‘ಕಲ್ಕಿ 2898’ ಸೀಕ್ವೆಲ್​ನಲ್ಲಿ ಕೃಷ್ಣನಾಗಿ ಟಾಲಿವುಡ್​ ಪ್ರಿನ್ಸ್ ಕಾಣಿಸಿಕೊಳ್ಳಲಿದ್ದಾರೆಯೇ; ನಿರ್ದೇಶಕ ನಾಗ್ ಅಶ್ವಿನ್ ಹೀಗೆಳಿದ್ದೇಕೆ? | Nag Ashwin

Untitled design (70)
Published on

ಹೈದರಾಬಾದ್​​: ಪ್ರಭಾಸ್ ಮತ್ತು ದೀಪಿಕಾ ಪಡುಕೋಣೆ ಅಭಿನಯದ 'ಕಲ್ಕಿ 2898 AD' ಸಿನಿಮಾ ಗಲ್ಲಾಪೆಟ್ಟಿಗೆಯಲ್ಲಿ ಸಖತ್​ ಸೌಂಡ್​ ಮಾಡಿದೆ. ಸದ್ಯ ಎಲ್ಲರ ಗಮನ ಅದರ ಸೀಕ್ವೆಲ್​​​​​ನತ್ತಾ ನೆಟ್ಟಿದೆ. 'ಕಲ್ಕಿ 2' ಸಿನಿಮಾದಲ್ಲಿ ಸೌತ್ ಸೂಪರ್‌ಸ್ಟಾರ್ ಮಹೇಶ್ ಬಾಬು ಶ್ರೀಕೃಷ್ಣನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಸುದ್ದಿ ಟಾಲಿವುಡ್​ ಅಂಗಳದಲ್ಲಿ ಹರಿದಾಡುತ್ತಿದೆ. ಆದರೆ ಈ ಊಹಾಪೋಹಗಳಲ್ಲಿ ಎಷ್ಟು ಸತ್ಯವಿದೆ? ಇದನ್ನು ಸ್ವತಃ ಚಿತ್ರದ ನಿರ್ದೇಶಕ ನಾಗ್ ಅಶ್ವಿನ್(Nag Ashwin) ಅವರೇ ಬಹಿರಂಗಪಡಿಸಿದ್ದಾರೆ.

ಕಲ್ಕಿ 2898 ಕ್ರಿ.ಶ'ದಲ್ಲಿ ಶ್ರೀಕೃಷ್ಣನ ಪಾತ್ರವನ್ನು ನೆರಳಿನಂತೆ ತೋರಿಸಲಾಗಿದ್ದು, ನಟ ಕೃಷ್ಣಕುಮಾರ್ ಬಾಲಸುಬ್ರಮಣ್ಯಂ ನಟಿಸಿದ್ದಾರೆ. ಆದರೆ ಈ ಸೃಜನಾತ್ಮಕ ನಿರ್ಧಾರವು ಮಹೇಶ್ ಬಾಬು ಮತ್ತು ನಾನಿ ಅವರಂತಹ ನಟರ ಹೆಸರುಗಳು ಕಲ್ಕಿ ಸೀಕ್ವೆಲ್​ನಲ್ಲಿ ಕೃಷ್ಣನ ಪಾತ್ರವನ್ನು ನಿರ್ವಹಿಸಲಿದ್ದಾರೆ ಎಂಬ ಊಹಾಪೋಹಗಳಿಗೆ ಕಾರಣವಾಯಿತು.

ಈ ಕುರಿತು ಮಾತನಾಡಿದ ನಿರ್ದೇಶಕ ನಾಗ್ ಅಶ್ವಿನ್, ಕಲ್ಕಿ ಬ್ರಹ್ಮಾಂಡದಲ್ಲಿ ಶ್ರೀಕೃಷ್ಣನ ಮುಖವನ್ನು ತೋರಿಸಲು ನಾನು ಬಯಸಲಿಲ್ಲ. ಆದರೆ ಪರಿಪೂರ್ಣವಾದ ಪಾತ್ರವಿದ್ದರೆ ಅದಕ್ಕೆ ಮಹೇಶ್ ಬಾಬು ಉತ್ತಮ ಎಂದು ನಾನು ಭಾವಿಸುತ್ತೇನೆ. ಮಹೇಶ್​​ ಬಾಬು ಶ್ರೀಕೃಷ್ಣನ ಪಾತ್ರದಲ್ಲಿ ನಟಿಸಿದರೆ ಮುಂದಿನ ಭಾಗವು ಖಂಡಿತವಾಗಿಯೂ ಬ್ಲಾಕ್ ಬಸ್ಟರ್ ಆಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಚಿತ್ರ ಭರ್ಜರಿ ಕಲೆಕ್ಷನ್ ಮಾಡುವ ವಿಶ್ವಾಸವಿದೆ. ನಟ ಮಹೇಶ್​​ ಬಾಬು ಪೌರಾಣಿಕ ಚಿತ್ರದಲ್ಲಿ ನಟಿಸಿಲ್ಲವಾದರೂ, ಅವರು ಖಲೇಜಾ ಸಿನಿಮಾದಲ್ಲಿ ದೈವಿಕ ಪಾತ್ರವನ್ನು ನಿರ್ವಹಿಸಿದ್ದಾರೆ. ಅವರ ಪಾತ್ರಕ್ಕೆ ನನ್ನ ಮೆಚ್ಚುಗೆ ಇದೆ ಎಂದು ಅಶ್ವಿನ್ ಹೇಳಿದರು. ನಾವು ಅವರನ್ನು ಕೃಷ್ಣನ ಪಾತ್ರದಲ್ಲಿ ಕಲ್ಪಿಸಿಕೊಳ್ಳಬಹುದು. ಅವರು ಆ ಪಾತ್ರಕ್ಕೆ ನ್ಯಾಯ ಒದಗಿಸುತ್ತಾರೆ ಎಂದು ನನಗೆ ಖಾತ್ರಿಯಿದೆ ಎಂದು ಹೇಳಿದ್ದಾರೆ. ಪ್ರಸ್ತುತ ಮಹೇಶ್​​ ಬಾಬು ಅವರು ಎಸ್‌.ಎಸ್.ರಾಜಮೌಳಿ ಅವರ ಮುಂದಿನ ಸಾಹಸ ಚಿತ್ರದ ಪ್ರಿಪ್ರೊಡಕ್ಷನ್‌ನಲ್ಲಿ ನಿರತರಾಗಿದ್ದಾರೆ. ಈ ಚಿತ್ರ 2025ರಲ್ಲಿ ಆರಂಭವಾಗಲಿದೆ.(ಏಜೆನ್ಸೀಸ್​​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net