ಮಹಿಳಾ ಕಾಲೇಜಿನಲ್ಲಿ ಉದ್ಯೋಗ ಮೇಳ-೩೫ ಮಂದಿಗೆ ಉದ್ಯೋಗ ಲಭ್ಯ /ಹೆಣ್ಣುಮಕ್ಕಳ ಸ್ವಾವಲಂಬಿ ಬದುಕಿಗೆ ಮೇಳ ಸಹಕಾರಿ/ಡಾ. ಗಂಗಾಧರರಾವ್

Published on

ವಿಜಯವಾಣಿ ಸುದ್ದಿಜಾಲ ಕೋಲಾರ
ಸರ್ಕಾರಿ ಕಾಲೇಜಿನಲ್ಲಿ ಉದ್ಯೋಗ ಮೇಳ ನಡೆಸುವುದರಿಂದ ಗ್ರಾಮೀಣ ಪ್ರದೇಶದ ಬಡ ಹೆಣ್ಣುಮಕ್ಕಳ ಸ್ವಾವಲಂಬಿ ಬದುಕಿಗೆ ದಾರಿ ತೋರಿದಂತಾಗುತ್ತದೆ ಮತ್ತು ನಿರುದ್ಯೋಗ ಸಮಸ್ಯೆ ನಿವಾರಣೆಗೂ ಸಹಕಾರಿಯಾಗುತ್ತದೆ ಎಂದು ನಗರದ ಸರ್ಕಾರಿ ಮಹಿಳಾ ಕಾಲೇಜು ಪ್ರಾಂಶುಪಾಲ ಡಾ.ಡಿ.ಆರ್.ಗಂಗಾಧರರಾವ್ ತಿಳಿಸಿದರು.

ಕಾಲೇಜಿನ ಆವರಣದಲ್ಲಿ ಕಾಲೇಜಿನ ಪ್ಲೇಸ್‌ಮೆಂಟ್ ಸೆಲ್, ಪ್ರಧಾನ ಮಂತ್ರಿ ಕೌಶಲ್ಯ ವಿಕಸನಕೇಂದ್ರ ಇವರ ಸಹಯೋಗದಲ್ಲಿ ಐದು ಖಾಸಗಿ ಕಂಪನಿಗಳು ಭಾಗವಹಿಸಿದ್ದ ಉದ್ಯೋಗ ಮೇಳಕ್ಕೆ ಭಾನುವಾರ ಚಾಲನೆ ನೀಡಿ ಅವರು ಮಾತನಾಡಿದರು.

ಉದ್ಯೋಗ ಮೇಳವನ್ನು ಕಾಲೇಜಿನಲ್ಲಿ ನಡೆಸುತ್ತಿರುವುದು ಇದೇ ಮೊದಲಾಗಿದ್ದು, ಇದರಿಂದ ಗ್ರಾಮೀಣ ಹೆಣ್ಣು ಮಕ್ಕಳಿಗೆ ಆರ್ಥಿಕ ಶಕ್ತಿ ತುಂಬಿದAತಾಗಿದೆ. ಅವರ ಬದುಕು ಹಸನಾಗಲು ನೆರವಾದ ತೃಪ್ತಿಯೂ ಸಿಗುತ್ತದೆ, ಮತ್ತಷ್ಟು ಕಂಪನಿಗಳು ಸರ್ಕಾರಿ ಕಾಲೇಜು ವಿದ್ಯಾರ್ಥಿಗಳ ನೇಮಕಕ್ಕೆ ಗಮನ ಹರಿಸಬೇಕು ಎಂದು ಸಲಹೆ ನೀಡಿದರು.

ಉದ್ಯೋಗ ಆಧಾರಿತ ಶಿಕ್ಷಣ ಪದ್ದತಿ ಇಂದಿನ ಅಗತ್ಯವಿದೆ, ಇಂಜಿನಿಯರಿAಗ್, ಡಿಪ್ಲೊಮೋ ಮಾಡಿದವರಿಗೆ ಮಾತ್ರವೇ ಉದ್ಯೋಗ ಮೇಳಗಳು ಎಂಬ ಭಾವನೆ ಇದೆ, ಆದರೆ ಪದವಿ ಶಿಕ್ಷಣ ಮುಗಿಸಿದವರಿಗೂ ಉದ್ಯೋಗ ಮೇಳಗಳು ನಡೆಸುವ ಮೂಲಕ ಪದವಿ ಶಿಕ್ಷಣಕ್ಕೂ ಪ್ರೋತ್ಸಾಹ ನೀಡಿದಂತಾಗಿದೆ ಎಂದರು.

ಕಾಲೇಜಿನ ಉದ್ಯೋಗ ಕೋಶದ ಅಧಿಕಾರಿ ಜಿ.ಎಂ.ಪ್ರಕಾಶ್ ಮಾತನಾಡಿ, ಜಿಲ್ಲೆಯಲ್ಲಿ ಮಹಿಳೆಯರಿಗಾಗಿಯೇ ಉದ್ಯೋಗ ಮೇಳ ಹಮ್ಮಿಕೊಂಡಿರುವುದು ಇದೇ ಮೊದಲು ಎಂದು ತಿಳಿಸಿ, ಇದೊಂದು ಸಂತಸದ ವಿಷಯವಾಗಿದೆ. ಇದರಿಂದ ಶಿಕ್ಷಣ ಬಯಸಿ ಬರುವ ಹೆಣ್ಣು ಮಕ್ಕಳಿಗೆ ಆತ್ಮಸ್ಥೆöÊರ್ಯ ತುಂಬಿದAತಾಗಿದೆ. ಪದವಿ ಮುಗಿದ ನಂತರ ಬದುಕು ಕಟ್ಟಿಕೊಳ್ಳಲು ಸಹಕಾರಿ ಎಂಬ ಧೈರ್ಯವೂ ಬರುತ್ತದೆ ಎಂದು ತಿಳಿಸಿದರು.

ದೊಡ್ಡ ದೊಡ್ಡ ಇಂಜಿನಿಯರಿAಗ್ ಕಾಲೇಜುಗಳಲ್ಲಿ ಉದ್ಯೋಗ ಮೇಳ ಸಾಮಾನ್ಯ, ಆದರೆ ಸರ್ಕಾರಿ ಕಾಲೇಜಿನಲ್ಲಿ ಅದರಲ್ಲೂ ಮಹಿಳೆಯರಿಗೆ ಮಾತ್ರವೇ ಉದ್ಯೋಗ ಮೇಳ ನಡೆಸುತ್ತಿದ್ದು, ವಿದ್ಯಾರ್ಥಿನಿಯರು ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.

ಇಂದಿನ ಉದ್ಯೋಗ ಮೇಳದಲ್ಲಿ ೫ ಕಂಪನಿಗಳು ಪಾಲ್ಗೊಂಡಿದ್ದು ೩೫ ಮಂದಿ ಮಹಿಳೆಯರಿಗೆ ಉದ್ಯೋಗ ಲಭ್ಯವಾಯಿತು.
ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಧ್ಯಾಪಕರಾದ ಡಾ.ಕೆ.ಎನ್.ಶ್ರೀನಿವಾಸಯ್ಯ, ಬೃಂದಾದೇವಿ, ಡಾ.ಕೆ.ಆರ್.ಮಂಜುಳಾ, ಡಾ.ಚೈತ್ರಾ, ಡಾ.ಗಿರೀಶ್, ರಮೇಶ್, ಮತ್ತಿತರರಿದ್ದರು.

ಚಿತ್ರ ೧೪ ಕೆ.ಎಲ್.ಆರ್. ೦೭ : ಕೋಲಾರದ ಸರ್ಕಾರಿ ಮಹಿಳಾ ಕಾಲೇಜಿನ ಆವರಣದಲ್ಲಿ ನಡೆದ ಉದ್ಯೋಗ ಮೇಳಕ್ಕೆ ಪ್ರಾಂಶುಪಾಲ ಡಾ.ಡಿ.ಆರ್.ಗಂಗಾಧರರಾವ್ ಚಾಲನೆ ನೀಡಿದರು. ಕಾಲೇಜಿನ ಉದ್ಯೋಗ ಕೋಶದ ಅಧಿಕಾರಿ ಜಿ.ಎಂ.ಪ್ರಕಾಶ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net