'ಇವೆಲ್ಲಾ ಕೇವಲ ಮೂರು ವಾರವಷ್ಟೇ ಸಾಧ್ಯ'! ಬಿಗ್ ಬಾಸ್​ ಒಳಗಿನ ಪ್ರಪಂಚದ ಬಗ್ಗೆ ರೂಪೇಶ್​ ಹೇಳಿದ ಅಚ್ಚರಿ ಸಂಗತಿಗಳಿವು

ವಿಜಯವಾಣಿ - 2024-01-14T182747.684
Published on

ಬೆಂಗಳೂರು: ಬಿಗ್​ ಬಾಸ್​ ಕನ್ನಡದ ಮೊದಲ ಒಟಿಟಿ ಸೀಸನ್​ 01ರ ಹಾಗೂ ಸೀಸನ್​ 09ರ ವಿಜೇತರಾದ, ತುಳು ಹಾಗೂ ಕನ್ನಡ ಚಿತ್ರರಂಗದ ನಟ ರೂಪೇಶ್ ಶೆಟ್ಟಿ ಇತ್ತೀಚೆಗೆ ವಿಜಯವಾಣಿ ನಡೆಸಿದ ಸಂದರ್ಶನದಲ್ಲಿ ಮನಬಿಚ್ಚಿ ಮಾತನಾಡಿದ್ದು, ತಮ್ಮ ಮುಂಬರುವ ಕೆಲಸ ಸೇರಿದಂತೆ ತಮ್ಮ ಬಿಗ್ ಬಾಸ್​ ಜರ್ನಿ ಹಾಗೂ ಒಳಗೆ ನಡುವೆಯ ಮೈಂಡ್​ ಗೇಮ್ಸ್, ಲೆಕ್ಕಾಚಾರದ ಬಗ್ಗೆ ಹಲವು ಸಂಗತಿಗಳನ್ನು ಬಿಚ್ಚಿಟ್ಟಿದ್ದಾರೆ.

"ಒಬ್ಬ ವ್ಯಕ್ತಿಗೆ ಸ್ಥಾನಕ್ಕಿಂತ ವ್ಯಕ್ತಿತ್ವ ತುಂಬ ಮುಖ್ಯ. ವ್ಯಕ್ತಿತ್ವ ಎಲ್ಲದಕ್ಕಿಂತಲೂ ಅತೀ ಮುಖ್ಯವಾದದು. ಬಿಗ್ ಬಾಸ್​ ಒಳಗೆ ಹೋಗುವ ಮುನ್ನ ಎಲ್ಲರೂ ನಾನು ನಾನಾಗಿರಲು ಹೋಗುತ್ತಿದ್ದೇನೆ, ನಾನು ಏನೂ ಅಂತ ಕಂಡುಕೊಳ್ಳಲು ಹೋಗ್ತಿದ್ದೀನಿ ಎಂದು ಹೇಳ್ತಾರೆ. ಇದನ್ನು ನಾವು ವೇದಿಕೆ ಮೇಲೆ ಇದ್ದಾಗ ಹೇಳುವುದು ಸಾಮಾನ್ಯ" ಎಂದರು.

"ಆದ್ರೆ, ಒಳಗೆ ಹೋದ ಮೇಲೆ ಏನು ಮೈಂಡ್ ಗೇಮ್ ಅಂತ ಹೇಳ್ತಾರೋ, ಅದನ್ನು ನನ್ನ ಅನುಭವ ಮತ್ತು ಕ್ಯಾರೆಕ್ಟರ್​ ಪ್ರಕಾರ ಹೇಳುವುದಾದರೆ......" ಮತ್ತಷ್ಟು ಸಂಗತಿಗಳನ್ನು ತಿಳಿಯಲು ಕೆಳಗಿನ ಸಂದರ್ಶನದ ವಿಡಿಯೋ ವೀಕ್ಷಿಸಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net