ಮದ್ಯಪ್ರೀತಿ ಒಪ್ಪಿಕೊಂಡ ಟೀಮ್ ಇಂಡಿಯಾ ಕೋಚ್

Ravi-Shastri
Published on

ಮುಂಬೈ: ಲಾಕ್​ಡೌನ್ ನಡುವೆಯೂ ಮದ್ಯದಂಗಡಿಗಳು ತೆರೆದಿರುವುದ ರಿಂದ ಮದ್ಯಪ್ರಿಯರೆಲ್ಲರೂ ಖುಷಿಯಾಗಿದ್ದಾರೆ. ಟೀಮ್ ಇಂಡಿಯಾದ ಕೋಚ್ ರವಿಶಾಸ್ತ್ರಿ ಕೂಡ ಇವರಲ್ಲೊಬ್ಬರಾಗಿದ್ದಾರೆ!

ಈಗಾಗಲೆ ಕ್ರಿಕೆಟ್ ಪ್ರೇಮಿಗಳಿಗೆ ಗೊತ್ತಿರುವಂತೆ ರವಿಶಾಸ್ತ್ರಿ ಬಿಯರ್ ಪ್ರಿಯರು. ಹೀಗಾಗಿ ಮದ್ಯದಂಗಡಿ ಓಪನ್ ಆಗಿರುವ ಬೆನ್ನಲ್ಲೇ ನಾನೂ ಬಿಯರ್ ಖರೀದಿಗೆ ಹೋಗುವೆ ಎಂದು ರವಿಶಾಸ್ತ್ರಿ ಬಹಿರಂಗ ಹೇಳಿಕೆಯನ್ನೂ ನೀಡಿದ್ದಾರೆ.

ನ್ಯೂಸ್ ಚಾನಲ್ ಒಂದರ ಜತೆಗೆ ಮಾತನಾಡಿರುವ 57 ವರ್ಷದ ರವಿಶಾಸ್ತ್ರಿ, ‘ನಾನಿರುವ ಆಲಿಬಾಗ್ ಈ ಮುನ್ನ ರೆಡ್ ಜೋನ್ ಆಗಿತ್ತು. ಈಗ ಆರೆಂಜ್ ಜೋನ್ ಆಗಿದೆ. ಹೀಗಾಗಿ ನಾನಿಂದೇ ಬಿಯರ್ ಖರೀದಿಗೆ ಹೋಗುವೆ. ಸಾಮಾಜಿಕ ಅಂತರ ನಿಯಮವನ್ನೂ ಪಾಲಿಸುವೆ’ ಎಂದಿದ್ದಾರೆ.

ಬಿಯರ್ ಪಾರ್ಟಿಯಲ್ಲಿ ತಮ್ಮೊಂದಿಗೆ ಪಾಲ್ಗೊಳ್ಳಲು 1985ರ ವಿಶ್ವ ಚಾಂಪಿಯನ್​ಷಿಪ್ ವಿಜೇತ ಭಾರತ ತಂಡದ ಸಹ-ಆಟಗಾರರಾದ ರೋಜರ್ ಬಿನ್ನಿ ಮತ್ತು ಎಲ್. ಶಿವರಾಮಕೃಷ್ಣನ್​ರನ್ನು ಆರಿಸಿಕೊಳ್ಳುವೆ ಎಂದು ರವಿಶಾಸ್ತ್ರಿ ಪ್ರಶ್ನೆಯೊಂದಕ್ಕೆ ಉತ್ತರಿಸಿದ್ದಾರೆ. -ಏಜೆನ್ಸೀಸ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net