21ನೇ ಶತಮಾನದ 60 ಅತ್ಯುತ್ತಮ ನಟರ ಪಟ್ಟಿಯಲ್ಲಿ ಸ್ಥಾನ ಪಡೆದ ಭಾರತೀಯ; ಶಾರೂಖ್​​, ಅಮಿತಾಭ್​ ಅಲ್ಲ.. ಮತ್ಯಾರು ಗೊತ್ತಾ? | Best Actors of 21st Century

Untitled design (67)
Published on

ಮುಂಬೈ: ದಿ ಇಂಡಿಪೆಂಡೆಂಟ್ ಇತ್ತೀಚೆಗೆ 21ನೇ ಶತಮಾನದ ಸಿನಿಮಾದ 60 ಅತ್ಯುತ್ತಮ ನಟರ ಪಟ್ಟಿಯನ್ನು(Best Actors of 21st Century) ಹಂಚಿಕೊಂಡಿದೆ. 2000ರ ನಂತರ ಬಿಡುಗಡೆಯಾದ ಟಿವಿ ಕಾರ್ಯಕ್ರಮಗಳು ಮತ್ತು ಚಲನಚಿತ್ರಗಳನ್ನು ಹೊರತುಪಡಿಸಿ ಈ ಪಟ್ಟಿಯು ಪ್ರಪಂಚದಾದ್ಯಂತದ ಪ್ರತಿಭೆಗಳನ್ನು ಒಳಗೊಂಡಿದೆ.

ಈ ಪಟ್ಟಿಯಲ್ಲಿ ಭಾರತೀಯ ನಟರೊಬ್ಬರು ಸ್ಥಾನ ಪಡೆದುಕೊಂಡಿದ್ದಾರೆ. ಅವರು ಶಾರೂಖ್ ಖಾನ್, ಅಮೀರ್ ಖಾನ್, ಅಮಿತಾಭ್​​ ಬಚ್ಚನ್ ಅಥವಾ ಯಾವುದೇ ಅನುಭವಿ ಮಹಿಳಾ ನಟಿಯರಲ್ಲ. 21ನೇ ಶತಮಾನದ ಸಿನಿಮಾದ 60 ಅತ್ಯುತ್ತಮ ನಟರ ಪಟ್ಟಿಯಲ್ಲಿ 41ನೇ ಸ್ಥಾನ ಪಡೆದುಕೊಂಡಿರುವ ನಟ ಪ್ರಸ್ತುತ ನಮ್ಮೊಂದಿಗಿಲ್ಲ. ಅವರು ಬೇರೆ ಯಾರು ಅಲ್ಲ ದಿವಂಗತ ನಟ ಇರ್ಫಾನ್ ಖಾನ್.

2020ರಲ್ಲಿ 53ನೇ ವಯಸ್ಸಿನಲ್ಲಿ ನಿಧನರಾದ ಇರ್ಫಾನ್, ಆಸಿಫ್ ಕಪಾಡಿಯಾ ಅವರ 2001ರ ಸಿನಿಮಾ ದಿ ವಾರಿಯರ್‌ನಲ್ಲಿ ನಟಿಸುವ ಮೂಲಕ ಎಲ್ಲರ ಗಮನ ಸೆಳೆದರು. ಆದರೆ ಇದಕ್ಕೂ ಮುನ್ನ 1980ರ ದಶಕದ ಉತ್ತರಾರ್ಧದಿಂದ 2000ರ ದಶಕದ ಆರಂಭದವರೆಗೆ ಒಂದು ದಶಕಕ್ಕೂ ಹೆಚ್ಚು ಕಾಲ ಬಣ್ಣದ ಲೋಕದಲ್ಲಿ ತಮ್ಮ ಸ್ಥಾನಕ್ಕಾಗಿ ಹೋರಾಡಿದ್ದಾರೆ. ಅದರಲ್ಲಿ ಇರ್ಫಾನ್ ಅವರ ತವರು ರಾಜ್ಯವಾದ ರಾಜಸ್ಥಾನದ ಯೋಧನನ್ನು ಚಿತ್ರಿಸುವ "ಸ್ಟೋಯಿಕ್ ಫೋರ್ಟಿಟ್ಯೂಡ್" ಅನ್ನು ದಿ ಇಂಡಿಪೆಂಡೆಂಟ್ ಶ್ಲಾಘಿಸಿದೆ.

ಇರ್ಫಾನ್ ಖಾನ್ ಅವರ ಚಲನಚಿತ್ರಗಳು ಹಾಲಿವುಡ್‌ನಲ್ಲಿ ಮಾತ್ರವಲ್ಲದೆ ಬಾಲಿವುಡ್‌ನಲ್ಲಿಯೂ ವಿಶಿಷ್ಟ ಪ್ರಭಾವವನ್ನು ಬೀರಿದೆ. ಅವರದ್ದೇ ಆದ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ನ್ಯೂಯಾರ್ಕ್, ಹೈದರ್, ಹಿಂದಿ ಮೀಡಿಯಂ, ಲೈಫ್ ಇನ್ ಎ ಮೆಟ್ರೋ, ಕಾರವಾನ್, ಮಕ್ಬೂಲ್, ಅಂಗ್ರೇಜಿ ಮೀಡಿಯಂ, ದಿ ಲಂಚ್ ಬಾಕ್ಸ್, ರೋಗ್ ನಂತಹ ಅನೇಕ ಶಕ್ತಿಶಾಲಿ ಚಿತ್ರಗಳೊಂದಿಗೆ ಜನರಿಗೆ ಮರೆಯಲಾಗದ ಅನುಭವವನ್ನು ನೀಡಿದರು. ಇರ್ಫಾನ್‌ಗೆ 2018 ರಲ್ಲಿ ಕ್ಯಾನ್ಸರ್ ಇರುವುದು ಪತ್ತೆಯಾಯಿತು ಇದೇ ಕಾರಣದಿಂದ 2020ರಲ್ಲಿ ನಿಧನರಾದರು.(ಏಜೆನ್ಸೀಸ್​​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net