ಪುರುಷರ ಜತೆ ಡೇಟಿಂಗ್​ ಮಾಡುವಂತೆ ಮಗಳಿಂದಲೇ ಬಲವಂತ! ಸಂಬಂಧದ ಗುಟ್ಟು ಬಿಚ್ಚಿಟ್ಟ ನಟಿ ಸುಚಿತ್ರಾ

Singer Suchitra
Published on

ಮುಂಬೈ: ಡೇಟಿಂಗ್​ ಮಾಡುವಂತೆ ನನ್ನ ಮಗಳೇ ಬಲವಂತ ಮಾಡಿದಳು ಎಂದು ಖ್ಯಾತ ನಟಿ ಹಾಗೂ ಗಾಯಕಿಯೊಬ್ಬರು ನೀಡಿರುವ ಹೇಳಿಕೆ ನೆಟ್ಟಿಗರನ್ನು ಹುಬ್ಬೇರಿಸುವಂತೆ ಮಾಡಿದೆ. ಅಂದಹಾಗೆ ಆ ಸೆಲೆಬ್ರಿಟಿ ಗಾಯಕಿ ಬೇರೆ ಯಾರು ಅಲ್ಲ ಸುಚಿತ್ರಾ ಕೃಷ್ಣಮೂರ್ತಿ.

ಇತ್ತೀಚೆಗೆ ನಡೆದ ಮಾಧ್ಯಮ ಸಂದರ್ಶನದಲ್ಲಿ ಮಾತನಾಡಿದ ಸುಚಿತ್ರಾ, ನನ್ನ ಮಗಳು ಕಾವೇರಿ ನನ್ನ ಹೆಸರನ್ನು ಡೇಟಿಂಗ್​​ ಸೈಟ್​ನಲ್ಲಿ ನೋಂದಣಿ ಮಾಡಿದ್ದಳು ಮತ್ತು ಪುರುಷರ ಜೊತೆ ಡೇಟಿಂಗ್​ ಮಾಡಲು ಬಲವಂತ ಮಾಡಿದಳು. ಸುಮಾರು ಒಂದು ವರ್ಷದಿಂದ ವ್ಯಕ್ತಿಯೊಬ್ಬನ ಜೊತೆ ರಿಲೇಶನ್​ಶೀಪ್​ನಲ್ಲಿದ್ದೆ. ಅದರ ಬಗ್ಗೆ ಯಾರಿಗೂ ಗೊತ್ತಿರಲಿಲ್ಲ. ಸದ್ಯ ಆ ಸಂಬಂಧ ಬ್ರೇಕಪ್​ ಆಗಿದೆ. ನಾನಿರುವು ಡೇಟಿಂಗ್​ ಮಾಡಲು ಅಲ್ಲ ಎಂಬುದನ್ನು ಮಗಳಿಗೆ ಮನವರಿಕೆ ಮಾಡಿದ್ದೇನೆ. ಕೆಲ ಪುರುಷರು ಡೇಟಿಂಗ್​ ಸೈಟ್​ನಲ್ಲಿ ವಿಚಿತ್ರ ಸಂದೇಶಗಳನ್ನು ಕಳುಹಿಸಿದ ಬಳಿಕ ಪ್ರೊಫೈಲ್ ಚಿತ್ರಗಳನ್ನು ಡಿಲೀಟ್​ ಮಾಡಿದ್ದಾಳೆ ಎಂದು ಸುಚಿತ್ರಾ ಹೇಳಿದರು.

ಅಂದಹಾಗೆ ಸುಚಿತ್ರಾ ಅವರು 1991ರಲ್ಲಿ ಮಲಯಾಳಂನ 'ಕಿಲುಕ್ಕಂಪೆಟ್ಟಿ' ಚಿತ್ರದಲ್ಲಿ ಜಯರಾಮ್ ಜೊತೆಯಲ್ಲಿ ಮೊದಲ ಬಾರಿಗೆ ನಟಿಸಿದರು ಮತ್ತು ಅದೇ ವರ್ಷದಲ್ಲಿ ತಮಿಳು ಚಿತ್ರ 'ಶಿವರಂಜನಿ' ಸಿನಿಮಾದಲ್ಲಿ ಶೀರ್ಷಿಕೆ ಹೆಸರಿನ ಪಾತ್ರವನ್ನು ನಿರ್ವಹಿಸಿದರು. ಇದಾದ ಬಳಿಕ ಶಾರೂಖ್​ ಖಾನ್​ ಅಭಿನಯದ 'ಕಭಿ ಹಾನ್ ಕಭಿ ನಾ', 'ಜಜ್ಬಾತ್', 'ಆಗ್', 'ರೋಮಿಯೋ ಅಕ್ಬರ್ ವಾಲ್ಟರ್' ಮತ್ತು ಇತ್ತೀಚೆಗೆ ಬಿಡುಗಡೆಯಾದ 'ಭೂಲ್ ಭುಲಾಯ 2' ಮತ್ತು 'ಗಿಲ್ಟಿ ಮೈಂಡ್ಸ್' ಸೇರಿದಂತೆ ಹಲವಾರು ಹಿಂದಿ ಚಲನಚಿತ್ರಗಳಲ್ಲಿ ನಟಿಸಿದ್ದಾರೆ.

ಅಂತರಾಷ್ಟ್ರೀಯ ಖ್ಯಾತಿಯ ನಿರ್ದೇಶಕ ಶೇಖರ್ ಕಪೂರ್ ಅವರನ್ನು ವಿವಾಹವಾದ ಸುಚಿತ್ರಾ ಎಂಟು ವರ್ಷಗಳ ವಿವಾಹದ ನಂತರ 2007 ರಲ್ಲಿ ವಿಚ್ಛೇದನ ಪಡೆದರು. ದಂಪತಿಗೆ ಕಾವೇರಿ ಕಪೂರ್ ಎಂಬ ಮಗಳಿದ್ದಾಳೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net