More

    ಸದನದಲ್ಲಿ BMS ಸಮರ: ಅಶ್ವತ್ಥ್​ ನಾರಾಯಣ್​ ರಾಜೀನಾಮೆಗೆ ಎಚ್​ಡಿಕೆ ಆಗ್ರಹ, ಮುಂದುವರಿದ ಜೆಡಿಎಸ್​ ಪ್ರತಿಭಟನೆ

    ಬೆಂಗಳೂರು: ಬಿಎಂಎಸ್​ ಟ್ರಸ್ಟ್‌ನಲ್ಲಿ ನಡೆದಿರುವ ಅಕ್ರಮಗಳ ಬಗ್ಗೆ ಉನ್ನತಮಟ್ಟದ ತನಿಖೆ ನಡೆಸಬೇಕು. ಟ್ರಸ್ಟ್‌ ಮತ್ತು ಆ ಟ್ರಸ್ಟ್‌ನ ಎಲ್ಲಾ ಸ್ವತ್ತುಗಳನ್ನು ರಾಜ್ಯ ಸರ್ಕಾರ ಮುಟ್ಟುಗೋಲು ಹಾಕಿಕೊಳ್ಳಬೇಕು. ಉನ್ನತ ಶಿಕ್ಷಣ ಸಚಿವ ಡಾ.ಅಶ್ವತ್ಥ್​ ​ನಾರಾಯಣ್ ಅವರು ಕೂಡಲೇ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿ ಮಾಜಿ ಸಿಎಂ ಕುಮಾರಸ್ವಾಮಿ ನೇತೃತ್ವದಲ್ಲಿ ಜೆಡಿಎಸ್ ಶಾಸಕರು ಅಧಿವೇಶನದಲ್ಲಿ ಶುಕ್ರವಾರ ಧರಣಿ ಆರಂಭಿಸಿದ್ದಾರೆ.

    ನನ್ನ ಬಗ್ಗೆ ಹಗುರವಾಗಿ ಮತ್ತು ಏಕವಚನದಲ್ಲಿ ಮಾತನಾಡಿರುವ ರಾಜ್ಯ ಸರ್ಕಾರದ ಸಚಿವರೊಬ್ಬರ ಅಕ್ರಮ ಬಯಲಿಗೆಳೆಯುವುದಾಗಿ ಬುಧವಾರ ಹೇಳಿದ್ದ ಎಚ್​.ಡಿ.ಕುಮಾರಸ್ವಾಮಿ, ಅದರಂತೆ ಗುರುವಾರ ಅಧಿವೇಶನದಲ್ಲಿ ದಾಖಲೆಗಳನ್ನ ಪ್ರದರ್ಶಿಸುತ್ತಾ ನಿರಂತರವಾಗಿ ಒಂದೂವರೆ ತಾಸು ಮಾತನಾಡಿ ಬಿಎಂಎಸ್​ ಎಜುಕೇಷನಲ್​ ಟ್ರಸ್ಟ್​ ಆಸ್ತಿಯನ್ನು ಖಾಸಗಿ ಸ್ವತ್ತನ್ನಾಗಿ ಪರಿವರ್ತನೆ ಮಾಡಿಕೊಳ್ಳುವ ಮಹಾ ಹುನ್ನಾರ ನಡೆದಿದೆ. ಈ ಬಗ್ಗೆ ತನಿಖೆ ನಡೆಸಬೇಕು ಎಂದು ಆಗ್ರಹಿಸಿದ್ದರು. ಅಷ್ಟೇ ಅಲ್ಲ, ಸಚಿವ ಅಶ್ವತ್ಥ್​ ನಾರಾಯಣ್​ರ ರಾಜೀನಾಮೆಗೆ ಪಟ್ಟು ಹಿಡಿದು ವಿಧಾನಸಭೆಯಲ್ಲಿ ಅಹೋರಾತ್ರಿ ಧರಣಿಗೂ ಮುಂದಾಗಿದ್ದರು. ಇಂದು(ಶುಕ್ರವಾರ) ಕೂಡ ಬಿಎಂಎಸ್​ ಶಿಕ್ಷಣ ಟ್ರಸ್ಟ್​ನಲ್ಲಿನ ಅಕ್ರಮ ಪ್ರಕರಣ ಅಧಿವೇಶನದಲ್ಲಿ ಪ್ರತಿಧ್ವನಿಸುತ್ತಿದೆ.

    ಇನ್ನು ಸರಣಿ ಟ್ವೀಟ್​ ಮಾಡಿರುವ ಎಚ್​ಡಿಕೆ, ಬಿಎಂಎಸ್​ ಟ್ರಸ್ಟಿನಲ್ಲಿ ಕೈಗೊಂಡ ಅಕ್ರಮ ತಿದ್ದುಪಡಿಗಳನ್ನು ಸಕ್ರಮಗೊಳಿಸಲು ತಾವು ತೋರಿದ ಆತುರ, ಕಾಳಜಿ ಎಂಥದ್ದು ಎಂಬುದು ನನಗೆ ಗೊತ್ತು. ಅವುಗಳ ಅನುಮೋದನೆಗಾಗಿ ತಾವೇ ಬರೆದ ಟಿಪ್ಪಣಿಯ ಒಕ್ಕಣಿಯನ್ನು ಒಮ್ಮೆ ಓದಿಕೊಳ್ಳಿ ಅಶ್ವತ್ಥನಾರಾಯಣ ಅವರೇ. ಉನ್ನತ ಶಿಕ್ಷಣ ಸಚಿವರಾದ ನಿಮ್ಮ ಉನ್ನತ ಮಟ್ಟ ಎಷ್ಟು ಕೆಳಮಟ್ಟದಲ್ಲಿದೆ ಎಂಬುದು ಅರ್ಥವಾಗುತ್ತದೆ ಎಂದು ಕಟುವಾಗಿ ಟೀಕಿಸಿದ್ದಾರೆ.

    ಟ್ರಸ್ಟಿನಲ್ಲಿ ಸರ್ಕಾರದ ಟ್ರಸ್ಟಿಗೇ ಕೊಕ್ ಕೊಟ್ಟು, ಈ ಟ್ರಸ್ಟಿನಲ್ಲಾಗುತ್ತಿದ್ದ ಗೋಲ್ಮಾಲ್ ಬಗ್ಗೆ ಸರ್ಕಾರಿ ಟ್ರಸ್ಟಿಯಾಗಿದ್ದ ಐಎಎಸ್ ಅಧಿಕಾರಿ ಡಾ.ಮಂಜುಳಾ ಮತ್ತು ಇನ್ನೋರ್ವ ಐಎಎಸ್ ಅಧಿಕಾರಿ ಮದನ್ ಗೋಪಾಲ್ ಅವರು ಬರೆದ ಪತ್ರಗಳನ್ನು ಕಸದಬುಟ್ಟಿಗೆ ಹಾಕಿದ್ದು ಏಕೆ? ಇದರ ಹಿಂದಿನ ಹುನ್ನಾರ ಏನು ಉನ್ನತ ಶಿಕ್ಷಣ ಸಚಿವರೇ? ಎಂದು ಪ್ರಶ್ನಿಸಿದ್ದಾರೆ.

    ಇನ್ನು ಎಚ್​ಡಿಕೆ ಆರೋಪಕ್ಕೆ ಅಧಿವೇಶದಲ್ಲೇ ಗುರುವಾರ ಪ್ರತಿಕ್ರಿಯಿಸಿದ್ದ ಸಚಿವ ಅಶ್ವಥ್​ನಾರಾಯಣ್​, ಟ್ರಸ್ಟ್​ ಡೀಡ್​ ತಿದ್ದುಪಡಿಗೆ ನಾವು ಅವಕಾಶ ಕೊಟ್ಟಿದ್ದೇವೆ. ಕಾನೂನು ಪ್ರಕಾರವೇ ಕೊಟ್ಟಿದ್ದೇವೆ. ಡಾ.ದಯಾನಂದ ಪೈ ಅವರು ಈ ಸಂಸ್ಥೆ ಸಲ್ಲಿಸಿರುವ ಸೇವೆ ಮತ್ತು ಅವರ ಅಪಾರ ಶೈಕ್ಷಣಿಕ ಅನುಭವವನ್ನು ಪರಿಗಣಿಸಿ ಅವರನ್ನು ಲೈಫ್​ ಟ್ರಸ್ಟಿ ಆಗಿ ನೇಮಕ ಮಾಡಿರುವುದಾಗಿ ಡೋನರ್​ ಟ್ರಸ್ಟಿ ತಿಳಿಸಿದ್ದಾರೆ. ಡೀಡ್​ ತಿದ್ದುಪಡಿಗೆ ಕಾನೂನು ಇಲಾಖೆ ಅಭಿಪ್ರಾಯ ಪಡೆದೇ ಅನುಮೋದನೆ ನೀಡಲಾಗಿದೆ. ಎಜಿ ಅಭಿಪ್ರಾಯವನ್ನೂ ಪಡೆಯಲಾಗಿದೆ. ಈ ಡೀಡ್​ ತಿದ್ದುಪಡಿಯಿಂದ ಸರ್ಕಾರದ ಯಾವುದೇ ಅಧಿಕಾರಕ್ಕೂ ಚ್ಯುತಿ ಬರುವುದಿಲ್ಲ. ಈ ತಿದ್ದುಪಡಿ ನಂತರವೂ ಸರ್ಕಾರ ತನ್ನ ನಾಮಿನಿ ನೇಮಕ ಮಾಡುವ ಅಧಿಕಾರ ಹೊಂದಿದೆ. ಟ್ರಸ್ಟ್​ ಆಸ್ತಿಯನ್ನು ಪರಭಾರೆ ಮಾಡಲು ಸಾಧ್ಯವೇ ಇಲ್ಲ. ಯಾವುದೇ ಕಾರಣಕ್ಕೂ ಇದನ್ನು ತನಿಖೆಗೆ ಒಪ್ಪಿಸುವುದಿಲ್ಲ ಎಂದಿದ್ದರು.

    ನಾಳೆ ಬಯಲಾಗಲಿದೆ ಸಚಿವರೊಬ್ಬರ ಅಕ್ರಮ: ಏಕವಚನದಲ್ಲಿ ಮಾತಾಡಿ ಎಚ್​ಡಿಕೆಯನ್ನು ಕೆಣಕಿದ ಸಚಿವರಿಗೆ ಕಾದಿದ್ಯಾ ಗಂಡಾಂತರ?

    ಬಡತನ ಮೆಟ್ಟಿ ನಿಲ್ಲಬೇಕು ಅನ್ನುವಷ್ಟರಲ್ಲಿ ಆಟವಾಡಿದ ವಿಧಿ… ಸಾವಲ್ಲೂ ಸಾರ್ಥಕತೆ ಮೆರದ ಪಿಯು ವಿದ್ಯಾರ್ಥಿನಿ…

    30 ಎಕರೆ ಭೂಮಿ, 7 ಮನೆ, 11 ಮಕ್ಕಳಿದ್ದರೂ ತಾಯಿಗಿಲ್ಲ ಆಸರೆ… ಕಣ್ಣೀರಿಡುತ್ತಲೇ ದಯಾಮರಣ ಬೇಡಿದ ಹಾವೇರಿಯ ಅಜ್ಜಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts