

ಬೆಂಗಳೂರು: ಅಕ್ಟೋಬರ್ 7ರಿಂದ ಸಿಲಿಕಾನ್ ಸಿಟಿಯಲ್ಲಿ ಆರಂಭವಾಗಲಿರುವ ಪ್ರೋ ಕಬಡ್ಡಿ ಲೀಗ್ಗೆ ಬೆಂಗಳೂರು ಬುಲ್ಸ್ ತಂಡ, ರಾಕೇಶ್ ಗೌಡ ಅವರನ್ನು ತಂಡಕ್ಕೆ ಬರಮಾಡಿಕೊಂಡಿದೆ.
ಈ ಸಂಬಂಧದ ವಿಡಿಯೋವನ್ನು ಬೆಂಗಳೂರು ಬುಲ್ಸ್ ಬಹುಭಾಷಿಕ ಸಾಮಾಜಿಕ ಜಾಲತಾಣ ಕೂ ವೇದಿಕೆಯಲ್ಲಿ ಹಂಚಿಕೊಂಡಿದ್ದು, ಕನ್ನಡದ ಕೂಸು ರಾಕೇಶ್ ಈಗ ನಮ್ಮವ ಎಂದು ರಾಕೇಶ್ ಗೌಡ ಅವರಿಗೆ ಸ್ವಾಗತ ಕೋರಿದೆ.
ಅಕ್ಟೋಬರ್ 7ರಂದು ಬೆಂಗಳೂರಿನ ಕಂಠೀರವ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪ್ರೋ ಕಬ್ಬಡಿ ಲೀಗ್ ಆರಂಭವಾಗಲಿದ್ದು, ಎರಡು ಹಂತಗಳಲ್ಲಿ ನಡೆಯಲಿದೆ. ಈ ಬಾರಿ ಪ್ರೇಕ್ಷಕರಿಗೂ ಆಹ್ವಾನ ಸಿಕ್ಕಿರುವುದು ಕಬ್ಚಡಿ ಆಟದ ಮೆರಗನ್ನು ಮತ್ತಷ್ಟು ಹೆಚ್ಚಿಸಲಿದೆ.
ಅಕ್ಟೋಬರ್ 7 ರ ಮೊದಲ ದಿನ ದಬಾಂಗ್ ಮತ್ತು ಯು ಮುಂಬಾ ಸೆಣಸಲಿದೆ. ಇನ್ನು ಅದೇ ದಿನ ಬೆಂಗಳೂರು ಬುಲ್ಸ್ ಮತ್ತು ತೆಲುಗು ಟೈಟನ್ಸ್ ಕಾದಾಟಕ್ಕಿಳಿಯಲಿವೆ. ಅಕ್ಟೋಬರ್ 7 ರಂದು ಮೂರು ಪಂದ್ಯಗಳು, ಅಕ್ಟೋಬರ್ 8 (ಶನಿವಾರ) ಮೂರು ಪಂದ್ಯಗಳು, ಅಕ್ಟೋಬರ್ 9 ಎರಡು ಪಂದ್ಯಗಳು ನಡೆಯಲಿದೆ. ಅಕ್ಟೋಬರ್ 7 ರ ಮೊದಲ ದಿನ ಸಂಜೆ 7.30ಕ್ಕೆ ಪಂದ್ಯ ಆರಂಭವಾಗಲಿದೆ.