

ಬೆಂಗಳೂರು: ಮೊದಲಾರ್ಧದ 2 ಅಂಕಗಳ ಹಿನ್ನಡೆ ನಡುವೆಯೂ ಪುಟಿದೆದ್ದ ಪವನ್ ಕುಮಾರ್ ಶೆರಾವತ್ ನೇತೃತ್ವದ ತಮಿಳ್ ತಲೈವಾಸ್ ತಂಡ ಪ್ರೊ ಕಬಡ್ಡಿ ಲೀಗ್ 9ನೇ ಆವೃತ್ತಿಯ ತನ್ನ ಮೊದಲ ಪಂದ್ಯದಲ್ಲಿ ಗುಜರಾತ್ ಜೈಂಟ್ಸ್ ವಿರುದ್ಧ 31-31 ಅಂಕಗಳಿಂದ ಟೈ ಸಾಧಿಸುವಲ್ಲಿ ಯಶಸ್ವಿಯಾಯಿತು.
ಸಮಬಲ ಸಾಧಿಸಿದ ಪೈರೇಟ್ಸ್- ಪಲ್ಟಾನ್: ಮೊದಲಾರ್ಧದ 7 ಅಂಕಗಳ ಮುನ್ನಡೆ ಕಾಯ್ದುಕೊಳ್ಳುವಲ್ಲಿ ವಿಫಲವಾದ ಪುಣೇರಿ ಪಲ್ಟಾನ್ ತಂಡ ದಿನದ ಮೊದಲ ಪಂದ್ಯದಲ್ಲಿ 3 ಬಾರಿಯ ಚಾಂಪಿಯನ್ ಪಟನಾ ಪೈರೇಟ್ಸ್ ಎದುರು 34-34 ಅಂಕಗಳ ಸಮಬಲ ಸಾಧಿಸಿತು. ಮೊದಲಾರ್ಧದಲ್ಲಿ ಎದುರಾಳಿಯನ್ನು ತಲಾ ಒಂದು ಬಾರಿ ಅಲೌಟ್ ಮಾಡಿದ ಉಭಯ ತಂಡಗಳು ಜಿದ್ದಾಜಿದ್ದಿನ ಹೋರಾಟ ಪ್ರದರ್ಶಿಸಿದವು. 7 ಅಂಕಗಳ ಹಿನ್ನಡೆಯೊಂದಿಗೆ ದ್ವಿತೀಯಾರ್ಧ ಆರಂಭಿಸಿದ ಪೈರೇಟ್ಸ್ ರೈಡಿಂಗ್ ಹಾಗೂ ಟ್ಯಾಕಲ್ಗಳ ಮೂಲಕ ನಿರಂತರ ಅಂಕ ಕಲೆ ಹಾಕಿ 26ನೇ ನಿಮಿಷದಲ್ಲಿ ಪುಣೆ ತಂಡವನ್ನು ಆಲೌಟ್ ಮಾಡುವ ಮೂಲಕ ತಿರುಗೇಟು ನೀಡಿತು. ಕಡೇ ಕ್ಷಣದಲ್ಲಿ ರಕ್ಷಣಾತ್ಮಕ ಆಟಕ್ಕೆ ಮೊರೆ ಹೋದ ಇತ್ತಂಡಗಳು ಟೈ ಸಾಧಿಸಿದವು.