ಮಹಿಳೆಯ ಎಡವಟ್ಟಿನಿಂದ 5 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಹೊತ್ತೊಯ್ದ ಇಲಿಗಳು! ಮುಂದಾಗಿದ್ದು ರೋಚಕ

Rats
Published on

ಮುಂಬೈ: ಮನೆಯ ಸೂರಿನ ಒಳಗಿದ್ದ ಇಲಿಗಳ ಬಾಯಿಂದ ಸುಮಾರು 5 ಲಕ್ಷ ರೂ. ಮೌಲ್ಯದ 10 ತೊಲ ಬಂಗಾರವನ್ನು ವಶಕ್ಕೆ ಪಡೆದಿರುವ ವಿಚಿತ್ರ ಘಟನೆ ಮುಂಬೈನ ಗೊಕುಲಧಾಮ್​ ಕಾಲನಿಯಲ್ಲಿ ನಡೆದಿರುವುದಾಗಿ ಸಬ್​ ಇನ್ಸ್​ಪೆಕ್ಟರ್​ ಜಿ ಘಾರ್ಗೆ ಗುರುವಾರ ತಿಳಿಸಿದ್ದಾರೆ.

ಕೆಲವು ಇಲಿಗಳು ಕಸದ ರಾಶಿಯಿಂದ ಚಿನ್ನದ ಚೀಲವನ್ನು ಸೂರಿನ ಕೆಳಗೆ ತೆಗೆದುಕೊಂಡು ಹೋಗುತ್ತಿರುವ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ ನಂತರ ಪೊಲೀಸರು ಚಿನ್ನಾಭರಣಗಳನ್ನು ವಶಪಡಿಸಿಕೊಂಡಾಗ ಈ ಘಟನೆ ಬೆಳಕಿಗೆ ಬಂದಿದೆ ಎಂದು ಎಸ್​ಐ ಹೇಳಿದ್ದಾರೆ.

ಎಸ್​ಐ ಪ್ರಕಾರ, ಮಹಿಳೆಯೊಬ್ಬರು ಚಿನ್ನಾಭರಣವನ್ನು ಬ್ಯಾಂಕ್‌ಗೆ ಠೇವಣಿ ಇಡಲು ಹೋಗುತ್ತಿದ್ದಾಗ ಅದನ್ನು ವಡಾ ಪಾವ್ ಎಂದು ತಪ್ಪಾಗಿ ಭಾವಿಸಿ ಬೀದಿಯಲ್ಲಿ ಮಕ್ಕಳಿಗೆ ನೀಡಿದ್ದರು. ಬಳಿಕ ಮಕ್ಕಳು ಬ್ಯಾಗ್​ ಅನ್ನು ಕಸದ ಬುಟ್ಟಿಗೆ ಎಸೆದಿದ್ದರು.

ಇದಾದ ಬಳಿಕ ಬ್ಯಾಗ್ ಕಳೆದುಕೊಂಡಿರುವುದನ್ನು ಅರಿತು ಮಹಿಳೆ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಇಲಿಗಳು ಬ್ಯಾಗ್​ ತೆಗೆದುಕೊಂಡು ಹೋಗಿ ಸೂರಿನ ಕೆಳಗೆ ಇಟ್ಟಿದ್ದನ್ನು ನೋಡಿ ಅದನ್ನು ವಶಕ್ಕೆ ಪಡೆದುಕೊಂಡಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net