

MS Dhoni: ಡಿ.17 ದಿ ಗಬ್ಬಾ ಕ್ರೀಡಾಂಗಣದಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ನಡೆದ ಮೂರನೇ ಟೆಸ್ಟ್ ಪಂದ್ಯ ಮಳೆಯಿಂದ ಡ್ರಾನಲ್ಲಿ ಅಂತ್ಯ ಕಂಡಿತು. ಪಂದ್ಯ ರದ್ದಾದ ಬೆನ್ನಲ್ಲೇ ಟೀಮ್ ಇಂಡಿಯಾದ ಸ್ಪಿನ್ ಮಾಂತ್ರಿಕ ರವಿಚಂದ್ರನ್ ಅಶ್ವಿನ್ ಎಲ್ಲ ಮಾದರಿಯ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದರು. ಬಾರ್ಡರ್ ಗವಾಸ್ಕರ್ ಟ್ರೋಫಿ ಸರಣಿಯ ಮೂರನೇ ಟೆಸ್ಟ್ ಪಂದ್ಯದ ಕೊನೆಯಲ್ಲಿ ಅಶ್ವಿನ್ ತಮ್ಮ ನಿರ್ಧಾರಗಳನ್ನು ಮಾಧ್ಯಮದವರ ಮುಂದೆ ಅಧಿಕೃತವಾಗಿ ಪ್ರಕಟಿಸಿದರು. ಸದ್ಯ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ವಿದಾಯ ಘೋಷಿಸಿದ ಬಳಿಕ ಹಲವು ಸಂದರ್ಶನಗಳಲ್ಲಿ ಭಾಗಿಯಾದ ಆರ್. ಅಶ್ವಿನ್, ಇತ್ತೀಚಿಗೆ ನಡೆದ ಸಂಭಾಷಣೆಯಲ್ಲಿ ಮಹೇಂದ್ರ ಸಿಂಗ್ ಧೋನಿ ಕುರಿತು ಕೆಲವು ಕುತೂಹಲಕಾರಿ ಸಂಗತಿಗಳನ್ನು ಹಂಚಿಕೊಂಡಿದ್ದಾರೆ.
ಎಂ.ಎಸ್. ಧೋನಿ ಸಾರ್ವಕಾಲಿಕ ಯಶಸ್ವಿ ನಾಯಕರಲ್ಲಿ ಒಬ್ಬರಾದವರು. ಏಕೆಂದರೆ, ಮಾಹೀಗೆ ಆಟದ ಆಳ-ಅಗಲ ಚೆನ್ನಾಗಿ ಗೊತ್ತಿತ್ತು. ಇದನ್ನು ಸರಿಯಾಗಿ ತಿಳಿದಿದ್ದ ನಾಯಕರ ಪೈಕಿ 'ಕ್ಯಾಪ್ಟನ್ ಕೂಲ್' ಮೊದಲಿಗರು. ಈ ಕಾರಣಕ್ಕೆ ಇಂದು ಅವರು ವಿಶ್ವದ ಬೆಸ್ಟ್ ಕ್ಯಾಪ್ಟನ್ಗಳ ಸಾಲಿನಲ್ಲಿ ಮುಂಚೂಣಿಯಲ್ಲಿದ್ದಾರೆ. ಅತ್ಯಂತ ಯಶಸ್ವಿ ನಾಯಕರಾಗಿ ಹೊರಹೊಮ್ಮಿದ್ದಾರೆ. ಇತರೆ ತಂಡದ ನಾಯಕರಿಗಿಂತ ಧೋನಿಗೆ ಬೇಸಿಕ್ಸ್ ಚೆನ್ನಾಗಿ ತಿಳಿದಿದೆ. ಅವರಿಗೂ ಕೋಪ ಬರುತ್ತಿತ್ತು. ಅದಕ್ಕೆ ಕಾರಣ ನಾವಾಗಿದ್ದೆವು ಎಂದು ಹೇಳಿದ್ದಾರೆ.
"ಮಾಹಿ ಬೌಲರ್‌ಗೆ ಬಾಲ್ ಕೊಡುವ ಮುನ್ನ ಹತ್ತಾರು ಬಾರಿ ಯೋಚಿಸಿ ಹಸ್ತಾಂತರಿಸುತ್ತಾರೆ. ಒಬ್ಬ ಬೌಲರ್ ಮಾಡಬೇಕಾದ ಮೊದಲ ಕೆಲಸವೆಂದರೆ ಫೀಲ್ಡಿಂಗ್ ಸೆಟ್ ಮಾಡೋದು ಹಾಗೂ ಅದಕ್ಕೆ ತಕ್ಕಂತೆ ಬೌಲಿಂಗ್ ಮಾಡುವುದು. ಒಂದು ಸುಲಭವಾದ ಎಸೆತವನ್ನು ಹೊಸ ಬ್ಯಾಟರ್‌ಗೆ ಬೌಲ್ ಮಾಡಿದ್ರೆ, ಅದನ್ನು ಅವರು ಒಪ್ಪುತ್ತಿರಲಿಲ್ಲ. ನಾನೇನಾದರೂ ಹಾಗೆ ಮಾಡಿದರೆ ತಕ್ಷಣವೇ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸುತ್ತಿದ್ದರು. ಜತೆಗೆ ಬುದ್ಧಿಯೂ ಹೇಳುತ್ತಿದ್ದರು. ನಾವುಗಳು ಅವರೇಳಿದ ಮಾತನ್ನು ಗಮನಕ್ಕೆ ತೆಗೆದುಕೊಳ್ಳದೆ ಮಿಸ್ಟೇಕ್ಸ್ ಮಾಡಿದಾಗ ಕ್ಯಾಪ್ಟನ್ ತಮ್ಮ ಕೂಲ್ ಕಳೆದುಕೊಳ್ಳುತ್ತಿದ್ದರು" ಎಂದು ಅಶ್ವಿನ್ ಹೇಳಿದ್ದಾರೆ.
ಪ್ರಸ್ತುತ ತಮ್ಮ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿರುವ ಅಶ್ವಿನ್ ಮುಂಬರುವ ಐಪಿಎಲ್ 2025ರಲ್ಲಿ ಧೋನಿ ಜತೆಗೆ ಮತ್ತೆ ಚೆನ್ನೈ ಸೂಪರ್ ಕಿಂಗ್ಸ್ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಐಪಿಎಲ್ನಲ್ಲಿ ಸಿಎಸ್ಕೆ ಪರ ಮೂರನೇ ಪ್ರಮುಖ ವಿಕೆಟ್ ಟೇಕರ್ ಆಗಿ ಅಶ್ವಿನ್ ಇದ್ದಾರೆ. ಸದ್ಯ ಅಶ್ವಿನ್ ಮತ್ತು ಧೋನಿ ಜೋಡಿಯನ್ನು ಮತ್ತೊಮ್ಮೆ ಸಿಎಸ್ಕೆಯಲ್ಲಿ ನೋಡಲು ಕ್ರಿಕೆಟ್ ಅಭಿಮಾನಿಗಳು ಖುಷಿಯಾಗಿದ್ದಾರೆ,(ಏಜೆನ್ಸೀಸ್).