ಪಂಜಾಬ್​ ಕಿಂಗ್ಸ್​ಗೆ ಟಕ್ಕರ್​ ಕೊಟ್ಟ RCB; ಪಟಿದಾರ್​ ಬಳಗಕ್ಕೆ 7 ವಿಕೆಟ್​ಗಳ ಜಯ

dk - 2025-04-20T191558.666
Published on

RCB : ಪಂಜಾಬ್​ ಕಿಂಗ್ಸ್​ ವಿರುದ್ಧ ಇಂದು(ಏ.20) ನಡೆದ ಪಂದ್ಯದಲ್ಲಿ ರಾಯಲ್​ ಚಾಂಲೆಜರ್ಸ್​ ಬೆಂಗಳೂರು 7 ವಿಕೆಟ್​ಗಳ ಜಯ ಸಾಧಿಸಿತು. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕಳೆದ ಪಂದ್ಯದಲ್ಲಿ ಪಂಜಾಬ್​​ ವಿರುದ್ಧ ಸೋತಿದ್ದ ಆರ್​ಸಿಬಿ ಈ ಮೂಲಕ ಸೇಡು ತೀರಿಸಿಕೊಂಡಿತು.

ಮೊದಲು ಬ್ಯಾಟ್​ ಮಾಡಿದ ಪಂಜಾಬ್​ ನಿಗದಿತ 20 ಓವರ್​ಗಳಲ್ಲಿ 6 ವಿಕೆಟ್​ ನಷ್ಟಕ್ಕೆ 157 ರನ್​ ಹೊಡೆಯಲಷ್ಟೇ ಶಕ್ತವಾಯಿತು. 158 ರನ್​ ಗುರಿ ಬೆನ್ನಟ್ಟಿದ ಆರ್​ಸಿಬಿ ತಂಡ 7 ವಿಕೆಟ್​ಗಳ ಜಯ ಸಾಧಿಸಿತು.

54 ಎಸೆತದಲ್ಲಿ 7 ಬೌಂಡರಿ ಹಾಗೂ 1 ಸಿಕ್ಸರ್​ ಸಿಡಿಸುವ ಮೂಲಕ 73 ರನ್​ ಗಳಿಸಿದ ವಿರಾಟ್​​ ಕೊಹ್ಲಿ ಅಜೇಯರಾಗಿ ಉಳಿದರು. ವಿರಾಟ್​ ಜತೆಯಾಟವಾಡಿದ ದೇವದತ್​ ಪಡಿಕಲ್​(61), ಕ್ಯಾಪ್ಟನ್​ ರಜತ್​ ಪಟಿದಾರ್​ (12) ಹೊಡೆದರು. ಮೂರು ವಿಕೆಟ್​ ನಷ್ಟಕ್ಕೆ 18.5 ಓವರ್​ನಲ್ಲಿ ಗುರಿ ತಲುಪಿತು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net