More

    ಸಿಎಂ ಏಕನಾಥ್ ಶಿಂಧೆ ಸಮ್ಮುಖದಲ್ಲಿ ಶಿವಸೇನಾ ಸೇರಿದ ಕಾಂಗ್ರೆಸ್​ ನಾಯಕ ಮಿಲಿಂದ್​ ದಿಯೋರಾ

    ಮುಂಬೈ: ಕಾಂಗ್ರೆಸ್​ ಜೊತೆ ಮುನಿಸಿಕೊಂಡಿರುವ ಮಾಜಿ ಕೇಂದ್ರ ಸಚಿವ ಮಿಲಿಂದ್​ ದಿಯೋರಾ ಭಾನುವಾರ ಮುಂಬೈನಲ್ಲಿ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರ ಸಮ್ಮುಖದಲ್ಲಿ ಶಿವಸೇನಾ ಪಕ್ಷಕ್ಕೆ ಸೇರ್ಪಡೆಯಾದರು.

    ಇದನ್ನೂ ಓದಿ:ಮಾಲೆ ಮೇಯರ್​ ಚುನಾವಣೆ; ಮೋದಿ ಟೀಕಿಸಿದ್ದ ಪಿಎನ್​ಪಿ ಪಕ್ಷಕ್ಕೆ ಹಿನ್ನಡೆ

    ಶಿವಸೇನಾ ಪಕ್ಷಕ್ಕೆ ಸೇರ್ಪಡೆಯಾಗಿ ಮಾತನಾಡಿದ ಮಿಲಿಂದ್ ದಿಯೋರಾ, ನಾನು ಕಾಂಗ್ರೆಸ್ ತೊರೆಯುತ್ತೇನೆ ಎಂದು ಊಹಿಸಿರಲಿಲ್ಲ. ಏಕನಾಥ್ ಶಿಂಧೆ ನಾಯಕತ್ವಕ್ಕೆ ಸೇರಲು ಇಂದು ನಾನು ಕಾಂಗ್ರೆಸ್ ಜೊತೆಗಿನ ನನ್ನ 55 ವರ್ಷಗಳ ಒಡನಾಟವನ್ನು ತೊರೆದಿದ್ದೇನೆ ಎಂದರು.

    ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಎಲ್ಲರಿಗೂ ಲಭ್ಯವಿರುತ್ತಾರೆ. ಅವರು ಸಂಪೂರ್ಣವಾಗಿ ತಳಹದಿಯಲ್ಲಿರುವ ವ್ಯಕ್ತಿ. ಪ್ರಧಾನಿ ನರೇಂದ್ರ ಮೋದಿ ಮತ್ತು ಅಮಿತ್ ಶಾ ಅವರು ದೇಶದ ಅಭಿವೃದ್ಧಿಗೆ ಸಾಕಷ್ಟು ಶ್ರಮಿಸುತ್ತಿದ್ದಾರೆ. ಆದ್ದರಿಂದ ನಾನು ಅವರೊಂದಿಗೆ ಸೇರಲು ಬಯಸುತ್ತೇನೆ ಹೇಳಿದರು.

    ಈ ಹಿಂದೆ ಮಿಲಿಂದ್ ದಿಯೋರಾ ಅವರು ಉದ್ಧವ್ ಸೇನೆ ಮತ್ತು ಕಾಂಗ್ರೆಸ್ ನಡುವಿನ ಸೀಟು ಹಂಚಿಕೆ ಮಾತುಕತೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದರು.
    ನಮ್ಮ ರಾಜಕೀಯ ಪ್ರಯಾಣದಲ್ಲಿ ಇವತ್ತಿಗೆ ಒಂದು ಪ್ರಮುಖ ಘಟ್ಟ ಮುಕ್ತಾಯವಾಗಿದೆ. ಕಾಂಗ್ರೆಸ್ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ನಾನು ರಾಜೀನಾಮೆ ನೀಡಿದ್ದೇನೆ. ಇದರೊಂದಿಗೆ ಪಕ್ಷದೊಂದಿಗೆ ನನ್ನ ಕುಟುಂಬದ 55 ವರ್ಷದ ಸಂಬಂಧ ಅಂತ್ಯಗೊಳಿಸುತ್ತಿದ್ದೇನೆ ಎಂದು ತಮ್ಮ ಎಕ್ಸ್​ ಖಾತೆಯಲ್ಲಿ ಬರೆದುಕೊಂಡಿದ್ದರು.

    ‘ನಾ ಸಾಮಿ ರಂಗ’ ರಿಲೀಸ್: ನಟ ನಾಗಾರ್ಜುನ ಹೇಳಿಕೆಗೆ ಆಶಿಕಾ ರಂಗನಾಥ್ ಪ್ರತಿಕ್ರಿಯೆ ಹೀಗಿದೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts