RCB vs CSK ಪಂದ್ಯ ನೋಡಲು ಬೈಕ್​ ಮಾರಿದ ಭೂಪ; ಅಸಲಿ ಕಾರಣವೇನು?

MSD Fan
Published on

ಬೆಂಗಳೂರು: ಸೋಮವಾರ RCB ಹಾಗೂ CSK ನಡುವೆ ನಡೆದ ಹೈವೋಲ್ಟೇಜ್​ ಪಂದ್ಯವು ಕ್ರಿಕೆಟ್​ ಅಭಿಮಾನಿಗಳನ್ನು ಸೀಟಿನ ತುದಿಗೆ ತಂದು ಕೂರಿಸಿತ್ತು.

ಇನ್ನು ಈ ಪಂದ್ಯದಲ್ಲಿ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡವು 8 ರನ್​ಗಳ ಸೋಲು ಕಂಡಿತ್ತು.

ವೈರಲ್​ ಆಗುತ್ತಿದೆ ಪೋಸ್ಟರ್​

IPL ಪಂದ್ಯ ನಡೆಯುವ ವೇಳೆ ಆಗಾಗ ಕ್ಯಾಮರಾಮ್ಯಾನ್​ಗಳ ಕೈಚಳಕವೂ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಸದ್ದು ಮಾಡುತ್ತಿದೆ. ಸದ್ಯ ಈ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗುತ್ತಿದ್ದು ಪರ-ವಿರೋಧದ ಚರ್ಚೆ ನಡೆಯುತ್ತಿದೆ.

ಬೆಂಗಳೂರು ಹಾಗೂ ಚೆನೈ ನಡುವಿನ ಪಂದ್ಯವನ್ನು ವೀಕ್ಷಿಸಲು ಅಭಿಮಾನಿ ಓರ್ವ ತನ್ನ ಬೈಕನ್ನು ಮಾರಿ ಗೋವಾದಿಂದ ಇಲ್ಲಿಗೆ ಬಂದಿದ್ಧಾಗಿ ಪಂದ್ಯದ ವೇಳೆ ಪ್ರದರ್ಶಿಸಿರುವ ಪ್ಲೇ ಕಾರ್ಡ್​ ಪೋಟೋ ವೈರಲ್​ ಆಗಿದೆ.

ಹುಚ್ಚು ಅಭಿಮಾನ

ಇನ್ನು IPLನಲ್ಲಿ ಚೆನೈ ಸೂಪರ್​ ಕಿಂಗ್ಸ್​ ತಂಡದ ಅಭಿಮಾನಿ ಆಗಿರುವ ಯುವಕ ತನ್ನ ನೆಚ್ಚಿನ ಆಟಗಾರ ಮಹೇಂದ್ರ ಸಿಂಗ್​ ಧೋನಿ ಅವರನ್ನು ನೋಡಲು ಗೋವಾದಿಂದ ಸೀದಾ ಬೆಂಗಳೂರಿಗೆ ಬಂದಿದ್ದಾನೆ.

ಇನ್ನು ಉಭಯ ತಂಡಗಳ ನಡುವಿನ ಆಟವನ್ನು ವೀಕ್ಷಿಸಲು ತನ್ನ ಬೈಕ್​ ಮಾರಾಟ ಮಾಡಿ ಬಂದಿರುವುದು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಗ್ರಾಸವಾಗಿದ್ದು ಹುಚ್ಚು ಅಭಿಮಾನಕ್ಕೆ ಪಾರವೇ ಇಲ್ಲದಂತಾಗಿದೆ ಎಂದು ನೆಟ್ಟಿಗರು ಅಭಿಪ್ರಾಯಪಟ್ಟಿದ್ಧಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net