

ಚೆನ್ನೈ: ಪ್ರವಾಸಿ ಬಾಂಗ್ಲಾದೇಶ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಹೀನಾಯವಾಗಿ ಸೋಲುವ ಮೂಲಕ ತೀವ್ರ ಮುಖಭಂಗವನ್ನು ಅನುಭವಿಸಿರುವ ಪಾಕಿಸ್ತಾನ ತಂಡವನ್ನು ಒಂದಿಲ್ಲೊಂದು ಕಾರಣಕ್ಕೆ ಟ್ರೋಲ್ ಮಾಡಲಾಗುತ್ತಿದೆ. ಸ್ವದೇಶದವರಿದಂಲೇ ಹೆಚ್ಚು ಟೀಕೆಗೆ ಗುರಿಯಾಗಿರುವ ಪಾಕ್ ಬಗ್ಗೆ ಇದೀಗ ಟೀಮ್ ಇಂಡಿಯಾದ ಆಟಗಾರ ಆರ್. ಅಶ್ವಿನ್ ಸಹಾನುಭೂತಿ ವ್ಯಕ್ತಪಡಿಸಿದ್ದು, ಈ ಕುರಿತು ತಮ್ಮ ಯೂಟ್ಯೂಬ್ ಚಾನೆಲ್ನಲ್ಲಿ ಮಾತನಾಡಿದ್ದಾರೆ.
ಟೆಸ್ಟ್ ಸರಣಿಯ ಸೋಲಿನ ಕಾರಣಕ್ಕೆ ತಂಡದ ನಾಯಕ ಶಾನ್ ಮಸೂದ್ರನ್ನು ಹೀನಾಯವಾಗಿ ಟೀಕಿಸಲಾಗಿತ್ತು. ಈ ಕುರಿತು ಮಾತನಾಡಿರುವ ಆರ್. ಅಶ್ವಿನ್ ಶಾನ್ ಕುರಿತು ಸಹಾನುಭೂತಿ ವ್ಯಕ್ತಪಡಿಸಿದ್ದಾರೆ. ಆತನನ್ನು ನೋಡಿದರೆ ಅಯ್ಯೋ ಅನಿಸುತ್ತೆ ಎಂದು ಹೇಳಿದ್ದಾರೆ. ಈ ಕುರಿತಾದ ವಿಡಿಯೋ ಸಖತ್ ವೈರಲ್ ಆಗಿದೆ.
ಶಾನ್ ಮಸೂದ್ ಒಬ್ಬ ಬುದ್ಧಿವಂತೆ ಆಟಗಾರನಾಗಿದ್ದು, ಆತನನ್ನು ನೋಡಿದರೆ ನನಗೆ ಅಯ್ಯೋ ಪಾಪ ಅನಿಸುತ್ತದೆ. ಪೋಸ್ಟ್ ಮ್ಯಾಚ್ ಪ್ರಸೆಂಟೇಷನ್ನಲ್ಲಿ ಆತ ಮಾತನಾಡುವುದನ್ನು ನೋಡಿದರೆ ಮುಂದಿನ ದಿನಗಳಲ್ಲಿ ಆತ ಪಾಕಿಸ್ತಾನ ಕ್ರಿಕೆಟ್ ತಂಡವನ್ನು ಯಶಸ್ವಿಯಾಗಿ ಮುನ್ನಡೆಸುತ್ತಾನೆ ಎಂಬ ವಿಶ್ವಾಸ ನನಗಿದೆ. ಆತ ಸಾಕಷ್ಟು ಅರ್ಥಪೂರ್ಣವಾಗಿ ಮಾತನಾಡುತ್ತಾನೆ ಮತ್ತು ಬಾಬರ್ ಅಜಂನಂತಹ ಆಟಗಾರನಲ್ಲದೇ ಇರಬಹುದು ಎಂಬ ಕಾರಣಕ್ಕೆ ಆತನ ವಿರುದ್ಧ ಈ ರೀತಿ ಮಾತನಾಡಲಾಗುತ್ತಿದೆ. ಡ್ರೆಸ್ಸಿಂಗ್ ರೂಮ್ನಲ್ಲಿ ಪರಿಸ್ಥಿತಿ ಚೆನ್ನಾಗಿಲ್ಲ ಎಂಬುದು ನಮಗೆ ಸ್ಪಷ್ಟವಾಗಿ ಅರ್ಥವಾಗುತ್ತದೆ.
ಇನ್ನೂ ಪಾಕಿಸ್ತಾನ ವಿರುದ್ಧ ಬಾಂಗ್ಲಾದೇಶ ಸರಣಿ ಗೆದ್ದಿರುವುದನ್ನು ನೋಡಿದರೆ ಅವರು ಎಷ್ಟು ದೂರ ಸಾಗಿದ್ದಾರೆ ಎಂಬುದು ಸ್ಪಷ್ಟವಾಗಿ ಕಾಣುತ್ತದೆ. ಕಳೆದ ವರ್ಷ ನಾವು ಬಾಂಗ್ಲಾ ಪ್ರವಾಸ ಕೈಗೊಂಡಾಗ ನಮಗೆ ಉತ್ತಮ ಟೆಸ್ಟ್ ತಂಡ ಯಾವುದೆಂದು ತಿಳಿಯಿತು, ಶಕಿಬ್ ಅಲ್ ಹಸನ್ ಅವರಂತಹ ಹಿರಿಯ ಅನುಭವಿ ಆಟಗಾರರು, ಮುಶ್ಫಿಕರ್ ರಹೀಮ್, ಮೆಹಿದಿ ಹಸನ್ನಂತಹ ಯುವ ಉತ್ಸಾಹಿ ಆಟಗಾರರು ತಂಡದಲ್ಲಿದ್ದು, ಇದು ಅವರ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿತು ಎಂದು ಅಶ್ವಿನ್ ಅಭಿಪ್ರಾಯಪಟ್ಟಿದ್ದಾರೆ.