ಅತ್ಯಂತ ಪ್ರಬುದ್ಧ ನಾಯಕ ಹಾರ್ದಿಕ್ ಪಾಂಡ್ಯಗೆ ಐರ್ಲೆಂಡ್ ಸರಣಿಗಾಗಿ ಆಲ್ ದಿ ಬೆಸ್ಟ್: ಆಕಾಶ್ ಚೋಪ್ರಾ

Akash Chopra
Published on

ನವದೆಹಲಿ: ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಅವರು ಟೀಮ್ ಇಂಡಿಯಾ ತಂಡದಲ್ಲಿನ ಕಿರಿಯರಲ್ಲಿ ಅತ್ಯಂತ ಪ್ರಬುದ್ಧ ನಾಯಕ ಎಂದು ಭಾರತದ ಮಾಜಿ ಆರಂಭಿಕ ಆಟಗಾರ ಆಕಾಶ್ ಚೋಪ್ರಾ ಅವರು ಹೇಳಿದ್ದಾರೆ.

ಆಯ್ಕೆ ಸಮಿತಿಯು ಹಾರ್ದಿಕ್ ಪಾಂಡ್ಯ ಅವರನ್ನು ಐರ್ಲೆಂಡ್ ಟಿ20 ಪಂದ್ಯಗಳಿಗೆ ಭಾರತ ತಂಡದ ನಾಯಕರನ್ನಾಗಿ ಹೆಸರಿಸಿದ್ದು, ಬುಧವಾರ 17 ಸದಸ್ಯರ ತಂಡವನ್ನು ಆಯ್ಕೆ ಮಾಡಿದೆ. ಪ್ರವಾಸದ ವೇಳೆ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ತಂಡವನ್ನು ಮುನ್ನಡೆಸಲಿದ್ದು, ವೇಗಿ ಭುವನೇಶ್ವರ್ ಕುಮಾರ್ ಉಪನಾಯಕರಾಗಿರುತ್ತಾರೆ. ಟೀಂ ಇಂಡಿಯಾ ಜೂನ್ 26 ಮತ್ತು ಜೂನ್ 28 ರಂದು ಡಬ್ಲಿನ್‌ನಲ್ಲಿ ಎರಡು ಟಿ20 ಪಂದ್ಯಗಳನ್ನು ಆಡಲಿದೆ.

"ಹಾರ್ದಿಕ್ ಪಾಂಡ್ಯ ಬೆಳೆಯಲಿ. ಅವರು ಕೇವಲ ಒಂದು ಪಂದ್ಯ ಸರಣಿಗೆ ನಾಯಕರಾಗಿದ್ದರೂ ಸಹ, ಕಿರಿಯ ಸ್ಪರ್ಧಿಗಳ ಪೈಕಿ ಅವರು ಅತ್ಯಂತ ಪ್ರಬುದ್ಧ ನಾಯಕ ಎಂದು ನನಗೆ ಅನ್ನಿಸುತ್ತದೆ. ಟೀಮ್ ಇಂಡಿಯಾದ ಮೊದಲ ಅಸೈನ್ಮೆಂಟ್​ಗೆ ಅವರಿಗೆ ಶುಭ ಹಾರೈಸುತ್ತೇನೆ ಎಂದು ಆಕಾಶ್ ಚೋಪ್ರಾ ಕೂ ಮಾಡಿದ್ದಾರೆ.

Koo App
Rise and rise of Hardik Pandya. Even though he’s captained only one season…I feel that he’s the most matured captain amongst the younger lot of contenders. Here’s wishing him all the very best for the first assignment for Team India. #AakashVani-Aakash Chopra (@cricketaakash)16 June 2022

ಇದೇ ಸಂದರ್ಭದಲ್ಲಿ ಐಪಿಎಲ್ 2022 ರಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಅನ್ನು ಪ್ರತಿನಿಧಿಸಿದ್ದ ಬ್ಯಾಟರ್ ರಾಹುಲ್ ತ್ರಿಪಾಠಿ ಅವರು ತಮ್ಮ ಮೊದಲ ರಾಷ್ಟ್ರೀಯ ಪಂದ್ಯಕ್ಕೆ ಮುನ್ನಡಿ ಇಟ್ಟಿದ್ದಾರೆ. ಬ್ಯಾಟರ್‌ಗಳಾದ ಸೂರ್ಯಕುಮಾರ್ ಯಾದವ್ ಮತ್ತು ಸಂಜು ಸ್ಯಾಮ್ಸನ್ ಕೂಡ ತಂಡಕ್ಕೆ ಮರಳಲಿದ್ದಾರೆ.

ಭಾರತ T20I ತಂಡ: ಹಾರ್ದಿಕ್ ಪಾಂಡ್ಯ (ನಾಯಕ), ಭುವನೇಶ್ವರ್ ಕುಮಾರ್ (ಉಪನಾಯಕ), ಇಶಾನ್ ಕಿಶನ್, ರುತುರಾಜ್ ಗಾಯಕ್ವಾಡ್, ಸಂಜು ಸ್ಯಾಮ್ಸನ್, ಸೂರ್ಯಕುಮಾರ್ ಯಾದವ್, ವೆಂಕಟೇಶ್ ಅಯ್ಯರ್, ದೀಪಕ್ ಹೂಡಾ, ರಾಹುಲ್ ತ್ರಿಪಾಠಿ, ದಿನೇಶ್ ಕಾರ್ತಿಕ್ (ವಿಕೆಟ್-ಕೀಪರ್), ಯುಜುವೇಂದ್ರ ಚಾಹಲ್, ಅಕ್ಷರ್ ಪಟೇಲ್, ರವಿ ಬಿಷ್ಣೋಯ್, ಹರ್ಷಲ್ ಪಟೇಲ್, ಅವೇಶ್ ಖಾನ್, ಅರ್ಷದೀಪ್ ಸಿಂಗ್, ಉಮ್ರಾನ್ ಮಲಿಕ್.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net