23 ಎಸೆತ, 3 ಬೌಂಡರಿ, 6 ಸಿಕ್ಸರ್) ಭರ್ಜರಿ ಜತೆಯಾಟದ ನೆರವಿನಿಂದ 10 ಓವರ್‌ಗಳಲ್ಲಿ 3 ವಿಕೆಟ್‌ಗೆ 119 ರನ್‌ಗಳಿಸಿದಾಗ ಮಳೆ ಅಡ್ಡಿಪಡಿಸಿತು. ಇದರಿಂದ 25 ನಿಮಿಷ ಆಟ ನಿಲ್ಲಿಸಲಾಗಿತ್ತು. ನಂತರ ಕೊಹ್ಲಿ- ಕ್ಯಾಮರಾನ್ ಗ್ರೀನ್ (46 ರನ್, 27 ಎಸೆತ, 5 ಬೌಂಡರಿ, 1 ಸಿಕ್ಸರ್) ನಡೆಸಿದ ಜತೆಯಾಟದ ಬಲದಿಂದ ಆರ್‌ಸಿಬಿ ಅಂತಿಮವಾಗಿ 7 ವಿಕೆಟ್‌ಗೆ 241 ರನ್‌ಗಳ ಬೃಹತ್ ಮೊತ್ತ ಕಲೆಹಾಕಿದೆ.

    ಪಾಟೀದಾರ್ ಬಿರುಸಿನಾಟ: ಇನಿಂಗ್ಸ್ ಆರಂಭಿಸಿದ ್ಾ ಡು ಪ್ಲೆಸಿಸ್ (9) ಪಂದ್ಯದ 3ನೇ ಓವರ್‌ನಲ್ಲಿ ವಿದ್ವತ್ ಕಾವೇರಪ್ಪಗೆ ವಿಕೆಟ್ ನೀಡಿದರು. ಕೊಹ್ಲಿ-ಪ್ಲೆಸಿಸ್ ಮೊದಲ ವಿಕೆಟ್‌ಗೆ 19 ರನ್‌ಗಳಿಸಿದರು. ನಂತರ ವಿಲ್ ಜಾಕ್ಸ್ (12) ನಿರಾಸೆ ಮೂಡಿಸಿ ಡಗೌಟ್ ಸೇರಿದರು. ಪವರ್ ಪ್ಲೇನಲ್ಲಿ ಇವರಿಬ್ಬರ ವಿಕೆಟ್ ಪಡೆದ ವಿದ್ವತ್ ಆರ್‌ಸಿಬಿಗೆ ಕಡಿವಾಣ ಹೇರಿದರು. ನಂತರ ಕೊಹ್ಲಿ ಜತೆಯಾದ ರಜತ್ ಪಾಟೀದಾರ್ ರನ್‌ಗಳಿಕೆಗೆ ಚುರುಕು ನೀಡಿದರು. ಬಿರುಸಿನಾಟಕ್ಕಿಳಿದ ರಜತ್ ಪಂಜಾಬ್ ಬೌಲರ್‌ಗಳನ್ನು ದಂಡಿಸಿದರು. 3ನೇ ವಿಕೆಟ್‌ಗೆ 32 ಎಸೆತದಲ್ಲಿ 76 ರನ್ ಕಸಿದ ಕೊಹ್ಲಿ-ರಜತ್ ಜೋಡಿ ಪಂಜಾಬ್ ಬೌಲರ್‌ಗಳಿಗೆ ಸವಾಲಾಗುತ್ತ ಸಾಗಿತು. ಇದರಲ್ಲಿ ರಜತ್ ಏಕಾಂಗಿಯಾಗಿ 55 ರನ್ ಸಿಡಿಸಿದರೆ, ಕೊಹ್ಲಿ ಸಾಥ್ ನೀಡಿದರು. ಪಾಟೀದಾರ್ 21 ಎಸೆತಗಳಲ್ಲಿ ಅರ್ಧಶತಕ ಸಿಡಿಸಿ ನಿರ್ಗಮಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts