

ಮುಂಬೈ: ಇಲ್ಲಿನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಭಾರತ (Team India) ಹಾಗೂ ನ್ಯೂಜಿಲೆಂಡ್ (New Zealand) ನಡುವಿನ ಟೆಸ್ಟ್ ಸರಣಿಯ ಮೂರನೇ ಪಂದ್ಯದಲ್ಲಿ ಆತಿಥೇಯರು ಮೇಲುಗೈ ಸಾಧಿಸುವಲ್ಲಿ ಯಶಸ್ವಿಯಾಗಿದ್ದು, ಎದುರಾಳಿಗಳನ್ನು 146 ರನ್ಗಳಿಗೆ ಆಲೌಟ್ ಮಾಡಿದ್ದಾರೆ. ಈ ಮೂಲಕ ಸರಣಿ ವೈಟ್ವಾಷ್ ಭೀತಿಯಿಂದ ಭಾರತ ಪಾರಾಗಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ನ್ಯೂಜಿಲೆಂಡ್ (New Zealand) ತಂಡವು ಡೆರಿಲ್ ಮಿಚೆಲ್ (82 ರನ್, 129 ಎಸೆತ, 3 ಬೌಂಡರಿ, 3 ಸಿಕ್ಸರ್), ವಿಲ್ ಯಂಗ್ (71 ರನ್, 138 ಎಸೆತ, 4 ಬೌಂಡರಿ, 2 ಸಿಕ್ಸರ್) ಅರ್ಧಶತಕಗಳ ಫಲವಾಗಿ 65.4 ಓವರ್ಗಳಲ್ಲಿ 235 ರನ್ಗಳಿಗೆ ಆಲೌಟ್ ಆಯಿತು. ಭಾರತದ (Team India) ಪರ ರವೀಂದ್ರ ಜಡೇಜಾ (Ravindra Jadeja) (22-1-65-5), ವಾಷಿಂಗ್ಟನ್ ಸುಂದರ್ (18.4-2-81-4), ಆಕಾಶ್ ದೀಪ್ (5-0-22-1) ರನ್ ನೀಡಿ ವಿಕೆಟ್ ಪಡೆದಿದ್ದರು.
ಮೊದಲ ಇನ್ನಿಂಗ್ಸ್ನಲ್ಲಿ ನ್ಯೂಜಿಲೆಂಡ್ (New Zealand) ನೀಡಿದ್ದ ಮೊತ್ತವನ್ನು ಶುಭಮನ್ ಗಿಲ್ (90 ರನ್, 146 ಎಸೆತ, 7 ಬೌಂಡರಿ, 1 ಸಿಕ್ಸರ್), ರಿಷಭ್ ಪಂತ್ (60 ರನ್, 59 ಎಸೆತ, 8 ಬೌಂಡರಿ, 2 ಸಿಕ್ಸರ್) ಅರ್ಧಶತಕಗಳ ಫಲವಾಗಿ 263 ರನ್ಗಳಿಸಿ ಆಲೌಟ್ ಆಯಿತು. ಈ ಮೂಲಕ ಎದುರಾಳಿಗಳ ವಿರುದ್ಧ 28 ರನ್ಗಳಅ ಅತ್ಯಲ್ಪ ಮುನ್ನಡೆಯನ್ನು ಭಾರತ ತಂಡ (Team India) ಸಾಧಿಸಿತು. ನ್ಯೂಜಿಲೆಂಡ್ ಪರ ಏಜಾಜ್ ಪಟೇಲ್ (21.4-3-103-5), ಮ್ಯಟ್ ಹೆನ್ರಿ (8-1-26-1), ಗ್ಲೆನ್ ಫಿಲಿಪ್ಸ್ (20-0-84-1), ಇಶ್ ಸೋಧಿ (7-0-36-1) ರನ್ ನೀಡಿ ವಿಕೆಟ್ ಪಡೆದಿದ್ದರು.
28 ರನ್ಗಳ ಅಂತರದೊಂದಿಗೆ ಎರಡನೇ ಇನ್ನಿಂಗ್ಸ್ನಲ್ಲಿ ಆರಂಭಿಸಿದ ನ್ಯೂಜಿಲೆಂಡ್ (New Zealand) ತಂಡವನ್ನು ಇನ್ನಿಲ್ಲದಂತೆ ಕಾಡಿದ ಭಾರತದ (Team India) ಬೌಲರ್ಗಳು ವಿಲ್ ಯಂಗ್ (51 ರನ್, 100 ಎಸೆತ, 2 ಬೌಂಡರಿ, 1 ಸಿಕ್ಸರ್) ದಿಟ್ಟ ಪ್ರತಿರೋಧದ ಹೊರತಾಗಿಯೂ ಎದುರಾಳಿಗಳನ್ನು ಮೂರನೇ ದಿನದಾಟದ ಆರಂಭದಲ್ಲೇ ಕಟ್ಟಿ ಹಾಕಿತು. ಈ ಮೂಲಕ ಭಾರತ ತಂಡವು 147 ರನ್ಗಳ ಗುರಿಯನ್ನು ಪಡೆದಿದೆ.
ಭಾರತದ (Team India) ಪರ ರವೀಂದ್ರ ಜಡೇಜಾ (13.5-3-55-5), ಆರ್. ಅಶ್ವಿನ್ (17-1-63-3), ವಾಷಿಂಗ್ಟನ್ ಸುಂದರ್ (10-0-30-1), ಆಕಾಶ್ದೀಪ್ (5-0-10-1) ರನ್ ನೀಡಿ ವಿಕೆಟ್ ಪಡೆದಿದ್ದಾರೆ. 147 ರನ್ಗಳ ಗುರಿಯನ್ನು ಪಡೆದಿರುವ ಭಾರತ ತಂಡವು ಗೆಲುವಿನ ಸನಿಹದಲ್ಲಿದ್ದು, ಈ ಪಂದ್ಯದ ಮೂಲಕ ಆಲ್ರೌಂಡರ್ ರವೀಂದ್ರ ಜಡೇಜಾ ಮತ್ತೊಂದು ದಾಖಲೆ ಬರೆದಿದ್ದಾರೆ.