

ಮುಂಬೈ: ಬಾಲಿವುಡ್ ನಟಿ ಅಥಿಯಾ ಶೆಟ್ಟಿ(Athiya Shetty) ಶೀಘ್ರದಲ್ಲೇ ತಾಯಿಯಾಗಲಿದ್ದಾರೆ. ಕ್ರಿಕೆಟಿಗ ಕೆ.ಎಲ್.ರಾಹುಲ್ ಜತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಎರಡು ವರ್ಷಗಳ ನಂತರ ಅವರ ಮನೆಯಲ್ಲಿ ಮಂದಹಾಸ ಮೂಡಲಿದೆ. ದಂಪತಿ ನವೆಂಬರ್ 2024ರಲ್ಲಿ ಪಾಲಕರಾಗುವ ಸುದ್ದಿಯನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಅಥಿಯಾ ಮತ್ತು ಕೆಎಲ್ ರಾಹುಲ್ ಮಗುವಿನ ಆಗಮನಕ್ಕಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.
ಏತನ್ಮಧ್ಯೆ ಅಥಿಯಾ ಅವರ ವಿಡಿಯೋವೊಂದು ವೈರಲ್ ಆಗುತ್ತಿದೆ. ಆ ವಿಡಿಯೋದಲ್ಲಿ ನಟಿ ಅಥಿಯಾ ತನ್ನ ಬೇಬಿ ಬಂಪ್ ಅನ್ನು ತೋರಿಸುತ್ತಿರುವುದು ಕಂಡುಬಂದಿದೆ. ಅಥಿಯಾ ಮತ್ತು ಅನುಷ್ಕಾ ಇಬ್ಬರೂ ಪ್ರಸ್ತುತ ಆಸ್ಟ್ರೇಲಿಯಾದಲ್ಲಿದ್ದಾರೆ. ಅಲ್ಲಿ ಇಬ್ಬರೂ ಒಟ್ಟಿಗೆ ತಿರುಗಾಡುತ್ತಿರುವುದು ಕಂಡು ಬಂದಿದೆ.
ಇಬ್ಬರು ಪ್ರಸ್ತುತ ಆಸ್ಟ್ರೇಲಿಯಾದ ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತಿರುವ ಟೆಸ್ಟ್ ಸರಣಿಗೆ ಹಾಜರಾಗಿದ್ದಾರೆ. ಇಬ್ಬರೂ ತಮ್ಮ ಪತಿ ಕೆಎಲ್ ರಾಹುಲ್ ಮತ್ತು ವಿರಾಟ್ ಕೊಹ್ಲಿಯನ್ನು ಹುರಿದುಂಬಿಸಲು ಹೋಗಿದ್ದಾರೆ. ವಿಡಿಯೋದಲ್ಲಿ ನಟಿ ಅನುಷ್ಕಾ ಶರ್ಮಾ ಹಿಂದೆ ಅಥಿಯಾ ನಡೆಯುವುದನ್ನು ಕಾಣಬಹುದು. ಡೆನಿಮ್ ಸ್ಕರ್ಟ್‌ನೊಂದಿಗೆ ಸ್ಟ್ರೈಪ್ಡ್ ಟಾಪ್ ಅನ್ನು ಧರಿಸಿರುವ ಅಥಿಯಾ ಅವರ ಬೇಬಿ ಬಂಪ್ ಸ್ಪಷ್ಟವಾಗಿ ಗೋಚರಿಸುತ್ತದೆ.
ಮುಂದಿನ ವರ್ಷ(2025) ಅಥಿಯಾ ಮತ್ತು ಕೆಎಲ್ ರಾಹುಲ್ ಮನೆಗೆ ಪುಟ್ಟ ಅತಿಥಿ ಆಗಮಿಸಲಿದ್ದಾರೆ. ಅನುಷ್ಕಾ ಮತ್ತು ವಿರಾಟ್ ಬಗ್ಗೆ ಹೇಳುವುದಾದರೆ ಈ ದಂಪತಿ ಈ ವರ್ಷ ಎರಡನೇ ಬಾರಿಗೆ ಪಾಲಕರಾಗಿದ್ದಾರೆ. ಅನುಷ್ಕಾ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಮಗನಿಗೆ ಅಕಯ್ ಎಂದು ಹೆಸರಿಟ್ಟಿದ್ದಾರೆ. ಅನುಷ್ಕಾ ಮತ್ತು ವಿರಾಟ್ ತಮ್ಮ ಇಬ್ಬರು ಮಕ್ಕಳನ್ನು ಸಾಮಾಜಿಕ ಜಾಲತಾಣಗಳಿಂದ ದೂರವಿಟ್ಟಿದ್ದಾರೆ. ಮಕ್ಕಳಿಬ್ಬರ ಮುಖವನ್ನು ಅವರು ಇನ್ನೂ ಬಹಿರಂಗಪಡಿಸಿಲ್ಲ.(ಏಜೆನ್ಸಿಸ್)