IPL 2023| ಮೊಹಮ್ಮದ್​ ಸಿರಾಜ್​ ಬಿಗಿ ದಾಳಿ; RCBಗೆ 24 ರನ್​ ಜಯ

Siraj
Published on

ಮೊಹಾಲಿ: ನಾಯಕ ವಿರಾಟ್​ ಕೊಹ್ಲಿ, ಫಾಪ್​ ಡು ಪ್ಲೆಸಿಸ್​ ಭರ್ಜರಿ ಆರಂಭಿಕ ಜೊತೆಯಾಟ ಹಾಗೂ ವೇಗಿ ಮೊಹಮ್ಮದ್​​ ಸಿರಾಜ್​ ಬಿಗಿ ಬೌಲಿಂಗ್​ ದಾಳಿಯ ಫಲವಾಗಿ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡವು ಪಂಜಾಬ್​ ಕಿಂಗ್ಸ್​ ಎದುರು 24 ರನ್​ಗಳ ಜಯ ಸಾಧಿಸಿದೆ.

ಪಂಜಾಬ್​ನ ಮೊಹಾಲಿ ಅಲ್ಲಿರುವ ಐಎಸ್​ ಬಿಂದ್ರಾ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಟಾಸ್​ ಸೋತು ಮೊದಲು ಬ್ಯಾಟಿಂಗ್​ ಮಾಡಿದ RCB 20 ಓವರ್​ಗಳಲ್ಲಿ 4 ವಿಕೆಟ್​ ನಷ್ಟಕ್ಕೆ 174 ರನ್​ ಗಳಿಸಿತ್ತು.

ಕೊಹ್ಲಿ-ಫಾಪ್​ ಭರ್ಜರಿ ಜೊತೆಯಾಟ

ಟಾಸ್​ ಸೊತು ಮೊದಲು ಬ್ಯಾಟಿಂಗ್​ ಮಾಡಿದ ಆರ್​ಸಿಬಿ ತಂಡವು ಹಂಗಾಮಿ ನಾಯಕ ವಿರಾಟ್​ ಕೊಹ್ಲಿ(59 ರನ್​, 47 ಎಸೆತ, 5 ಬೌಂಡರಿ, 1 ಸಿಕ್ಸರ್​​), ಗಾಯದ ಸಮಸ್ಯೆ ನಡುವೆಯೂ ಇಂಪ್ಯಾಕ್ಟ್​​ ಪ್ಲೇಯರ್​ ಆಗಿ ಕಣಕ್ಕಿಳಿದ ಫಾಪ್ ಡು ಪ್ಲೆಸಿಸ್​(84 ರನ್, 56 ಎಸೆತ, 5 ಬೌಂಡರಿ, 5 ಸಿಕ್ಸರ್​) ಬಿರುಸಿನ ಆಟದ ಫಲವಾಗಿ ಮೊದಲ ವಿಕೆಟ್​ಗೆ 16.1 ಓವರ್​ಗಳಲ್ಲಿ 137 ರನ್​​ ಗಳಿಸಿ ಬೇರ್ಪಟ್ಟಿತ್ತು.

ನಾಯಕ ಕೊಹ್ಲಿ ಹಾಗೂ ಪ್ಲೆಸಿಸ್​ ಬೇರ್ಪಟ್ಟ ಬಳಿಕ ಬಂದ ಬ್ಯಾಟ್ಸ್​​ಮ್ಯಾನ್​ಗಳು ಸ್ಪೋಟಕ ಆಟದ ಫಲವಾಗಿ 20 ಓವರ್​ಗಳಲ್ಲಿ 4 ವಿಕೆಟ್​ ನಷ್ಟಕ್ಕೆ 174ರನ್​ ಗಳಿಸಿತ್ತು.

ಕಡಿವಾಣ ಹಾಕಿದ ಬೌಲರ್ಸ್​​

ಗುರಿ ಬೆನ್ನತ್ತಿದ್ದ ಡೆಲ್ಲಿಕ್ಯಾಪಿಟಲ್ಸ್​ ತಂಡಕ್ಕೆ RCB ಬೌಲರ್​ಗಳು ಪಂಜಾಬ್​ ಬ್ಯಾಟ್ಸ್​ಮ್ಯಾನ್​ಗಳಿಗೆ ಕಡಿವಾಣ ಹಾಕಿದರು. ಅಲ್ಪಮೊತ್ತಕ್ಕೆ ತಂಡ ಕುಸಿಯುವ ಭೀತಿಯಲ್ಲಿದ್ದಾಗ ಆರಂಭಿಕ ಪ್ರಭ್​ಸಿಮ್ರಾನ್​ ಸಿಂಗ್​(46 ರನ್​, 30 ಎಸೆತ, 3 ಬೌಂಡರಿ, 4 ಸಿಕ್ಸರ್​​), ವಿಕೆಟ್​ ಕೀಪರ್​ ಬ್ಯಾಟ್ಸ್​​ಮ್ಯಾನ್​ ಜಿತೇಶ್​ ಶರ್ಮಾ(41 ರನ್​, 27 ಎಸೆತ, 2 ಬೌಂಡರಿ, 3 ಸಿಕ್ಸರ್​​) ಫಲವಾಗಿ ಪಂಜಾಬ್​​ ಕಿಂಗ್ಸ್​ ತಂಡವು 18.2 ಓವರ್​ಗಳಲ್ಲಿ 150ರನ್​ಗಳಿಗೆ ಆಲೌಟ್​ ಆಯಿತು.

RCBಪರ ಮೊಹಮ್ಮದ್​ ಸಿರಾಜ್​(4-0-21-4), ವನ್ನಿಂದು ಹಸರಂಗಾ(4-0-39-2), ವೇಯ್ನ್​ ಪಾರ್ನೆಲ್​(3-0-32-1), ಹರ್ಷಲ್​ ಪಟೇಲ್​(3.2-0-22-1) ರನ್​ ನೀಡಿ ಎದುರಾಳಿ ಬ್ಯಾಟ್ಸ್​​ಮ್ಯಾನ್​ಗಳ ವಿಕೆಟ್​ ಪಡೆದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net