

ಬೆಂಗಳೂರು: ರಾಜ್ಯದ ಸ್ಥಳೀಯಾಡಳಿತ ಸಂಸ್ಥೆಗಳ ಎಲ್ಲ ಪೌರಕಾರ್ವಿುಕರ ಕಾಯಂ ನೇಮಕಾತಿಗೆ ಸೂಕ್ತ ವ್ಯವಸ್ಥೆ ಕೈಗೊಳ್ಳಲಾಗುವುದು ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸುವ ಮೂಲಕ ಪೌರಕಾರ್ವಿುಕರ ದಿನದ ಉಡುಗೊರೆ ನೀಡಲು ಮುಂದಾಗಿದ್ದಾರೆ.
ಈ ಕುರಿತು ಟ್ವಿಟ್ ಮಾಡಿರುವ ಬೊಮ್ಮಾಯಿ, ಪೌರಕಾರ್ವಿುಕರಿಗೆ ಸಂಬಂಧಿಸಿದಂತೆ ಐಡಿಪಿ ಸಾಲಪ್ಪ ವರದಿ ಅನುಷ್ಠಾನಕ್ಕೆ ಸರ್ಕಾರ ಬದ್ಧ ಎಂದಿದ್ದಾರೆ. ಕಳೆದ ಸಂಪುಟ ಸಭೆಯಲ್ಲಿ 11 ಸಾವಿರ ಪೌರಕಾರ್ವಿುಕರ ಸೇವೆ ಕಾಯಂಗೆ ತೀರ್ವನಿಸಲಾಗಿತ್ತು. ಇನ್ನೂ 43 ಸಾವಿರ ಜನರು ಬಾಕಿ ಇದ್ದು, ಅವರ ಸೇವೆ ಕಾಯಮಾತಿಗೂ ಒತ್ತಾಯ ಕೇಳಿ ಬಂದಿದೆ.
ನೇರ ಪಾವತಿ ವ್ಯವಸ್ಥೆ: ಕಾಯಂ ಆಗಿರುವ ಪೌರಕಾರ್ವಿುಕರಿಗೆ 18 ಸಾವಿರ ರೂ. ವೇತನವಿದ್ದರೆ, ಹೊರಗುತ್ತಿಗೆಯವರಿಗೆ ಶೇ.5 ಜಿಎಸ್ಟಿ ಹಾಗೂ ಇತರೆ ಕಡಿತಗಳ ಬಳಿಕ 12 ರಿಂದ 13 ಸಾವಿರ ರೂ. ಸಿಗುತ್ತಿದೆ. ಅವರನ್ನು ಮೊದಲಿಗೆ ನೇರ ಪಾವತಿ ವ್ಯವಸ್ಥೆಗೆ ತಂದು ಹಂತ ಹಂತವಾಗಿ ಕಾಯಂ ಮಾಡಲಾಗುತ್ತದೆ ಎಂದು ಮೂಲಗಳು ಹೇಳಿವೆ.
54 ಸಾವಿರ ಸಿಬ್ಬಂದಿ: ಗುತ್ತಿಗೆ ಆಧಾರದ ಕಾರ್ವಿುಕರು ಪ್ರತಿಭಟನೆ ಮಾಡಿದ ಸಂದರ್ಭದಲ್ಲಿ ಸರ್ಕಾರ ಹಂತ ಹಂತವಾಗಿ ಅವರನ್ನು ಕಾಯಂ ಮಾಡುವ ಭರವಸೆ ನೀಡಿತ್ತು. ಒಟ್ಟಾರೆ ಇಂತಹ 54 ಸಾವಿರ ಪೌರ ಕಾರ್ವಿುಕರಿದ್ದು, ಸಂಪುಟದಲ್ಲಿ 11 ಸಾವಿರ ಜನರನ್ನು ಕಾಯಂ ಮಾಡಲು ನಿರ್ಧರಿಸಲಾಗಿತ್ತು. ಉಳಿದ 43 ಸಾವಿರ ಜನರನ್ನು ಕಾಯಂ ಮಾಡಲು ಸರ್ಕಾರ ಮುಂದಾಗಿದೆ. ಇದಲ್ಲದೆ, ಕಸ ಸಾಗಣೆ ವಾಹನಗಳ ಚಾಲಕರು ಮತ್ತು ಕ್ಲೀನರ್ಗಳನ್ನು ಸಹ ಕಾಯಂ ಮಾಡಬೇಕೆಂಬ ಒತ್ತಾಯ ಕೇಳಿ ಬಂದಿದೆ.