ಬೆಂಗಳೂರು: ಸೋಮವಾರ RCB ಹಾಗೂ CSK ನಡುವೆ ನಡೆದ IPL ಪಂದ್ಯದ ವೇಳೆ ನಿಯಮ ಉಲ್ಲಂಘಿಸಿದ್ದಕ್ಕಾಗಿ ಬ್ಯಾಟ್ಸ್ಮ್ಯಾನ್ ವಿರಾಟ್ ಕೊಹ್ಲಿಗೆ ದಂಡ ವಿಧಿಸಲಾಗಿದೆ.
ಚೆನೈ ಸೂಪರ್ ಕಿಂಗ್ಸ್ ವಿರುದ್ಧ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದ ವೇಳೆ ನಿಯಮ ಉಲ್ಲಂಘಿಸಿದ್ದಕ್ಕಾಗಿ ದಂಡ ವಿಧಿಸಲಾಗಿದೆ ಎಂದು ತಿಳಿದು ಬಂದಿದೆ.
ಸಂಭ್ರಮಾಚರಣೆಗೆ ದಂಡ
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಚೆನೈ ತಂಡವು ಆರಂಭಿಕ ಡೆವೊನ್ ಕಾನ್ವೆ(83 ರನ್, 45 ಎಸೆತ, 6 ಬೌಂಡರಿ, 6 ಸಿಕ್ಸರ್), ಮಧ್ಯಮ ಕ್ರಮಾಂಕದ ಬ್ಯಾಟ್ಸ್ಮ್ಯಾನ್ ಶಿವಂ ದುಬೆ(52 ರನ್, 27 ಎಸೆತ, 2 ಬೌಂಡರಿ, 5 ಸಿಕ್ಸರ್) ಫಲವಾಗಿ 20 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 226ರನ್ ಗಳಿಸಿತ್ತು.
ಇದನ್ನೂ ಓದಿ: ರಾಜ್ಯದಲ್ಲಿ ಕೋವಿಡ್ ಸಕ್ರಿಯ ಪ್ರಕರಣಗಳ ಸಂಖ್ಯೆ 2 ಸಾವಿರಕ್ಕೆ ಏರಿಕೆ; ಲಸಿಕೆ ಪಡೆಯಲು ಜನರ ನಿರಾಸಕ್ತಿ
ವೇಯ್ನ್ ಪಾರ್ನೆಲ್ 17ನೇ ಓವರ್ನಲ್ಲಿ ಶಿವಂ ದುಬೆ ಅವರ ವಿಕೆಟ್ ಅನ್ನು ಕಬಳಿಸಿದ್ದರು. ಈ ವೇಳೆ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ ಸಂಭ್ರಮಿಸಿದ್ದಕ್ಕೆ ದಂಡ ವಿಧಿಸಲಾಗಿದೆ ಎಂದು ಹೇಳಲಾಗಿದೆ.
ಲೆವೆಲ್ 1 ಅಪರಾಧ
IPL ನಿಯಮದ ಪ್ರಕಾರ ಆರ್ಟಿಕಲ್ 2.2 ಅಡಿಯಲ್ಲಿ ವಿರಾಟ್ ಕೊಹ್ಲಿ ಲೆವೆಲ್ 1 ಅಪರಾಧವನ್ನು ಮಾಡಿದ್ಧಾರೆ. ಆದರೆ, ಈ ಕುರಿತು ಆಡಳಿತ ಮಂಡಳಿ ಹೆಚ್ಚಿನ ವಿವರವನ್ನು ನೀಡಿಲ್ಲ.
ವಿರಾಟ್ ಕೊಹ್ಲಿಗೆ ಪಂದ್ಯದ ಶೇ.10ರಷ್ಟು ಮೊತ್ತವನ್ನು ದಂಡವಾಗಿ ವಿಧಿಸಲಾಗಿದೆ ಎಂದು ತಳಿದು ಬಂದಿದೆ.