ಬ್ಯಾಟಿಂಗ್​, ಬೌಲಿಂಗ್​ನಲ್ಲೂ ಮಿಂಚಿದ ಟೀಂ ಇಂಡಿಯಾ ಬೌಲರ್ ಮೊಹಮ್ಮದ್​​ ಶಮಿ ಸಹೋದರ 'ಕೈಫ್'

shami
Published on

ಕಾನ್ಪುರ: ಮೈದಾನದಲ್ಲಿ ಸದಾ ನಿಯಮಿತ ವೇಗದೊಂದಿಗೆ ಉತ್ತಮ ಸ್ಥಳದಲ್ಲಿ ಚೆಂಡನ್ನು ಬೌಲ್ ಮಾಡಿ ವಿಕೆಟ್ ಪಡೆಯುವ ಕಲೆ ಹೊಂದಿರುವ ಮೊಹಮ್ಮದ್ ಶಮಿ ಅವರ ಸಹೋದರ ಮೊಹಮ್ಮದ್​ ಕೈಫ್ ಇತ್ತೀಚೆಗಷ್ಟೇ ದೇಶಿಯ ಕ್ರಿಕೆಟ್​ ಪದಾರ್ಪಣೆ ಮಾಡಿದ್ದಾರೆ.

ಕೈಫ್​ ಇದೀಗ ಬ್ಯಾಟಿಂಗ್​ ಮತ್ತು ಬೌಲಿಂಗ್​ನಿಂದ ಮಿಂಚಿದ್ದಾರೆ. ಬಂಗಾಳ ತಂಡವನ್ನು ಪ್ರತಿನಿಧಿಸುವ ಮೊಹಮ್ಮದ್​ ಕೈಫ್​ ಉತ್ತರ ಪ್ರದೇಶ ವಿರುದ್ಧ ಆಲ್​ರೌಂಡ್​ ಪ್ರದರ್ಶನ ನೀಡಿದ್ದಾರೆ.

ಉತ್ತರ ಪ್ರದೇಶ ಮೊದಲ ಇನಿಂಗ್ಸ್​ನಲ್ಲಿ ಕೇವಲ 60 ರನ್​ಗಳಿಗೆ ಆಲೌಟಾಯಿತು.ಮಾರಕ ದಾಳಿ ನಡೆಸಿದ ಮೊಹಮ್ಮದ್​ ಕೈಫ್​ 5.5 ಓವರ್​​ ಬೌಲಿಂಗ್​ ಮಾಡಿ 14 ರನ್​ ನೀಡಿ ಚೊಚ್ಚಲ ನಾಲ್ಕು ವಿಕೆಟ್​ ಪಡೆದಿದ್ದಾರೆ.

ಬ್ಯಾಟಿಂಗ್​ ನಡೆಸಿದ ಬಂಗಾಲ ತಂಡಕ್ಕೂ ಕೈಫ್​ ನೆರವಾದರು. 9ನೇ ಕ್ರಮಾಂಕದಲ್ಲಿ ಬ್ಯಾಟಿಂಗ್​​ಗೆ ಆಗಮಿಸಿದ ಕೈಫ್​ ಅಜೇಯ 45 ರನ್​ ಮಾಡಿದರು. ಇದೇ ಮೊದಲ ಬಾರಿಗೆ ಪ್ರಥಮ ದರ್ಜೆ ಕ್ರಿಕೆಟ್​ ಆಡುತ್ತಿರುವ ಶಮಿ ಸಹೋದರ ಎರಡು ಸಿಕ್ಸರ್​ ಸಹಿತ ಅಜೇಯವಾಡಿದರು.

ಸಹೋದರ ಪ್ರಥಮ ದರ್ಜೆ ಕ್ರಿಕೆಟ್​ ಪದಾರ್ಪಣೆ ಬಗ್ಗೆ ಶಮಿ ಕೆಲ ದಿನಗಳ ಹಿಂದೆ ಸಂತಸ ವ್ಯಕ್ತಪಡಿಸಿದ್ದರು. ದೀರ್ಘ ಹೋರಾಟದ ನಂತರ ನೀನು ಬಂಗಾಳಕ್ಕೆ ರಣಜಿ ಟ್ರೋಫಿ ಕ್ಯಾಪ್​ ಪೆಡೆದುಕೊಂಡಿದ್ದೀರಿ ಚೀಯರ್ಸ್​ ಉತ್ತಮ ಸಅಧನೆ ಅಭಿನಂದನೆಗಳು ಎಂದು ಹೇಳಿದ್ದರು. ನಾನು ನಿಮಗೆ ಉತ್ತಮ ಭವಿಷ್ಯವನ್ನು ಹಾರೈಸುತ್ತೇನೆ. ಕಠಿಣ ಪರಿಶ್ರಮವನ್ನು ಮುಂದುವರೆಸು ಎಂದು ಮೊಹಮ್ಮದ್​ ಶಮಿ ಸಾಮಾಜಿಕ ಜಾಲತಾಣದಲ್ಲಿ ಬರೆದಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net