ಪ್ರೋ ಕಬಡ್ಡಿ ಲೀಗ್ ವೇಳಾಪಟ್ಟಿ ಪ್ರಕಟ: ಸಿಲಿಕಾನ್​ ಸಿಟಿಯಲ್ಲಿ ಕಳೆಗಟ್ಟಲಿದೆ ಕಬಡ್ಡಿ ಕಲರವ

Pro Kabaddi
Published on

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಈ ಬಾರಿ ಪ್ರೋ ಕಬಡ್ಡಿ ಲೀಗ್ ಆರಂಭವಾಗಲಿದ್ದು, ಮಶಾಲ್ ಸ್ಪೋರ್ಟ್ಸ್ ವೇಳಾಪಟ್ಟಿಯನ್ನು ಪ್ರಕಟಿಸಿದೆ.

ಅ.7ರಿಂದ ನಂತರ 26ರವರೆಗೆ ಮೊದಲ ಹಂತದ ಪಂದ್ಯಗಳು ನಡೆಯಲಿವೆ. ನಂತರದ ಹಂತದ ಪಂದ್ಯಗಳು ಅ.28ರಿಂದ ನವೆಂಬರ್‌ 7ರವರೆಗೆ ಪುಣೆಯ ಶಿವ ಛತ್ರಪತಿ ಕ್ರೀಡಾಂಗಣದಲ್ಲಿ ಆಯೋಜನೆಯಾಗಿವೆ.

ಈ ಬಾರಿ ಪಂದ್ಯಗಳ ವೀಕ್ಷಣೆಗೆ ಪ್ರೇಕ್ಷಕರಿಗೂ ಅವಕಾಶ ಕಲ್ಪಿಸಲಾಗಿದ್ದು, ಲೀಗ್ ಮತ್ತಷ್ಟು ಕಳೆಗಟ್ಟಲಿದೆ. ಲೀಗ್‌ನ ಮೊದಲ ಮೂರು ದಿನ, ಪ್ರತಿ ದಿನಕ್ಕೆ ಮೂರು ಪಂದ್ಯಗಳು ನಡೆಯಲಿವೆ. ಪ್ರತಿ ಶುಕ್ರವಾರ ಮತ್ತು ಭಾನುವಾರವೂ ಮೂರು ಪಂದ್ಯಗಳನ್ನು ಆಡಿಸಲಾಗುತ್ತದೆ.

ಅಕ್ಟೋಬರ್ 7 ರ ಮೊದಲ ದಿನ ದಬಾಂಗ್ ಮತ್ತು ಯು ಮುಂಬಾ ಸೆಣಸಲಿದೆ. ಇನ್ನು ಅದೇ ದಿನ ಬೆಂಗಳೂರು ಬುಲ್ಸ್ ಮತ್ತು ತೆಲುಗು ಟೈಟನ್ಸ್ ಕಾದಾಟಕ್ಕಿಳಿಯಲಿವೆ. ಅಕ್ಟೋಬರ್ 7 ರಂದು ಮೂರು ಪಂದ್ಯಗಳು, ಅಕ್ಟೋಬರ್ 8 (ಶನಿವಾರ) ಮೂರು ಪಂದ್ಯಗಳು, ಅಕ್ಟೋಬರ್ 9 ಎರಡು ಪಂದ್ಯಗಳು ನಡೆಯಲಿದೆ. ಅಕ್ಟೋಬರ್ 7 ರ ಮೊದಲ ದಿನ ಸಂಜೆ 7.30ಕ್ಕೆ ಪಂದ್ಯ ಆರಂಭವಾಗಲಿದೆ.

Koo App
🚨 ℙ𝔸ℝ𝕋 𝟙 𝕆𝔽 𝕋ℍ𝔼 𝕊𝔼𝔸𝕊𝕆ℕ 𝟡 𝕊ℂℍ𝔼𝔻𝕌𝕃𝔼 🚨 📍 Shree Kanteerava Indoor Stadium, Bengaluru 📍 Shree Shiv Chhatrapati Sports Complex, Balewadi, Pune Mark your 🗓️ & gear up for the #vivoProKabaddi extravaganza! #BengalWarriors #BengaluruBulls #DabangDelhiKC #GujaratGiants #HaryanaSteelers #JaipurPinkPanthers #PatnaPirates #PuneriPaltan #TamilThalaivas #TeluguTitans #UMumba #UPYoddhas
View attached media content
-prokabaddi (@prokabaddi)21 Sep 2022
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net